Hindi Translationगृह में गृहस्वामी है या नहीं-?
द्वार पर घास उगी है, गृह में धूल भरी है,
गृहु में गृहस्वामी है या नहीं-?
तन में असत्य, मन में विषय भरे हों,
तो गृह में गृह – स्वामी नहीं है, कूडलसंगमदेव॥
Translated by: Banakara K Gowdappa
English Translation The master of the house, is he at home, or isn't he?
Grass on the threshold,
dirt in the house:
The master of the house, is he at home, or isn't he?
Lies in the body,
lust in the heart:
no, the master of the house is not at home,
our Lord of the Meeting Rivers.
Translated by: A K Ramanujan Book Name: Speaking Of Siva Publisher: Penguin Books ----------------------------------
Is the master of the house gone out,
Or is he in ?
Upon the threshold grasses sprout ;
The house is just
A bowl of dust :
Is the master of the house gone out,
Or is he in ?
When falsehood does infect your flesh
And your heart is a sensuous mesh,
The master of the house
Cannot be in, cannot be in,
Kūḍala Saṅgama Lord !
Urdu Translationمکاں میں صاحبِ خانہ بھی کوئی ہےکہ نہیں
دکھائی دیتے ہیں دہلیز پر خس و خاشاک
ہےچھت پہ بام پہ دیوار و درپہ دھول ہی دھول
مکاں میں صاحبِ خانہ بھی کوئی ہےکہ نہیں
ہمارے ظاہر و باطن کا ہے یہ آئینہ
ہوس کی گرد ہے دل میں بدن پہ جھوٹ کی دھول
نہیں،نہیں ہے یہاں کوئی صاحبِ خانہ
نہیں،نہیں ہے یہاں کوئی،کوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನಗೆಳೆಯನೊಬ್ಬನು ಬಹಳ ದಿನಗಳಾದ ಮೇಲೆ ತನ್ನ ಗೆಳೆಯನನ್ನು ನೆನೆದು ಅವನನ್ನು ಸಂದರ್ಶಿಸಬೇಕೆಂದು ಅವನ ಮನೆಯ ಕಡೆ ಹೊರಟ.ತಲೆಬಾಗಿಲ ಹೊಸ್ತಿಲಲ್ಲೇ ಹುಲ್ಲು ಬೆಳೆದು ನಿಂತುದನ್ನು ಕಂಡ –ಮುಂದೆ ನಡೆದು ಕದವಿಲ್ಲದ ಬಾಗಿಲ್ವಾಡವನ್ನು ಕಂಡ, ಪ್ರವೇಶಿಸಿ ನೆಲದ ಮೇಲೆಲ್ಲ ಕಸ ಕುಪ್ಪೆಕುಪ್ಪೆಯಾಗಿ ತುಂಬಿರುವುದನ್ನು ಕಂಡ. ಮತ್ತೆಯೂ ಮುಂದುವರಿದಾಗ ಕತ್ತಲೆಕವಿದ ಮೂಲೆ ಜಂತೆಗಳಲ್ಲಿ ಜೇಡಬಲೆ ಕಟ್ಟಿರುವುದನ್ನು ಕಂಡ-ಯಾರಿದೀರಿ ಎಂದು ಕೂಗಿ ಕರೆಯಲಿಲ್ಲ-ಅಲ್ಲಿ ಯಾರೂ ಇರಲಿಲ್ಲ. ಅದೊಂದು ಬಿಟ್ಟ ಮನೆ, ಹಾಳುಮನೆ, ಭೂತದ ಮನೆಯೆಂಬುದು ಅವನಿಗೆ ಹೊಳೆಯಿತು. ನಿರಾಶೆಯಿಂದ ಭಯದಿಂದ ಹೊರಕ್ಕೆ ಬಂದ-ಹಿಂತಿರುಗಿಯೂ ನೋಡದೆ ಓಡಿದ.
ಇನ್ನೊಂದು ಚಿತ್ರ : ಲಿಂಗಧಾರಿಯಾದ ಭಕ್ತನೊಬ್ಬನನ್ನು ಇನ್ನೊಬ್ಬ ಭಕ್ತನು ದಾಸೋಹಂಭಾವದಿಂದ ಕಾಣಲು ಹೋದ. ಎಲ್ಲೋ ದೂರದಲ್ಲಿ ಅವನು ಕಂಡಂತಾಯಿತು-ಹಿಂಬಾಲಿಸಿದ : ಅವನು ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ, ಏನು ಮಾತನಾಡುತ್ತಾನೆ, ಎಲ್ಲಿ ತಳ ಊರಿ ಕುಳ್ಳಿರುತ್ತಾನೆ, ಏತಕ್ಕಾಗಿ ಶ್ರಮಿಸುತ್ತಾನೆ ಎಂಬುದು ಕಂಡಿತು.
ಇನ್ನೂ ಹಿಂಬಾಲಿಸಿದ : ಅವನು ಏನನ್ನು ಕಾಣಲು ತವಕಿಸುತ್ತಾನೆ, ಕೇಳಲು ಹಂಬಲಿಸುತ್ತಾನೆ, ಮೂಸಿ ಮೂಗರಳಿಸುತ್ತಾನೆ, ತಿಂದು ತೇಗುತ್ತಾನೆ, ಮುಟ್ಟಿ ಪುಳಕಿಸುತ್ತಾನೆ ಎಂಬುದೂ ಸ್ಪಷ್ಟವಾಯಿತು.
ಮತ್ತೆಯೂ ಹಿಂಬಾಲಿಸಿದ ಅವನ ಬುದ್ಧಿ ಏನನ್ನು ನಿಶ್ಚಯಿಸುತ್ತದೆ, ಅವನ ಚಿತ್ತ ಏನನ್ನು ಬಿಗಿ ಹಿಡಿಯುತ್ತದೆ, ಅವನ ಅಹಂಕಾರ ಏನನ್ನು ಅಭಿಮಾನಿಸುತ್ತದೆ ಎಂಬುದೂ ಮನದಟ್ಟಾಯಿತು.
ಕ್ರಮವಾಗಿ ಅವನ ಕರ್ಮೇಂದ್ರಿಯಗಳೂ ಜ್ಞಾನೇಂದ್ರಿಯಗಳೂ ಅಂತಃಕರಣಗಳೂ ದುರ್ವಿಷಯ ಪರಾಯಣವಾಗಿರುವುದು ಸಾಬೀತಾಯಿತು. ಅಲ್ಲಿಂದಾಚೆಗೆ ಅವನ, ಮೇಲಿದ್ದ ಗೆಳೆಯನ ಆಸಕ್ತಿಯೂ ಭಕ್ತಿಯೂ ಚೆಲ್ಲಿಹೋಯಿತು. ಅವನ ಮೈಮೇಲೆ ಲಿಂಗವಿರಬಹುದು-ಆದರೆ ಅವನು ಲಿಂಗಭಕ್ತನಲ್ಲವೆಂದೂ-ಆದರೆ ತಾನು ಬಹುಕಾಲ ಈ ತೋರಿಕೆಯೇ ನಿಜವೆಂದು ಮೋಸಹೋದುದು ತನ್ನ ವಿಚಾರಹೀನತೆಯ ಪರಿಣಾಮವೆಂದೂ ನಾಚಿದ.
ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA
C-406 
  Tue 05 Dec 2023  
ಉತ್ತಮ ವಚನ ವಿಶ್ಲೇಷಣೆ ತಮಗೆ ಶರಣಾರ್ಥಿ ಗಳು ??????
  ಶಿದ್ದಲಿಂಗೇಶ. ನಾಶಿ. ಶಿರಸಿ
INDIA
C-400 
  Fri 24 Nov 2023  
??
  GP manju
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.