ವಾರಿ ವಾಯುವಿನ ಸಂಗದಿಂದ ಕಲ್ಲಾದ ಮತ್ತೆ
ನೋಡ ನೋಡ ಕರಗಲೇತಕ್ಕೆ?
ವಸ್ತುವಿನ ಚಿತ್ತ ವೇಧಿಸಿದ ಮತ್ತೆ
ಅರಿದು ಮರೆದೆನೆಂಬುದು ಅದೇತಕ್ಕೆ?
ಚಿಪ್ಪಿನಲ್ಲಿ ಅಪ್ಪು ನಿಂದು ಹೆಪ್ಪಳಿಯದೆ ದೃಷ್ಟವ ಕಂಡ ಮತ್ತೆ
ಚಿತ್ತ ವಸ್ತುವಿನಲ್ಲಿ ಎಯ್ದಿದ ಮತ್ತೆ
ದೃಷ್ಟ ಉಭಯದಂತಿರಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.