Hindi Translationकायलिप्सा से माँस मदिरा के सेवन करते हैं;
नेत्र लिप्सा से परस्त्रीगमन करते हैं-
लिंग पथ से भटक जानेवाले
लिंग लांछनधारी हो, तो क्या लाभ?
जंगम मुख से निंदा शब्द निकले,
तो अधःपतन से बचाव नहीं कूडलसंगमदेव ॥
Translated by: Banakara K Gowdappa
English Translation For the indulgence of the flesh
They swallow meat and spirituous drinks.
For the indulgence of the eye
Commit adultery ...
What profits it to wear
Liṅga and other trappings too ?
If those who go astray
From the Liṅga path
Incur reproach from Jaṅgama's lips,
They will not escape
Going down the steep perdition's path,
Lord Kūḍala Saṅgama !
Translated by: L M A Menezes, S M Angadi
Tamil Translationஉடலழகினை நயந்து கள் ஊனினை உண்பீர்,
கண்களின் ஆசைக்கு வேறு பெண்ணைக் கூடுவீர்
இலிங்க நெறிதனைச் சார்ந்து பயனென்ன
இலிங்க நெறிதனைப் பிறழ்ந்து நடப்போர்?
மெய்யன்பர் வாயினின்று வசைமொழிவரின்
பயனற்றுப் போவது உறுதி
கூடல சங்கம தேவனே.
Translated by: Smt. Kalyani Venkataraman, Chennai
Urdu Translationنفسانی خواہشا ت کےمارے ہوئے،کہو
لحم وشرابِ ناب کے شیدائیو، کہو
انجان عورتو ں کو بھری شاہراہ میں
ٹو لی بناکے گھورنے والے بہادرو
سینے پہ ہاتھ رکھ کےذرا مجھ سے یہ کہو
کیوں دل کےآس پاس ہی رکھتے ہو لِنگ کو
حالانکہ گامزن نہیں تم حق کی راہ پر
کیوں اس کےنقشِ پا پہ تمھارے قدم نہیں
تم کو بُرےعمل کی ملےگی سزا ضرور
ہرگز نہ بچ سکوگے کبھی ا س کے قہر سے
یہ کتنا ہولناک ہے انجَام دوستو
مورکھ ہیں کتنے کوڈلا سنگا یہ بدنصیب
Translated by: Hameed Almas
ಕನ್ನಡ ವ್ಯಾಖ್ಯಾನಶಿವಧರ್ಮಕ್ಕೆ ಸೇರಿದವರು ತಮ್ಮ ಪೂರ್ವಾಶ್ರಮ(ಪೂರ್ವಮತ)ದ ಮಾಂಸಾಹಾರಾದಿ ರೂಢಿಗಳನ್ನೇ ಮುಂದುವರೆಸಿಕೊಂಡು ಬಂದರೆ-ಅದು ಆ ಶಿವಧರ್ಮಕ್ಕೆ ವಿರೋಧ. ಆ ಪೂರ್ವರುಚಿಗಳನ್ನು ಬಿಟ್ಟು ಶಿವಧರ್ಮದಲ್ಲಿ ವಿಧಿಸಿರುವ ಆಹಾರವಿಹಾರವಿಧಾನಗಳಿಗೇ ಬದ್ಧರಾಗಿರಬೇಕಾದ್ದು-ಅವರ ಧಾರ್ಮಿಕಾಚರಣೆಯ ಒಂದು ಅಂಗವೇ ಆಗಿದೆ.
ಬಸವಣ್ಣನವರ ಕಾಲಕ್ಕೆ (ಕೌಳ ಮುಂತಾದ) ಶೈವಪಂಥದವರಲ್ಲಿ ಕೆಲವರು ಶಿವನನ್ನು ಭೈರವಾದಿರೂಪದಲ್ಲಿ ಉಪಾಸಿಸುತ್ತ ಮಾಂಸ-ಮದ್ಯ-ಮೈಥುನಾದಿಗಳಲ್ಲಿ ಮೈಮರೆತು-ಅದೇ ಪರಮಾನಂದವೆಂದೂ, ಆ ಮಾರ್ಗದಿಂದಲೇ ಸ್ವತಃ ಭೈರವ ಮುಂತಾದವರಾಗುವೆವೆಂದೂ ತಮ್ಮ ವಾಮಾಚಾರವೇ ಶಿವಾಚಾರವೆಂಬಂತೆ ಗಳಹುತ್ತಿದ್ದರು. ಈ ರೀತಿಯ ವಿಶೃಂಖಲ ಸ್ವಚ್ಛಂದ ಪ್ರವೃತ್ತಿಯನ್ನು ವಿಷ್ಣುಪರವಾದ ಕೆಲವು ಶಾಕ್ತ ಪಂಥಗಳಲ್ಲಿಯೂ ಕಾಣಬಹುದಿತ್ತು. ಇಂಥವರು ಕಾರಣಾಂತರದಿಂದ ಲಿಂಗದೀಕ್ಷೆಯನ್ನು ಕೈಗೊಂಡ ಮೇಲೂ ತಮ್ಮ ಪೂರ್ವಪ್ರವೃತ್ತಿಗಳನ್ನು ಕೈಬಿಡದಿದ್ದ ಪ್ರಕರಣಗಳು ತಮ್ಮ ಗಮನಕ್ಕೆ ಬಂದಾಗ ಅವನ್ನು ಬಸವಣ್ಣನವರು-ಇಂಥ ವಚನಗಳ ಮುಖಾಂತರ ಖಂಡಿಸುತ್ತಿರುವರು.
ಶಿವಭಕ್ತರಾದ ಜನರು ತಮ್ಮ ಪೂರ್ವದುರಾಚಾರಗಳನ್ನು ಮುಂದುವರಿಸಿ ಮೇಲುಸ್ತುವಾರಿಯ ಜಂಗಮದ ಅಸಂತೋಷಕ್ಕೆ ಒಳಗಾದರೆ ಲಾಭವೇನೂ ಇಲ್ಲ. ಒಂದು ಕತ್ತೆಯನ್ನು ಕೊಂಡು ಹತ್ತಿಕಾಳು ಮುಸುರೆ ಇಕ್ಕಿ ಆರೈಕೆ ಮಾಡಿದ ಮೇಲೆಯೂ ಮಾರಿದರೆ ಅದರ ಬೆಲೆ ಯಥಾಪ್ರಕಾರ ಕಡಿಮೆಯೇ ಆಗಿರುವಂತೆ-ಮತಾಂತರಗೊಂಡ ಶಿವಭಕ್ತನು ತನ್ನ ಜೀವನ ಮೌಲ್ಯವನ್ನು ಹೆಚ್ಚಿಸಿಕೊಳ್ಳದಿದ್ದರೆ ಪ್ರಯೋಜನವೇನು ? ಇಂಥ ಲಾಭವಿಲ್ಲದ ವ್ಯವಹಾರವನ್ನೇ “ಕೊಂಡ ಮಾರಿಂಗೆ ಹೋಹುದು” ಎನ್ನುವರು.
ವಿಸೂ: (1) ಶರಣಧರ್ಮಕ್ಕೆ ಸೇರಿದವರ ಧಾರ್ಮಿಕ ಪ್ರಗತಿಗಾಗಿ ಮತ್ತು ಅದರ ಮೇಲ್ವಿಚಾರಣೆಗಾಗಿ ಸಂಘವೊಂದು ನಿಯೋಜಿತವಾಗಿದ್ದು ಆ ಸಂಘದ ಒಬ್ಬೊಬ್ಬ ಪರಿವ್ರಾಜಕ (ಶ್ರೇಷ್ಠ)ನೂ ಸದಾ ಸಂಚಾರಿಯಾಗಿ ತಿರುಗಾಡುವ ಶಿವನಂತೆ ಗೌರವಿಸಲ್ಪಟ್ಟು-ಅವನಿಗೆ ಜಂಗಮ(ಲಿಂಗ)ವೆಂಬ ಹೆಸರು ಅನ್ವರ್ಥವಾಗುವಂತಿರುತ್ತಿತ್ತು. ಇಂಥ ಜಂಗಮದ ಮೆಚ್ಚುಗೆ ಪಡೆಯಬೇಕಾಗಿತ್ತು ಲಿಂಗಪಥಕ್ಕೆ ಪರಿವರ್ತನೆಗೊಂಡವನು.
( 2) ಮದ್ದು ಎಂದರೆ ಮಾದಕದ್ರವ್ಯ
(3) ಬಸವಣ್ಣನವರು ತಮ್ಮ ಪಂಥವನ್ನು ಲಿಂಗಪಥವೆಂದೂ ಸುಪಥವೆಂದೂ ಕರೆದಿರುವರು-(ನೋಡಿ ವಚನ 92)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.