Index   ವಚನ - 99    Search  
 
ಸೂತಕಂಗಳಿಂದ ಜನನ, ಪ್ರಸೂತಕಂಗಳಿಂದ ಮರಣ. ಕ್ರೀಯಿಂದ ನಿಃಕ್ರೀಯ ಜನನ, ನಿಃಕ್ರೀಯಿಂದ ಕ್ರೀಗೆ ಜನನ. ಉಭಯದ ಪ್ರೇತಸೂತಕವಳಿದು ಆತ್ಮಂಗೆ ಅರಿವಾದಲ್ಲಿ ಮುಂದಣ ಕುರುಹು ನಿಃಪತಿಯಾಯಿತ್ತು. ಅದು ಆದಿಯ ವೃಕ್ಷ, ಅನಾದಿಯ ಬೀಜ. ವಿಭೇದವಿಲ್ಲದ ಭೂಮಿಯಲ್ಲಿ ನಷ್ಟವಾಯಿತ್ತು. ಇದ ಸಾಧಿಸಿದನಭೇದ್ಯ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ ತಾನಾದ ಕಾರಣ.