Hindi Translationक्षुधित होकर अर्क फल खा सकते हैं?
तृषित होकर विष पी सकते हैं?
चूने और क्षीर का वर्ण एक है
तो साम्य वश खा सकते हैं?
लिंगतत्व से अनभिज्ञ असज्जन लोगों पर
कूडलसंगमदेव की कृपा कैसे होगी?
Translated by: Banakara K Gowdappa
English Translation When hungry, will you suck
A poisonous nut ?
When thirsty, will you sip
A poisonous drink ?
Because quicklime has
The same colour as rice,
Are you mad to eat
Because they look alike ?
And could Lord Kūḍala Saṅgama
Love the unrighteous ones
Who never tasted of
The quintessence of Liṅga ?
Translated by: L M A Menezes, S M Angadi
Tamil Translationபசித்தால் எருக்கங்காயை மெல்லலாமோ?
வேட்கையென நஞ்சினை அருந்தலாமோ?
சுண்ணமும், பாயசமும் நிறம் ஒன்றேயெனின்
தொடர்புடைத்தென உண்ணலாமோ?
நிலைத்த மெய்ப்பொருளை உணரா மாந்தருக்குக்
கூடல சங்கம தேவன் எங்ஙனம் அருள்வான்?
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಮಾಡಬೇಕಾದ್ದು ಸಜ್ಜನ ಶಿವಭಕ್ತರ ಸ್ನೇಹವೇ ಹೊರತು ದುರ್ಜನರ ಸ್ನೇಹವಲ್ಲವೇ ಅಲ್ಲವೆನ್ನುತ್ತ ಬಸವಣ್ಣನವರು ಸಜ್ಜನಶಿವಭಕ್ತರಂತೆಯೇ ಕಾಣುವ ಛದ್ಮವೇಷಧಾರಿಗಳ ಬಗ್ಗೆಯೂ ಎಚ್ಚರಿಕೆ ನೀಡುತ್ತಿರುವರು.
ಇವನು ಸಜ್ಜನ ಶಿವಭಕ್ತ, ಇವನು ದುರ್ಜನ ಶಿವಭಕ್ತ ಎಂದು ಗುರುತಿಸುವುದು ಹೇಗೆ ? ಇಬ್ಬರೂ ವಿಭೂತಿ ರುದ್ರಾಕ್ಷಿ ಧರಿಸಿರುವರು. ಇಬ್ಬರೂ ಲಿಂಗವನ್ನು ಧರಿಸಿರುವರು ! ಯಾವನಾಗಲಿ ಲಿಂಗಲಾಂಛನಧಾರಿಯಾದ ಮಾತ್ರಕ್ಕೆ ಸಜ್ಜನ ಶಿವಭಕ್ತನಾಗುವುದಿಲ್ಲ. ಅವನಲ್ಲಿ “ಲಿಂಗಸಾರಾಯಸಜ್ಜನ”ವಿದೆಯೇ ಎಂಬುದನ್ನು ಗಮನಿಸಬೇಕು.
ದುರ್ಜನನೂ ವಿಭೂತಿ ಮುಂತಾದ ಬಹಿರ್ಲಾಂಛನಗಳಿಂದ ಶಿವಭಕ್ತನಂತೆ ತೊರಬಹುದಾದರೂ ಗುಣಾತ್ಮಕವಾಗಿ-ಅವನಿಗೂ ಸಾಚಾ ಶಿವಭಕ್ತನಿಗೂ ಎಕ್ಕೆಕಾಯಿ-ಮಾವಿನಕಾಯಿಗಳಿಗಿರುವ ಅಂತರವಿದೆ. ವಿಷಕ್ಕೆ ಮತ್ತು ನೀರಿಗೆ ಇರುವ ಅಂತರವಿದೆ ಮತ್ತು ಸುಣ್ಣದ ನೀರಿಗೆ ಮತ್ತು ಹಾಲುಕೀರಿಗೆ ಇರುವ ಅಂತರವಿದೆ. ಮಾವಿನ ಕಾಯೆಂದು ತಿಳಿದು ಎಕ್ಕೆಯ ಕಾಯನ್ನೂ, ನೀರೆಂದು ತಿಳಿದು ವಿಷವನ್ನೂ, ಹಾಲುಕೀರೆಂದು ತಿಳಿದು ಸುಣ್ಣದ ನೀರನ್ನೂ ಸೇವಿಸಿದರೇನಾಗುವುದೆಂಬುದು ತಿಳಿದ ವಿಷಯವೇ ಆಗಿದೆ.
ಶಿವಭಕ್ತವೇ಼ಷಧಾರೀ ದುರ್ಜನನನ್ನು ನಮ್ಮವನೆಂದು ಮನ್ನಿಸಲಾಗದು-ನಂಟರ ಮನೆಯಲ್ಲಿ ಸುಣ್ಣದ ನೀರನ್ನು ಹಾಲುಕೀರೆಂದು ಬಡಿಸಿದ ಮಾತ್ರಕ್ಕೆ-ಬಣ್ಣ ಒಂದೇ ಎನ್ನುತ್ತ-ವಿವೇಕವಂತರಾರೂ ಉಣ್ಣುವುದಿಲ್ಲ.
ವಿ: ಲಿಂಗಸಾರಾಯವೆಂದರೆ ಲಿಂಗತತ್ತ್ವ-ಆ ತತ್ತ್ವಕ್ಕಾಗಿ ತನ್ನ ಪ್ರಾಣವನ್ನಾದರೂ ತೆತ್ತುಕೊಳ್ಳಬಲ್ಲವನೇ ಲಿಂಗಸಾರಾಯಸಜ್ಜನ. ಸಜ್ಜನವೆಂದರೆ ಪತಿವ್ರತೆಯೆಂಬ ಅರ್ಥವೂ ಇರುವುದಾಗಿ-ಈ ಸಂದರ್ಭದಲ್ಲಿ “ಲಿಂಗಪತಿ ಶರಣಸತಿ” ಎಂಬ ಸೂತ್ರವನ್ನೂ ಅನ್ವಯಿಸಿ ಪರಿಭಾವಿಸಬಹುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.