Hindi Translationचिंता न करो पूर्वकृत पाप कैसे मिटेगा?
कडुआ कद्दू लाकर विभूति भरने से
तीन दिन में मीटा नहीं बनता?
अनंत काल तक वध किया हुआ
वधिक के हस्त का कृपाण क्यों न हो
पारस स्पर्श से सोना नहीं बनता?
ललाट पर विभूति धारण करने से
पाप नहीं मिटता, कूडलसंगमदेव ?
Translated by: Banakara K Gowdappa
English Translation Bother not how the bygone sin
Departs :
Will not the bitter bottle-gourd,
If filled with sacred ash,
Within three days be sweet ?
What if it be a butcher's knife
Which has slaughtered a long time ?
Will it not turn to gold when touched
By the philosopher's stone ?
O Kūḍala Saṅgama Lord,
Will, then, the sin fail to fade
When the ashmark paints the brow ?
Translated by: L M A Menezes, S M Angadi
ಕನ್ನಡ ವ್ಯಾಖ್ಯಾನಸದ್ಗುರುವು ಶಿಷ್ಯನಿಗೆ ಶಿವದೀಕ್ಷೆಯನ್ನು ಕೊಡುವಾಗ ಕ್ರಿಯಾದೀಕ್ಷೆಯಿಂದ ಕೈಯಲ್ಲಿ ಶಿವಲಿಂಗವನ್ನು ಇಡುವುದಕ್ಕೆ ಮುನ್ನ-ಮಂತ್ರದೀಕ್ಷೆಯಿಂದ ಅವನ ಕಿವಿಯಲ್ಲಿ ಶಿವಮಂತ್ರವನ್ನು ಉಪದೇಶಿಸುವನು. ಇದಕ್ಕೆಲ್ಲ ಮುನ್ನವೇ ಗುರು ತನ್ನ ಹಸ್ತಾಬ್ಜವನ್ನು ಶಿಷ್ಯನ ಮಸ್ತಕದ ಮೇಲಿಟ್ಟು ವೇಧಾದೀಕ್ಷೆಯನ್ನು ಕೊಟ್ಟು-ಅವನ ಹಣೆಯಲ್ಲಿ ವಿಭೂತಿಯನ್ನು ಧರಿಸುವನು.
ವಿಭೂತಿಧಾರಣೆಯ ಮಹಿಮೆ ಸಾಮಾನ್ಯವಾದುದಲ್ಲ. ಈ ಧರಿಸಿದ ವಿಭೂತಿಯಿಂದ ಜನ್ಮಜನ್ಮಾಂತರಗಳಲ್ಲಿ ಜೀವನು ಕಟ್ಟಿಕೊಂಡ ಸಂಚಿತಕರ್ಮವೆಲ್ಲಾ ಪರಿಹಾರವಾಗುವುದು.
ಕಹಿಸೋರೆಯ ಕಾಯಲ್ಲಿ ವಿಭೂತಿಯನ್ನು ತುಂಬಿಟ್ಟರೆ ಕಹಿಯೆಲ್ಲ ಹೋಗಿ ಸಿಹಿಯಾಗುವಂತೆ, ಮತ್ತು ಹಲವು ಕಾಲ ಪ್ರಾಣಿಹಿಂಸೆ ಮಾಡಿದ ಕಟುಗನ ಕತ್ತಿಯೂ ಪರುಷತಾಗಿ ಚಿನ್ನವಾಗುವಂತೆ-ಧರಿಸಿದ ವಿಭೂತಿಯು ಪಾಪವನ್ನು ಕಳೆಯುವುದೆಂಬುದರಲ್ಲಿ ಯಾವ ಸಂಶಯವೂ ಇಲ್ಲವೆಂದಿರುವರು ಬಸವಣ್ಣನವರು.
ಶಿವದೀಕ್ಷೆಯನ್ನು ಸ್ವೀಕರಿಸಿದ ಪಾಪಭೀರುಗಳಾದ ದಲಿತ ಜನರಿಗೆ ಬಸವಣ್ಣನವರು ಹೀಗೆ ನಿದರ್ಶನ ಪೂರ್ವಕವಾಗಿ ಭರವಸೆ ಕೊಟ್ಟು ಧೈರ್ಯ ಹೇಳುತ್ತಿದ್ದಾರೆ.
ಪಾಪಕ್ಕಿಂತಲೂ ಪಾಪಭೀತಿಯು ಭೀಕರದುಷ್ಫಲದಾಯಕ. ಸದಾಕಾಲವೂ ತಾನು ಪಾಪಿ ಎಂಬ ಅಳುಕು ಭಕ್ತರ ಧೀರಜೀವನಕ್ಕೆ ಅಡ್ಡಿಯಾಗಬಾರದೆಂಬುದು ಬಸವಣ್ಣನವರ ಇಂಗಿತ. ಜನ್ಮಜನ್ಮಾಂತರದ ಪಾಪವೆಲ್ಲ ಪ್ರಾಯಶ್ಚಿತ್ತಾದಿಗಳಿಂದ ಪರಿಹಾರವಾಗುವುದೆಂದು ಭಕ್ತರನ್ನು ಶೋಷಿಸುತ್ತ ಬಂದಿರುವ ಪುರೋಹಿತಷಾಹಿಯ ವಿರುದ್ಧ ಶಿವಭಕ್ತರಿಗೆ ಎಚ್ಚರ ಕೊಡುವ ಧ್ವನಿಯೂ ಈ ವಚನದಲ್ಲಿದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.