ವಾದದ ಹೇಮ ಸ್ವಯ ಹೇಮವ ಕೂಡಿ
ವೇಧಿಸಲಿಕ್ಕೆ ವಿಭೇದವಾದುದಿಲ್ಲ.
ಶಾಸ್ತ್ರಂಗಳ ಶಬ್ದದ ಯುಕ್ತಿ, ತನ್ನ ಸ್ವಯದ ಸ್ವಾನುಭವದ ಕೂಟ.
ಇಂತೀ ಉಭಯವೇಕವಾದಲ್ಲಿ ನಡೆನುಡಿ ಸಿದ್ಧಾಂತ
ಆತ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ.
Art
Manuscript
Music
Courtesy:
Transliteration
Vādada hēma svaya hēmava kūḍi
vēdhisalikke vibhēdavādudilla.
Śāstraṅgaḷa śabdada yukti, tanna svayada svānubhavada kūṭa.
Intī ubhayavēkavādalli naḍenuḍi sid'dhānta
āta cannabasavaṇṇapriya bhōgamallikārjunaliṅgavu tānāgi.