Hindi Translationमैं अकेला, जलानेवाले पाँच हैं ।
ऊपर घोर अग्नि, रहना कठिन है!
वन्य वृषभ को व्याघ्र ले जाय,
तो रक्षा नहीं करनी है, कूडलसंगमदेव ?
Translated by: Banakara K Gowdappa
English Translation I am but one; but five
That keep me in the fire !
A mighty blaze besides,
So that I hardly stand !
When a tiger is carrying off
A forest bull, should you
Not rescue it, O Lord
Kūḍala Saṅgama ?
Translated by: L M A Menezes, S M Angadi
Tamil Translationநானொருவன், சுடுவரைவர்
மேலே அழல்மிகுதி நிற்கவியலுமோ,
காட்டுப்பசுவை புலி கொண்டேகின்
விடுவிக்கலாகாதோ, கூடல சங்கம தேவனே?
Translated by: Smt. Kalyani Venkataraman, Chennai
Telugu Translationనేనొకడ కాలు రేవురు పైన మంటలెగ
సె; నిలువరాదు కాడు బసవని పులిగొనిపోవ;
చూడదగునే కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಸಂಸಾರಹೇಯಸ್ಥಲವಿಷಯ -
ಇಂದ್ರಿಯಗಳು
ಶಬ್ದಾರ್ಥಗಳುಕಿಚ್ಚು = ಬೆಂಕಿ; ಘನ = ಶ್ರೇಷ್ಠ;
ಕನ್ನಡ ವ್ಯಾಖ್ಯಾನಜೀವನು ಒಬ್ಬಂಟಿಗ-ಅವನನ್ನು ಬಾಧಿಸುವ ಕ್ಲೇಶಗಳು ಐದು : ಅವಿದ್ಯೆ-ಅಸ್ಮಿತೆ-ರಾಗ-ದ್ವೇಷ-ಅಭಿನಿವೇಶ, ಇವೈದೂ ಮನವೆಂಬ ನೀರು ತುಂಬಿರುವ ದೇಹವೆಂಬ ಕಡಾಯಿಯ ಅಡಿಯಲ್ಲಿ ಉರಿಯಾಗಿ ಉರಿದು ಒಳಗಿರುವ ಜೀವನನ್ನು ಕುದಿಸುತ್ತಿವೆ.
ಆವಿದ್ಯಾಕ್ಲೇಶವೆಂದರೆ ನಿಜವನ್ನು ಮರೆಮಾಚಿ ವಿಜೃಂಭಿಸುವ ನಾಮರೂಪಾತ್ಮಕವಾದ ಮಾಯೆ, ಈ ಮಾಯೆಯೊಳಗೆ ದೇಹವೇ ತಾನೆಂದು ಭ್ರಮಿಸುವುದು ಅಸ್ಮಿತೆ,ಅಸ್ಮಿತಾಭಾವದಿಂದ ಇಂದ್ರಿಯ ವಿಷಯಗಳನ್ನು ಅನುಭವಿಸಲು ತಹತಹಿಸುವುದೇ ರಾಗ, ಈ ರಾಗವೀಡೇರಲು ಅಡ್ಡಿಯಾದರೆ ಉಂಟಾಗುವ ಅಸಹನಸ್ಥಿತಿಯೇ ದ್ವೇಷ-ಈ ಎಲ್ಲ ಆಮಿಷ ವರ್ತುಲವನ್ನು ತ್ಯಜಿಸಲಾರದ ಲಂಪಟತೆಯೇ ಅಭಿನಿವೇಶ.
ಅಂದರೆ ಸುಳ್ಳನ್ನು ನಿಜವೆನ್ನುವ, ಸುಳ್ಳನ್ನೇ ತನ್ನ ಸರ್ವಸ್ವವೆನ್ನುವ, ಆ ಸುಳ್ಳನ್ನೇ ಒಳಗೊಳ್ಳುವ,ಸುಳ್ಳಿಗೆ ಅಡ್ಡಿಯಾದುದನ್ನೆಲ್ಲಾ ದ್ವೇಷಿಸುವ, ಸುಳ್ಳಿಗೇ ಬಿಡಿಸಲಾರದ ಬಂಧದಲ್ಲಿ ಬೆಸೆದುಕೊಂಡಿರುವ-ಈ ಐದು ಸ್ಥಿತಿಗಳೇ ಶಿವದತ್ತ ಪಯಣಹೊರಟ ಜೀವನನ್ನು ಸುಟ್ಟು ಬೂದಿಮಾಡುತ್ತಿರುವ ಕುಚಿತಾಗ್ನಿಗಳು.
ಇಂಥ ಕ್ಲೇಶಾಗ್ನಿಗಳ ಮೇಲೆ ಶಿವನೊಲಿಯದ ಮಹಾಗ್ನಿಯೂ ಸೇರಿ ದಾವಾಗ್ನಿಯಾಗಿ ಆವರಿಸಿ ಬರುತ್ತಿದೆಯೆಂದೂ-ಅಲ್ಲದೆ ಮೃತ್ಯುವೆಂಬ ಹುಲಿ ಮೇಲೆ ಬಿದ್ದು ಕೊರಳಿಗೆ ಬಾಯಿಹಾಕಿ ಎಳೆದೊಯ್ಯುವಷ್ಟು ಹತ್ತಿರವಾಗಿದೆಯೆಂದೂ-ಅತ್ತ ಹುಲಿ ಇತ್ತ ಬೆಂಕಿಯೆಂಬಂಥ ಸಂಕಟವನ್ನು ತಾಳಲಾರನೆಂದೂ-ತಡ ಮಾಡದೆ ಬಂದು ರಕ್ಷಿಸಬೇಕೆಂದೂ ಬಸವಣ್ಣನವರು ಶಿವನಿಗೆ ಹುಯ್ಯಲಿಡುತ್ತಿರುವರು.
ಈ ಸಂದರ್ಭದಲ್ಲಿ ಬಸವಣ್ಣನವರು ತಮ್ಮನ್ನು ಒಂದು “ಕಾಡು ಬಸವ”ನಿಗೆ ಹೋಲಿಸಿಕೊಂಡಿರುವರು, ಸಂಸಾರವೆಂಬ ಅರಣ್ಯದಲ್ಲಿ ಜೀವನು ಕಾಡುಬಸವನೇ. ಅವನಿಗೆ ರಕ್ಷಕನು ಶಿವನೊಬ್ಬನೇ-ಅವನೇ ಅಲ್ಲವೆ ಪಶುಪತಿ?
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.