Hindi Translationपिता, मुझे पंगु बना दो जिससे अन्यत्र न जा सकूँ;
पिता, मुझे अंधा बना दो जिससे सर्वत्र न देख सकूँ;
पिता मुझे बधिर बना दो जिससे कुछ और न सुन सकूँ;
कूडलसंगमदेव, ऐसी कृपा करो जिससे तव शरणों के
श्री चरणों के अतिरिक्त अन्य विषयों में आसक्त न होऊँ ॥
Translated by: Banakara K Gowdappa
English Translation Cripple me, father,
that I may not go here and there.
Blind me, father,
that I may not look at this and that
Deafen me, father,
that I may not hear anything else.
Keep me
at your men's feet
looking for nothing else,
O lord of the meeting rivers,
Translated by: A K Ramanujan Book Name: Speaking Of Siva Publisher: Penguin Books ----------------------------------
Make me, O Father, a crippled man
Who will not wander here and there.
Make me, O Father, a sightless man
Whose glances will not rove astray.
Make me, O Father, hard of ear
Lest I should hear of aught but Thee.
O Lord Kūḍala Saṅgama,
Keep me from all enticements free
But what will draw me to Thy feet !
Translated by: L M A Menezes, S M Angadi
Tamil Translationஅங்குமிங்குஞ் செல்லாது முடவனாக்குவீர் தந்தையே,
சுற்றிச்சுழன்று காணாது குருடனாக்குவீர் தந்தையே,
வேறொன்றைக் கேளாது செவிடனாக்குவீர் தந்தையே,
உம் அடியார்தம் தாளிணையன்றி
வேறு செயல்களில் ஈடுபடாதிடுவீர்
கூடல சங்கம தேவனே.
Translated by: Smt. Kalyani Venkataraman, Chennai
Urdu Translationمہرباں باپ مرے کوڈلا سنگم دیوا
کہ مجھے پاؤں سےمحرو م کہ بھٹکوں نہ کہیں
چھین لے میری بصارت مجھےاندھا کردے
تاکہ الزام نہ آئےمری نظروں پہ کوئی
میرے مالک مرے مشفق مجھے بہرا کردے
سُن سکیں کان نہ باطل کی صداؤں کو کبھی
یہ مرا ذہن نہ سوچے کوئی دیگر مضموں
تیرےشرنوں کی قدم بوسی وخدمت کےسِوا
Translated by: Hameed Almas
ಸ್ಥಲ -
ಸಂಸಾರಹೇಯಸ್ಥಲವಿಷಯ -
ಆತ್ಮಶುದ್ಧಿ
ಶಬ್ದಾರ್ಥಗಳುಅಂಧಕ = ಅಂದಕ ಕುರುಡ; ವಿಷಯ = ಬಯಕೆ; ಹೆಳವ = ಕಾಲು ಇಲ್ಲದವ;
ಕನ್ನಡ ವ್ಯಾಖ್ಯಾನಒಳ್ಳೆಯ ವಿಷಯದತ್ತ ಗಮನ
ಇದು ದೇವರಲ್ಲಿ ಬಸವಣ್ಣನವರು ಮಾಡಿಕೊಂಡ ಪ್ರಾರ್ಥನೆ. ಬಸವಣ್ಣನವರೇ ಏಕೆ? ಶಿವಪಥದಲ್ಲಿ ಅಡಿಯಿಟ್ಟಿರುವ ಪ್ರತಿಯೊಬ್ಬ ಮಾನವನೂ ಅವಶ್ಯವಾಗಿ ಮಾಡಲೇಬೇಕಾದ ಪ್ರಾರ್ಥನೆ.
ಒಂದು ಕೊಳದ ತಳಭಾಗ ಕಣ್ಣಿಗೆ ಕಾಣಬೇಕಾದರೆ ಆ ಕೊಳದ ನೀರು ಸ್ವಚ್ಛವಾಗಿರಬೇಕಲ್ಲದೆ ಮುಖ್ಯವಾಗಿ ಅಲೆಗಳೂ ಇರಕೂಡದು. ನೀರು ಎಷ್ಟೇ ಸ್ವಚ್ಛವಾಗಿದ್ದು ಅಲೆಗಳಿಂದ ಕೂಡಿದ್ದರೂ, ಅಲೆಗಳಿಲ್ಲದೆ ಅಲ್ಲಾಡದೆ ನೀರು ಎಷ್ಟೇ ಶಾಂತವಾಗಿದ್ದು ಸ್ವಚ್ಛವಾಗಿಲ್ಲದಿದ್ದರೂ (ಬಗ್ಗಡವಾಗಿದ್ದರೂ) ಕೊಳದ ತಳ ಭಾಗವನ್ನು ಕಾಣಲಾಗುವುದಿಲ್ಲ. ನೀರು ಅಲೆಗಳಿಂದ ಕೂಡಿರಬಾರದೆಂಬುದು ಎಷ್ಟು ಮುಖ್ಯವೋ, ಸ್ವಚ್ಛ (ನಿರ್ಮಲ) ವಾಗಿರಬೇಕೆಂಬುದು ಅಷ್ಟೇ ಮುಖ್ಯ. ಇದೇ ರೀತಿ ಈ ಶರೀರವೆಂಬುದು ಒಂದು ಕೊಳ, ಈ ಕೊಳದಲ್ಲಿ ಚಂಚಲವಾದ ಮನಸ್ಸೇ ಅಲೆಗಳಿಂದ ಕೂಡಿರುವ ನೀರು. ಆದ್ದರಿಂದ ಈ ಶರೀರವೆಂಬ ಕೊಳದಲ್ಲಿ ಆತ್ಮ ದರ್ಶನವಾಗಬೇಕಾದರೆ ಅಲೆಗಳಿಲ್ಲದ ನೀರಿನಂತೆ ಚಂಚಲತೆಯಿಂದ ದೂರಾದ ಮನಸ್ಸಾಗಬೇಕು. ಅಂದರೆ ಮನಸ್ಸು ಏಕಾಗ್ರವಾಗುತ್ತದೆ. ಆದರೆ ಅದು ಈ ದಿಶೆಯಲ್ಲಿ ಮಾರಕವಾಗುವುದೇ ಹೊರತು ಪೂರಕವಾಗಲಾರದು. ಆದ್ದರಿಂದ ಒಳ್ಳೆಯ ವಿಚಾರಗಳಲ್ಲಿ ಮನಸ್ಸು ಕೇಂದ್ರೀಕೃತವಾಗಿ ಸದ್ಭಾವನೆಯನ್ನು ಹೊಂದುವುದು, ನಿರ್ಮಲವಾಗುವುದು, ನೀರು ಸ್ವಚ್ಛ (ನಿರ್ಮಲ) ವಾಗಿರಬೇಕೆಂದು ಮೇಲೆ ಹೇಳಿರುವಂತೆಯೇ ಬಹು ಮುಖ್ಯ. ಇಂತಿರುವಾಗ ಕೆಟ್ಟ ಕೆಟ್ಟ ವಿಚಾರಗಳು ಮನಸ್ಸಿಗೆ ಬರುವುದೆಂದರೆ ಕೊಳದ ನೀರಿಗೆ ಕಲ್ಲನ್ನೆಸೆದಂತೆ. ಅದರ ಪರಿಣಾಮಗೊತ್ತಿದ್ದೇ ಇದೆ. ಅಲೆ ಅಲೆಗಳೆದ್ದು ತಳ ಭಾಗವನ್ನು ಕಾಣಲು ಸಾಧ್ಯವೇ ಆಗುವುದಿಲ್ಲ
ಈ ಕಾರಣದಿಂದಲೇ ಇಲ್ಲಿ ಬಸವಣ್ಣನವರು ‘ಅತ್ತಲಿತ್ತಲೂ ಹೋಗದಂತೆ ಹೆಳವನ ಮಾಡಯ್ಯಾ ತಂದೆ .....' ಎಂದು ಪ್ರಾರ್ಥಿಸುತ್ತಿದ್ದಾರೆ. ಅಂದರೆ ಸಂಪೂರ್ಣವಾಗಿ ಕಾಲಿಲ್ಲದವನನ್ನಾಗಿ ಮಾಡಿ, ಆ ಕಡೆ ಈ ಕಡೆ ಓಡಾಡದಂತೆ ಮಾಡು ಎಂದು ಅದರ ಅರ್ಥವಲ್ಲ. ಹಾಗೆ ಬೇಡಿಕೊಂಡು ಹೆಳವನಾಗಿ ಇನ್ನೊಬ್ಬರಿಗೆ ಹೊರೆಯಾಗುವುದು ಅಣ್ಣನವರ ತತ್ವಕ್ಕೆ ವಿರೋಧವಾದುದು. ಇಲ್ಲಿ ಅವರು ಕೇಳಿಕೊಳ್ಳುತ್ತಿರುವುದು ದುರ್ವ್ಯವಹಾರಗಳಲ್ಲಿ ದುರ್ಮಾರ್ಗದಲ್ಲಿ ಅಡಿಯಿಡದಂತೆ ಮಾಡು ಎಂದು. ಬಸವಣ್ಣನು ಕಾಲಿದ್ದರೂ ದುರ್ಮಾರ್ಗದಲ್ಲಿ ಅಡಿಯಿಡಲಾಗದಂತಹ ಹೆಳವನು. ಅಂತೆಯೇ ಪ್ರತಿಯೊಬ್ಬ ಮಾನವನೂ ಈ ರೀತಿ ದುರ್ಮಾರ್ಗದಲ್ಲಿ ನಡೆಯಲಾರದ ಹೆಳವನಾಗಬೇಕು. ಎದುರಿಗೆ ಮುಳ್ಳು ಕಾಣಿಸಿದರೆ ಕಾಲಲ್ಲಿ ಪಾದರಕ್ಷೆಗಳಿದ್ದರೂ ಮುಳ್ಳು ಏನು ಮಾಡಿಯಾವು. ಎಂದು ಆ ದುರ್ಮಾರ್ಗದಲ್ಲಿ. ಹೋಗ ಬಯಸದೆ ಪಕ್ಕದಲ್ಲೇ ಇರುವ ಸರಿಯಾದ ದಾರಿಯಲ್ಲಿ ಅಡಿಯಿಡಬಯಸಿದರು ಅಣ್ಣ ಬಸವಣ್ಣನವರು.
ಮನಸ್ಸು ವಿಕಾರಗೊಳ್ಳುವುದು, ಚಂಚಲವಾಗುವುದು ಯಾವಾಗ? ವಿಕಾರ ಗೊಳಿಸುವ ವಸ್ತುಗಳು ಇದ್ದಾಗ ಅಥವಾ ಅವುಗಳ ಬಗ್ಗೆ ಕೇಳಿದಾಗ, ಚಿಂತಿಸಿದಾಗ ತಾನೆ? ಹಾಗಾದರೆ ಅವುಗಳನ್ನು ಕೇಳದೆಯೇ ಅಥವಾ ನೋಡದೆಯೇ ಇದ್ದರೆ ವಿಕಾರಗೊಳ್ಳುವ ಸಂಭವವೆಂತು? ಅಂತೆಯೇ ಬಸವಣ್ಣನವರು ‘ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ; ಮತ್ತೊಂದು ಕೇಳದಂತೆ ಕಿವುಡನ ಮಾಡಯ್ಯಾ ತಂದೆ ......' ಎಂದು ದೇವರಲ್ಲಿ ಮೊರೆಯಿಡುತ್ತಿದ್ದಾರೆ. "ವಿಕಾರಹೇತೌ ಸತಿ ವಿಕ್ರೀಯಂತೇ | ಯೇಷಾಂನ ಚೇತಾಂಸಿ ತ ಏವ ಧೀರಾಃ ||” ಎಂಬ ಕಾಳಿದಾಸನ ಉಕ್ತಿಯಂತೆ ವಿಕಾರಗೊಳಿಸುವ ವಸ್ತುಗಳಿದ್ದಾಗ್ಯೂ ವಿಕಾರಕ್ಕೊಳಗಾಗದವನು ನಿಜವಾದ ಧೀರನು. ಇಂತಿರುವಾಗ ವಿಕಾರಗೊಳಿಸುವ ವಸ್ತುಗಳಿಂದಲೇ ಇಲ್ಲಿ ಅಣ್ಣನವರು ದೂರ ಇರ ಬಯಸಿದುದು ಅಂಜುಕುಳಿತನವಾಗಲಿಲ್ಲವೇ ಎನ್ನಬಹುದು ನಿಜ. ಆದರೆ ಸಾಧಕ ಸಾಧನೆಯ ಮೊದಲ ಘಟ್ಟದಲ್ಲಿರುವಾಗ ಅಪರಿಪಕ್ವನಾಗಿರುವುದರಿಂದ ಅವುಗಳಿಂದ ದೂರವಿರಬೇಕಾಗುತ್ತದೆ. ಆದ್ದರಿಂದಲೇ ಸಾಧನೆಯ ಮೊದಲ ಸೋಪಾನದಲ್ಲಿ ಅಣ್ಣನವರು ನಿಂತು ಆಡಿದ ಮಾತುಗಳಿವು, ಯಾವುದೇ ವಸ್ತುವಾಗಲೀ ತತ್ವಶಃ ಕೆಟ್ಟದ್ದಲ್ಲ. ನೋಡುವ ದೃಷ್ಟಿ, ಬಳಸುವ ರೀತಿ ಕೆಟ್ಟದಾಗಬಹುದೇ ವಿನಾ ಆ ವಸ್ತುವಲ್ಲ ಆದ್ದರಿಂದಲೇ ಇಲ್ಲಿಯೂ ಬಸವಣ್ಣನವರು ಕಣ್ಣಿದ್ದೂ ಯಾವನೇ ವ್ಯಕ್ತಿಯನ್ನಾಗಲಿ ಅಥವಾ ವಸ್ತುವನ್ನಾಗಲೀ ಕೆಟ್ಟ ದೃಷ್ಟಿಯಿಂದ ನೋಡದ ಕುರುಡರಾದರು. ಅಂತೆಯೇ ಕಿವಿಯಿದ್ದೂ ಕೆಟ್ಟ ವಿಚಾರಗಳನ್ನು ಕೇಳದ ಕಿವುಡರಾದರು. ಶಿವಪಥದಲ್ಲಿ ನಡೆಯುವ ಶರಣರ ಪಾದಸೇವಕರಾದರು; ಅವರ ಚಮ್ಮಾವುಗೆ (ಪಾದರಕ್ಷೆ) ಯಾಗಬಯಸಿದರು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.