Index   ವಚನ - 2    Search  
 
ಇಷ್ಟಪ್ರಸಾದವ ದೃಷ್ಟಕ್ಕೆ ಅರ್ಪಿಸಿಕೊಂಡೆಹೆನೆಂಬನ್ನಕ್ಕ ದೃಷ್ಟವೂ ಇಲ್ಲ, ಇಷ್ಟವೂ ಇಲ್ಲ. ಉಭಯವಿಲ್ಲಾಗಿ ತೃಪ್ತಿಗೆ ಮುಟ್ಟದ ಅರ್ಪಿತವ ಇದನಾರು ಬಲ್ಲರು. ಮುಟ್ಟದಲ್ಲಿಯೆ ಸವಿಸಾರಂಗಳ ಭೇದವ ದೃಷ್ಟ ಮುಂತಾಗಿ ಅರ್ಪಿತದಲ್ಲಿಯೆ ಸವಿಸಾರಂಗಳನರಿದು ಅರ್ಪಿಸಬಲ್ಲಡೆ ಅರ್ಪಿತಸೂತಕ ಅಲ್ಲಿಯೆ ನಷ್ಟ. ಈ ಗುಣ ದೃಷ್ಟಪ್ರಸಾದಿಯ ಕಟ್ಟಿನ ಭೇದ. ದಹನ ಚಂಡಿಕೇಶ್ವರಲಿಂಗವು ತಾನಾದವನ ಸಂಗದ ಕೂಟ.