Hindi Translationश्रद्धा-हीन पूजा! स्नेह हीन क्रिया
वह पूजा, वह क्रिया देखो भाई चित्रित रूप है
देखो भाई चित्रित ऊख है
आलिंगन में सुख नहींचर्वण में स्वाद नहीं -
कूडलसंगमदेव, ऐसी है श्रद्धा-हीन की भक्ती॥
Translated by: Banakara K Gowdappa
English Translation A worship without love
And an unfeeling act,
Behold, my brothers, is
A pictured loveliness
(No joy in its embrace),
A painted sugar-cane
(No relish in its taste),
O Kūḍala Saṅgama Lord,
Without sincerity
It is no piety.
Translated by: L M A Menezes, S M Angadi
Tamil Translationஅன்பிலா வழிபாடு, அன்பிலா முயக்கம்
அவ்வழிபாடும், அம்முயக்கமும்,
ஓவத்தினுருவம் காணாய் ஓவக்கரும்பு காணாய்,
தழுவினாலின்பமிலை, மென்றாற் சுவையிலை,
கூடல சங்கம தேவனே, உண்மையிலோன் தன் பக்தி.
Translated by: Smt. Kalyani Venkataraman, Chennai
Telugu Translationఒలువు లేని పూజ! చెలిమిలేని చేత!!
ఆ పూజయు నా చేతయు; చిత్రితరూపము తెలియుమన్నా!
చిత్రపుచెఱకు తెలియుమన్నా:
సుఖము లేదెదజేర్ప: చవిలేదు నమలగ
నిజము లేనివాని భక్తి కూడల సంగమదేవా!
Translated by: Dr. Badala Ramaiah
Urdu Translationنہ ہوجس میں محبّت وہ پُرستش اس طرح ہوگی
کہ جیسے بے زباں تصویرکا حُسنِ نظرافزا
نہ ہوجس میں عقیدت کی تپش وہ کام یوں ہوگا
کسی سادہ ورق پرجس طرح گنے کا نقشہ ہو
کہ جس سے لذتِ کام ودہن کی سعیٔ لا حاصل
یہی حالت ہےجانواُن پرستاروں کی دنیا میں
عقیدت کےبنا جو پوجتے ہیں کوڈلا سنگم
Translated by: Hameed Almas
ಸ್ಥಲ -
ಭಕ್ತನ ಜ್ಞಾನಿಸ್ಥಲವಿಷಯ -
ಪೂಜೆ
ಶಬ್ದಾರ್ಥಗಳುನೇಪ = ; ಮಾಟ = ; ರೂಹು = ರೂಪ;
ಕನ್ನಡ ವ್ಯಾಖ್ಯಾನನಿಜವಿಲ್ಲದ ಭಕ್ತಿ
ಪೂಜೆಯು ದೃಢಮನಸ್ಸಿನಿಂದ ಕೂಡಿರಬೇಕೆಂಬುದನ್ನು ಈ ಹಿಂದಿನ ವಚನದಲ್ಲಿ ನೋಡಿದೆವು. ಇಲ್ಲಿ ಬಸವಣ್ಣನವರು ಅಂತಹ ಪೂಜೆಯಲ್ಲಿ ಒಲವು ಅಂದರೆ ಪ್ರೀತಿಯೂ ಇರಬೇಕೆಂದು ಹೇಳುತ್ತಾರೆ. ಅಂದರೆ ಪೂಜೆಯು ಕೇವಲ ಒಂದು ಬೂಟಾಟಿಕೆಯ, ಆಡಂಬರದ ಅಥವಾ ಸೋಗಿನ ಕಾರ್ಯವಾಗಬಾರದು. ಅದರಲ್ಲಿ ನಿಜವಾದ ಪ್ರೇಮವಿರಬೇಕು. ಅದರಂತೆಯೇ ನಾವು ಮಾಡುವ ಯಾವುದೇ ಕಾರ್ಯ (ಮಾಟ) ವಾಗಲೀ ನಿಜವಾದ ಪ್ರೀತಿ ಶ್ರದ್ಧೆಗಳಿಂದ ಕೂಡಿರಬೇಕು. ಅದಿಲ್ಲದೆ ಪೂಜೆಯಾಗಲೀ ಅಥವಾ ಇನ್ನಾವುದೇ ಕಾರ್ಯವಾಗಲೀ ಚಿತ್ರ ಫಲಕದಲ್ಲಿರುವ ಭಾವಚಿತ್ರ ಹಾಗೂ ಕಬ್ಬಿನಂತೆಯೇ ಸರಿ. ಭಾವಚಿತ್ರವನ್ನು ಅಪ್ಪಿಕೊಂಡರೆ ಅದರಿಂದ ಯಾವ ಸುಖವೂ ದೊರೆಯದು. ಅದರಂತೆಯೇ ಚಿತ್ರದಲ್ಲಿರುವ ಕಬ್ಬನ್ನು ತಿಂದರೆ ಅದರಿಂದ ನಿಜವಾದ ಕಬ್ಬಿನ ರುಚಿಯು ಉಂಟಾಗದು.
ದೇವರ ಪೂಜೆಯಲ್ಲಿರುವ ಒಲವೇ (ಪ್ರೀತಿಯೇ) ಭಕ್ತಿ. ಆದ್ದರಿಂದ ಪೂಜೆಯಲ್ಲಿ ಒಲವಿಲ್ಲವೆಂದ ಮೇಲೆ ಭಕ್ತಿಯಿಲ್ಲವೆಂದೇ ಅರ್ಥ. ಅಂತಹ ಭಕ್ತಿಯಿಲ್ಲದವನು ಮಾಡುವ ಪೂಜೆಯು ಚಿತ್ರಫಲಕದಲ್ಲಿರುವ ಭಾವಚಿತ್ರದ ಅಪ್ಪುಗೆಯಂತೆ, ಚಿತ್ರದಲ್ಲಿರುವ ಕಬ್ಬನ್ನು ತಿಂದಂತೆ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.