Hindi Translationउसका वचन गुड सा है, हृदय में विष है,
एक को आंखों के इशारे बुलाती है;
मन में दूसरे का स्मरण करती है;
कूडलसंगमदेव सुनो
ऐसी पुरुषवंचिका पर विश्वास न करो ॥
Translated by: Banakara K Gowdappa
English Translation Her words are sweet as sweet,
But lo ! there's poision in her heart !
She invites one person with her eye,
She takes another to her heart !
Hearken, O Kūḍala Saṅgama Lord,
Trust not the wanton who
Beguiles man-kind !
Translated by: L M A Menezes, S M Angadi
ಕನ್ನಡ ವ್ಯಾಖ್ಯಾನಕಪಟಭಕ್ತರು ಶಿವಮಂತ್ರ ಹೇಳುವುದು, ಶಿವಪೂಜೆ ಮಾಡುವುದು, ಶಿವಧ್ಯಾನಮಾಡುವುದು-ಆ ಶಿವಪಥವನ್ನೇ ಹಾಳುಗೆಡವುದರಲ್ಲಿ ಪರಿಣಮಿಸುವುದು. ಕಾಪಟ್ಯವು ಉದ್ದೇಶಪೂರ್ವಕವಾದಾಗ ದುಷ್ಪರಿಣಾಮವು ವ್ಯವಸ್ಥಿತವಾಗಿ ತಲೆದೋರುವುದು.
ಉದಾಹರಣೆಗೆ-ರಾಜಕೀಯವಾಗಿ ಪ್ರಬಲನಾದೊಬ್ಬನನ್ನು ಯುದ್ಧದಲ್ಲಿ ಗೆಲ್ಲಲಾರದೆ-ಅನ್ಯೋಪಾಯದಿಂದ ಹಾಳುಮಾಡಲು-ವಿಷಕನ್ಯೆಯರನ್ನು ಅವನ ಕೊಲೆಗೆ ನಿಯೋಜಿಸುವುದು ರೂಢಿಯಲ್ಲಿತ್ತು. ಆಗ ಅವಳು ಮಧುರವಾಗಿ ಮಾತಾಡುವಳು-ಅಷ್ಟರಿಂದಲೇ ಸ್ನೇಹಪರಳೆಂದು ಅವಳನ್ನೇನಾದರೂ ಮುಟ್ಟಿದನೋ ಮುತ್ತಿಟ್ಟನೋ-ಅವನು ಸತ್ತ.
ಹೀಗೆಯೇ ಶರಣರು ಪ್ರವರ್ತಿಸಿದ ಪ್ರಬಲ ಶಿವಧರ್ಮವನ್ನು ಅನ್ಯಧರ್ಮೀಯರು ವಾದದಿಂದ ಗೆಲಲಾರದೆ-ಕಪಟಿಗಳನ್ನು ಆ ಧರ್ಮಕ್ಕೆ ಸೇರುವಂತೆ ಮಾಡಿ-ಅವರ ಮೂಲಕ ಅದಕ್ಕೆ ಅಪಖ್ಯಾತಿ ತರಲು ಪ್ರಯತ್ನಿಸಿದ ಹಲವು ಪ್ರಕರಣಗಳು ಬಸವಣ್ಣನವರ ಗಮನಕ್ಕೆ ಬಂದಿದ್ದವು.
ಇಂಥ ಶಿವಧರ್ಮಘಾತುಕರ ಬಗ್ಗೆ ಎಚ್ಚರ ಕೊಡುತ್ತ-ಇಡಿಯಾಗಿ ಕಪಟಭಕ್ತರನ್ನು ನಂಬಬಾರದೆಂದೂ ಮತ್ತು ಅವರ ಬಗ್ಗೆ ಉಪೇಕ್ಷೆಯಿಂದಾಗಲಿ ಇರಬಾರದೆಂದೂ ಆದೇಶಿಸುತ್ತಿರುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.