Index   ವಚನ - 5    Search  
 
ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ. ಅದೆಂತೆಂದಡೆ: ಗುರು ಭೇದ್ಯವು, ಲಿಂಗ ಅಭೇದ್ಯವು. ಜಂಗಮಪ್ರಸಾದವ ಲಿಂಗಕ್ಕೆ ಕೊಡಲಿಲ್ಲ. ಅದೆಂತೆಂದಡೆ: ಜಂಗಮವು ಚತುರ್ವಿಧಫಲಪದಂಗಳಲ್ಲಿ ರಹಿತವು. ಲಿಂಗವು ಚತುರ್ವಿಧಫಲಪದಂಗಳಿಗೆ ವಿರಹಿತವು. ಇಂತೀ ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ ತಾ ಕೊಂಡೆಹೆನೆಂಬಲ್ಲಿ ತ್ರಿವಿಧಪ್ರಸಾದವಾಯಿತ್ತು. ಇಂತೀ ತ್ರಿವಿಧಪ್ರಸಾದವ ತಾನರಿದು ಕೊಂಬಲ್ಲಿ ಗುರುವಿಂಗೆ ತನುವನಿತ್ತು, ಲಿಂಗಕ್ಕೆ ಮನವೆರಡಿಲ್ಲದೆ ಜಂಗಮಕ್ಕೆ, ತ್ರಿವಿಧಮಲಕ್ಕೆ ಕಟ್ಟುಮೆಟ್ಟಿಲ್ಲದೆ ಅಂಗವರತು ಇಂದ್ರಿಯಂಗಳಿಚ್ಫೆಯಿಲ್ಲದೆ ಸಂದುಸಂಶಯ ನಿವೃತ್ತಿಯಾದವಂಗಲ್ಲದೆ ತ್ರಿವಿಧಪ್ರಸಾದ ಏಕೀಕರ ಸಾಧ್ಯವಲ್ಲ. ದಹನ ಚಂಡಿಕೇಶ್ವರಲಿಂಗಕ್ಕೆ ಕೊಟ್ಟು ಕೊಳ್ಳಬಾರದು.