Hindi Translationचूल्हा जल उठे तो सह सकते हैं
धरती जल उठे तो क्या सह सकते हैं?
कूल जल पी ले, काँटों का घेरा उपज खा ले,
नारी निज गृह में चोरी कर ले,
माता का दूध विष बन मार डाले,
तो मैं किसे दोष दूँ, कूडलसंगमदेव ॥
Translated by: Banakara K Gowdappa
English Translation One still can stand where burnt the hearth :
But could you stand where burnt the earth ?
When the bank, thirsty, drinks the stream,
And the fence turns around to graze,
The wife at home to thievish ways,
And mother's milk to poisonous cream-
And all seems part of a crazy dream-
To whom should I complain, O Lord ?
Translated by: L M A Menezes, S M Angadi
Tamil Translationஉலைபற்றிஎரியின் தாளலாமன்றி
உலகம் பற்றிஎரியின் தாளவியலுமோ?
ஏரிநீரையருந்தின், வேலி பயிரினைமேயின்
கிழத்தி தன்னில்லிலே களவாடின்,
தாய்முலைப்பால் நஞ்சாகிக் கொன்றால்
இன்னுமாரிடம் முறையிடுவேன், கூடலசங்கமதேவனே.
Translated by: Smt. Kalyani Venkataraman, Chennai
Telugu Translationపొయ్యి రగిలి మండ నిలువదగుగాని
భూమి రగిలి మండ నిలువరాదు;
ఏరె నీరు మ్రింగ; చేనె కంచె మేయ
నారి తనయింట తానే దొంగలింప
తల్లి చనుబాలే నంజొచు చంపిన
దూరు టెవ్వరినో యిక కూడల సంగమదేవా!
Translated by: Dr. Badala Ramaiah
Urdu Translationجَلتےجَلتےجوبھڑکنے لگے چولھا اپنا
گھرسےگھبرا کے نکل جاؤں یہ ممکن ہی نہیں
ہاںمگرجب یہ زمیںخود ہی سُلگ اٹھےگی
میں کہاں بھاگ کےجاؤں گا کہاں ٹہروں گا
کوڈلا سنگما دیوا توبتادے مجھ کو
میں کہاں جاؤں کہوں حرفِ شکایت کس سے
جبکہ خود بند ہی برسا ہوا پانی پی لے
جبکہ خود باڑہی فصلوں کو بنالے لقمہ
جبکہ خود گھرکی ہراک چیزچُرالےعورت
اور جب زہرمیں تبدیل ہوشیرِمادر
Translated by: Hameed Almas
ಸ್ಥಲ -
ಸಂಸಾರಹೇಯಸ್ಥಲವಿಷಯ -
ರಕ್ಷಕ
ಶಬ್ದಾರ್ಥಗಳುಕೆಯ್ಯ = ಹೊಲ; ಧರೆ = ಭೂಮಿ; ನಂಜು = ವಿಷ;
ಕನ್ನಡ ವ್ಯಾಖ್ಯಾನದೇವರಿಲ್ಲದೆ ಬೇರೆ ರಕ್ಷಕರಿಲ್ಲ
ಮನೆಯಲ್ಲಿ ಒಲೆಯ ಬೆಂಕಿಯನ್ನು ಸಹಿಸಿಕೊಂಡಿರಬಹುದು; ಸಹಿಸಲಸಾಧ್ಯವಾದರೆ ದೂರ ಸರಿದು ನಿಂತುಕೊಳ್ಳಬಹುದು. ಆದರೆ ಇಡೀ ಭೂಮಿಯೇ ಧಗಧಗಿಸಿ ಉರಿದರೆ ಸಹಿಸಿಕೊಳ್ಳುವ ಮಾತಿರಲಿ, ದೂರ ಸರಿದು ಕೊಳ್ಳಲು ಸ್ಥಳವೆಲ್ಲಿ? ಏರಿಯನ್ನು ಹಾಕುವುದು ನೀರನ್ನು ಒಂದು ಕಡೆ ಶೇಖರಿಸಿ ಬಯಸಿದಾಗ ಬಳಸಿಕೊಳ್ಳುವುದಕ್ಕೆ. ಆದರೆ ನೀರನ್ನು ಸಂರಕ್ಷಿಸಬೇಕಾದ ಏರಿಯೇ ನೀರನ್ನು ಕುಡಿದು ಹಾಕಿದರೆ ಗತಿಯೇನು? ಅದೇ ರೀತಿ ಹೊಲದ ಸುತ್ತ ಬೇಲಿಯನ್ನು ಹಾಕುವುದು ಪ್ರಾಣಿಗಳು ಬೆಳೆಯನ್ನು ಹಾಳುಮಾಡಿಯಾವು ಎಂಬ ಭಯದಿಂದ. ಆದರೆ ಸಂರಕ್ಷಣೆಗಾಗಿ ನಿರ್ಮಿಸಿದ ಬೇಲಿಯೇ ಬೆಳೆಯನ್ನು ತಿಂದು ಹಾಕಿದರೆ ಗತಿಯೇನು? ಮನೆಯ ಆಗು ಹೋಗುಗಳನ್ನು, ಸುಖ-ದುಃಖಗಳನ್ನು ನೋಡಿಕೊಳ್ಳುವುದು ಮನೆಯಲ್ಲಿರುವ ಸ್ತ್ರೀಯಳ ಕರ್ತವ್ಯ. ಅಂಥವಳೇ ಮನೆಯಲ್ಲಿರುವ ವಸ್ತುಗಳನ್ನು ಅಪಹರಿಸಲು (ಕದಿಯಲು) ಆರಂಭಿಸಿದರೆ ಗತಿಯೆಂತು? ತಾಯಿಯ ಮೊಲೆಯ ಹಾಲು ಮಗುವಿನ ಶರೀರವನ್ನು ಪೋಷಿಸುವ ಶಕ್ತಿ ಹೊಂದಿದೆ. ಆದರೆ ಶರೀರ ಪೋಷಕವಾಗಬೇಕಾದ ಹಾಲೇ ವಿಷವಾಗಿ ಶರೀರ ನಾಶವಾದರೆ ಯಾರನ್ನು ದೂರುವುದು? ಯಾರಾದರೂ ನಮಗೆ ಅಪಕಾರವೆಸಗಿದಾಗ ಅವರ ಬಗ್ಗೆ ದೂರನ್ನು ತೆಗೆದುಕೊಂಡು ಹೋಗುವುದು ನಮ್ಮ ಹಿತವನ್ನು, ಕಲ್ಯಾಣವನ್ನು ಬಯಸುವವರ ಹತ್ತಿರವೇ ತಾನೇ? ಅಂಥವರೇ ನಮ್ಮ ಹಿತಕ್ಕೆ ಧಕ್ಕೆಯನ್ನುಂಟುಮಾಡುವವರಾದರೆ ದೂರನ್ನು ತೆಗೆದುಕೊಂಡು ಹೋಗುವುದಾದರೂ ಇನ್ನಾರ ಹತ್ತಿರ? ದೇವರು ನಮ್ಮ ಸಂರಕ್ಷಕ, ನಮ್ಮ ಹಿತವನ್ನು ಬಯಸುವವನು. ಅವನೇ ಮೇಲೆ ತಿಳಿಸಿದಂತೆ ಭಕ್ಷಕ, ಅಹಿತಕಾರಿಯಾದರೆ ಇನ್ನಾರನ್ನು ದೂರಬೇಕು ಯಾರ ಹತ್ತಿರ ದೂರನ್ನು ತೆಗೆದುಕೊಂಡು ಹೋಗಬೇಕು? ಎಂದು ದೇವರನ್ನೇ ಪ್ರಶ್ನಿಸುತ್ತಿದ್ದಾರೆ ಇಲ್ಲಿ ಬಸವಣ್ಣನವರು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.