ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ
ನೆನೆನೆನೆದು ಸುಖಿಯಾಗಿ ಆನು ಬದುಕಿದೆನಯ್ಯಾ,
ಅದೇನು ಕಾರಣ ತಂದೆಯೆಂದರಿದೆನಯ್ಯಾ,
ಎನ್ನ ಕಾರಣ ತಂದೆಯೆಂದರಿದೆನಯ್ಯಾ,
ಅರಿದರಿದು, ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು
ಕಣ್ದೆರೆದೆನಯ್ಯಾ, ಕೂಡಲ ಸಂಗಮದೇವಾ.
Hindi Translationप्रभो, तुम अपने शरण को मर्त्य में लाये,
मैं सदा नामस्मरण करता सुख से जीता रहा ।
मैं जान गया, क्यों लाये,
मैं जान गया, मेरे लिए ही लाये,
यह जानकर, तव शरण का आचरण देख,
मैंने अपनी आँखें खोलीं कूडलसंगमदेव ॥
Translated by: Banakara K Gowdappa
English Translation O Lord, because you brought
Your Śaraṇa to this world,
I have been blest
Remembering him without a pause,
And so I am saved!
What is the cause you brought him here?
I know the cause: for mine own sake,
I've grown in knowledge, and have seen
Your Śaraṇa doing all
That needs be done.... And now my eyes
Are opened, Kūḍala Saṅgama Lord!
Translated by: L M A Menezes, S M Angadi
Tamil Translationஐயனே, உம் தொண்டனை இவ்வுலகிற்குத் தருவித்தாய்,
அதனை எண்ணியுவந்து நான் வாழ்ந்தேன் ஐயனே.
எதனால் வருவித்தீரென அறிந்தேன் ஐயனே,
எதன் பொருட்டு வருவித்தீரென அறிந்தேன் ஐயனே,
அறிந்தறிந்து, உம் தொண்டன் ஒழுகு மொழுகலாற்றைக் கண்டு,
கண் திறந்தேன் ஐயனே, கூடலசங்கமதேவனே.
Translated by: Smt. Kalyani Venkataraman, Chennai
Telugu Translationఅయ్యా: నీ శరణుని మర్త్యలోకమునకు
పంపుట తెలిసి తెలిసి నే బ్రతికెదనయ్యా,
ఏటికి పంపితివో ఎఱిగితినయ్యా
నా జన్మ కారణుడవని తెలిసితినయ్యా,
తెలిసి తెలిసి నీ శరణుడాచరించు ఆచరణ
తెలిసి కన్ను విప్పి తినయ్యా! కూడల సంగయ్యా!
నీ శరణుని మర్త్యలోకమునకుTranslated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪಿಂಡಜ್ಞಾನಸ್ಥಲವಿಷಯ -
ಪುನರ್ಜನ್ಮ
ಶಬ್ದಾರ್ಥಗಳುಮರ್ತ್ಯ = ಭೂಲೋಕ;
ಕನ್ನಡ ವ್ಯಾಖ್ಯಾನಶಿಲಾದ ಮೊದಲಾಗಿ ವೃಷಭನೆ ಕೊನೆಯಾದ ಬಸವಣ್ಣನವರ ಹಿಂದಿನ ಆರು ಜನ್ಮಗಳೂ ದಿವ್ಯವಾದುವಾಗಿದ್ದು-ಅಲ್ಲಿ ಅವರು ಶಿವನಿಗೆ ಮುಖಾಮುಖಿಯಾಗಿದ್ದುದರಿಂದ-ಆ ಪ್ರಭಾವದಿಂದ ಶಿವನ ಸೇವೆಯಲ್ಲಿ ತೊಡಗಿರುವುದು ಅವರಿಗೆ ನಿರಂತರ ಸಹಜವಾಗಿಯೇ ಇತ್ತು. ಆದರೆ ಅವರ ಏಳನೆಯದಾದ ಬಸವಜನ್ಮವು ಮರ್ತ್ಯಜನ್ಮವಾದುದರಿಂದ-ಈ ಮರ್ತ್ಯಕ್ಕೆ ಸಹಜವಾದ ದಂದುಗದ ಕಾರಣ-ಶಿವನಿಗೂ ತಮಗೂ ಇರುವ ಸ್ವಾಮಿಭೃತ್ಯ ಸಂಬಂಧವನ್ನು ರೂಢಿಸಿಕೊಳ್ಳುವುದು ಅಷ್ಟು ಸುಲಭವಾಗಲಿಲ್ಲ. ಅಂಥ ವಿಷಮ ಪರಿಸ್ಥಿತಿಯಲ್ಲಿ ಆ ಶಿವನೇ ಶರಣರ ರೂಪಿನಲ್ಲಿ ಈ ಮರ್ತ್ಯಕ್ಕೆ ಬಂದು ತನಗೆ ದಾರಿದೀಪವಾಗಿರುವರೆಂಬುದನ್ನು ತಮ್ಮ ಪೂರ್ವಜನ್ಮಗಳ ಶಿವಸೇನೆಯ ಫಲವಾಗಿ ಬಸವಣ್ಣನವರು ಕಂಡುಕೊಂಡರು.
ಯಾವ ಜೀವವಾಗಲಿ ತನ್ನನ್ನು ಅವರಿಸಿರುವ ಈ ಮರ್ತ್ಯದ ಕಾವಳದಿಂದ ಕಂಗೆಡಬೇಕಾಗಿಲ್ಲ-ಅಲ್ಲಿ ಅದನ್ನು ಉದ್ಧರಿಸಲು ಸಾಕ್ಷಾತ್ ಶಿವಸ್ವರೂಪಿಗಳಾದ ಶರಣರಿದ್ದಾರೆ-ಅವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆದರೆ ದಾರಿತಪ್ಪುವುದಿಲ್ಲ. ಈ ನಿರ್ಣಯಕ್ಕೆ ಬಂದ ಬಸವಣ್ಣನವರು ಅಸಮಾನ ಜ್ಞಾನಧೀರರಾಗಿ-ಮಾನವನಲ್ಲಿ ಮಹಾದೇವನನ್ನು ಉಪಾಸಿಸಿದರು.
ಜೀವರನ್ನು ಈ ಮರ್ತ್ಯಕ್ಕೆ ತಂದುದರಿಂದ ಶಿವನು ಜೀವರಿಗೆ ತಂದೆಯೆಂಬುದು ನಿಜವಾದರೂ ಅವರನ್ನು ಈ ಮರ್ತ್ಯದಲ್ಲಿ ಪ್ರಜ್ಞಾವಂತರನ್ನಾಗಿ ಪರಿವರ್ತಿಸಿದ ಶಿವಶರಣರೇ ಜೀವರಿಗೆ ನಿಜವಾದ ತಂದೆಯಂತಾಗುವರು. ಅವರಿಗೆ ಶಿವಾಚರಣೆಯನ್ನೂ ಶಿವಜ್ಞಾನವನ್ನೂ ಕಲಿಸಲು ಶಿವನೇ ತನ್ನ ಪ್ರತಿನಿಧಿಯನ್ನಾಗಿ ಶರಣರನ್ನು ಕಳಿಸಿರುವನು.
ಚೆನ್ನಾಗಿ ಇದೆ ಬಸವ ಧರ್ಮ ಜೆಗತಿಗೆ ಒಂದು ಪ್ರಸಿದ್ದ ಧರ್ಮ ಗುರು ಬಸವಣ್ಣನವರನ್ ನೇನೆಸಿ ಕೊಂಡರೆ ಸಾಕು ಯಾವ ಕಷ್ಟ ಬರುವದಿಲ್ಲ ಎಂದು ಹೇಳಿ ನನ್ನ್ ಮನಸ್ಸು ಹೇಳುತ್ತೆ
  Mahesh Patil
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.