Index   ವಚನ - 8    Search  
 
ನಿಷ್ಠೆಯಿಂದ ಕೊಂಬುದು ದ್ರವ್ಯಪ್ರಸಾದ. ತೃಪ್ತಿಯಿಂದ ಭೋಗಿಸುವದು ಕರುಣಪ್ರಸಾದ. ಅರಿವಿನ ಮುಖದಿಂದ ಕುರುಹಳಿದು ಕೊಂಬುದು ಎರಡಳಿದ ಪ್ರಸಾದ. ಆ ಪ್ರಸಾದ ಮಹಾಪ್ರಸಾದವಾಗಲಾಗಿ ವರುಷ ವರುಷಕ್ಕೆ ಇದಿರೆಡೆಗೆಟ್ಟಂತೆ ಉರಿ ಉರಿಯೆಡೆ ಸುಡಲಿಲ್ಲದ ತೆರನಂತೆ ಮುಕುರ ಮುಕುರಕ್ಕೆ ಕಳೆಬೆಳಗೊಡಗೂಡಿದಂತೆ. ಇಂತೀ ಪ್ರಸಾದ ಅಂಗವಾದ ನಿರಂಗಿಯ ತೆರ. ದಹನ ಚಂಡಿಕೇಶ್ವರಲಿಂಗವೆ ಅಂಗವಾದವನ ಸಂಗ.