Hindi Translationपर्वार्थ लाई मनौती की बकरी
तोरण के किसलय चरती है,
वध की बात न जानकर
तप्त पेट भरने जाती है,
वह उसी दिन जन्मी, उसी दिन मरी
मारनेवाले बच गये कूडलसंगमदेव॥
Translated by: Banakara K Gowdappa
English Translation The sacrificial lamb brought for the festival
ate up the green leaf brought for the decorations.
Not knowing a thing about the kill,
it wants only to fill its belly: born that day, to die that day.
But tell me:
did the killers survive,
O lord of the meeting rivers?
Translated by: A K Ramanujan Book Name: Speaking Of Siva Publisher: Penguin Books ----------------------------------
A vowed sheep brought for a festival
Nibbles the tender leaves
Meant for the festoon; and not
Suspecting its approaching death,
It's anxious to appease
Its belly's fire.
The very day it's born it dies;
But, Kūḍala Saṅgama Lord,
Do those survive who butcher it?
Translated by: L M A Menezes, S M Angadi
Tamil Translationபண்டிகைக்குக் கொணர்ந்த நேர்ச்சை ஆடு,
தோரணத்திற்குத் தந்த தளிரினை மேய்ந்தது,
தன்னைக் கொல்லப் போவதை யறியாமலே
வெந்தவுடலைப் பேணி வளர்த்த தன்றோ?
அது அன்றே தோன்றியது, அது அன்றே மறைந்தது,
கொன்றவர் நிலைப்பரோ, கூடல சங்கம தேவனே.
Translated by: Smt. Kalyani Venkataraman, Chennai
Telugu Translationపండుగకు బట్టిన బలిపశువు
తోరణమునకు తెచ్చు తలిరుల మేసె ;
చంపెదరనుట తెలియక
మండు పొట్టను మనుపబోయిరే కాని!
అది ఆపుడె పుట్టి; అది అపుడే చచ్చె
చంపినవారు మిగిలిరే కూడల సంగమదేవా!
Translated by: Dr. Badala Ramaiah
Urdu Translationبَلی کےواسطےلائی ہوئی جواں بکری
سجےسجائےسےمنڈپ کےسبزپتوں کو
چبارہی ہے بڑے شوق سے،مسرّت سے
نہیں ہےاس کوکوئی خوف کوئی اندیشہ
بس ایک فکرہےاس کوکہ پیٹ بھر جائے
مجھے بتاؤنا بکری کےمارنے والو
ملےگی زندگیِ جَاوداں تمھیں کیسے
یہ کیسےلوگ ہیں دنیا میں کوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನಹಬ್ಬ-ಮನೆಯೆಲ್ಲ ಸಾರಣೆಕಾರಣೆ ತೋರಣದಿಂದ ಅಂದಗೊಂಡಿದೆ. ಮನೆಮಂದಿಯೆಲ್ಲ ಮಕ್ಕಳು ಸಹ ಬಣ್ಣ ಬಣ್ಣ ಉಟ್ಟುತೊಟ್ಟು ಉಲ್ಲಾಸದಲ್ಲಿವೆ. ವಾದ್ಯಗಳು ಸಪ್ತಸ್ವರಗಳನ್ನು ವಿವಿಧ ವಿನ್ಯಾಸದಲ್ಲಿ ವಿಸ್ತರಿಸಿ ಬೀಸುಗಾಳಿಯಲ್ಲಿ ತೇಲಿಬಿಡುತ್ತಿವೆ. ಬಾಳೆ ಅಡಕೆ ಹೂವು ಎಲೆ ಹಣ್ಣು ಕಾಯಿ-ನೋಡುವರ ಕಣ್ಣಲ್ಲಿ ಮಂಗಳದ ಛಾಪನ್ನು ಒತ್ತುತ್ತಿವೆ.
ಇತ್ತ-ಕಟ್ಟಿದ ತೋರಣದ ಮಿಕ್ಕ ಬೇವಿನ ಚಿಗುರು ಹೂವನ್ನು ಮಾವಿನ ತಳಿರಿನೊಡನೆ ನಂಚಿ ತಿನ್ನುತ್ತಿದೆ ಅಲ್ಲೆ ಕಟ್ಟಿರುವ ಹರಕೆಯ ಕುರಿ. ಇನ್ನೊಂದು ಘಳಿಗೆಯಲ್ಲಿ ತಾನೂ ಬಲಿಯಾಗುತ್ತಿರುವೆನೆಂಬುದನ್ನು ಊಹಿಸಲರಿಯದ ಆ ಕುರಿ ತನಗೆಟುಕದ ಹೊಂಬಾಳೆಯ ಕಡೆಗೂ ಆಶೆಗಣ್ಣು ಚೆಲ್ಲಿ ಗೋಣುಚಾಚುತ್ತಿದೆ. ಅಲ್ಲಿಯವರೆಗೂ ಅದನ್ನು ಬಿಡುವರೇ ಮೂಹೂರ್ತಕಾಲ ಸಮೀಪಿಸಿದ ಜನ ? ಎಳೆದು ತಂದು ಕಾಲು ಹಿಡಿದು ಅಂಗಾತ ಮಲಗಿಸಿ ಕತ್ತನ್ನು ನೀಳಮಾಡಿ ಬಿಳಿಯ ತುಪ್ಪಟವನ್ನು ನೀವಿ ಓರೆಮಾಡಿ ಹರಿತವಾದ ಅಲಗಿನಿಂದ ಕೊಯ್ದರು. ಚೀರಲೂ ಆರದ ಅದರ ದುಃಖದ ಒತ್ತಡ ಕೆಂಪು ಬಿಸಿರಕ್ತವಾಗಿ ಚಿಮ್ಮಿ ಪುಟಿಯಿತು. ಅಲ್ಲಿಗೆ ಹಬ್ಬದಲ್ಲಿ ಮಾಡಲೇಬೇಕಾದೊಂದು ಮುಖ್ಯ ಕೆಲಸ ಮಾಡಿಯಾಯಿತು-ಇನ್ನಿರುವುದೆಲ್ಲಾ ತಿನ್ನುವುದೊಂದೆ !
ಶೀತಕಾಲದಲ್ಲಿ ಚಳಿ ಸಹಿಸಲಾರೆನೆಂದು ಮೈತುಂಬ ಕಂಬಳಿ ಹೊದ್ದೇ ಹುಟ್ಟಿಬಂದ ಆ ಕುರಿಯ ಪಾಡೇನಾಯಿತು ? ಅದದ್ದೆಲ್ಲಾ ದೇವರ ಹೆಸರಲ್ಲಾಯಿತಲ್ಲಾ !
ಆ ಮಂಗಳಭೀಕರ ಮುಗ್ಧ ಘೋರ ಸಂದರ್ಭದಲ್ಲಿ ಬಸವಣ್ಣನವರು ಪ್ರಶ್ನಿಸುತ್ತಾರೆ-ಕೊಂದವರುಳಿದರೇ-ಎಂದು. ಇಲ್ಲ ! ಅವರೂ ಸಾವಿನ ಸರದಿಯ ಸಾಲಿನಲ್ಲಿ ನಿಂತಿರುವರು. ಕೊಂದವರನ್ನು ಕೊಲ್ಲುವನೊಬ್ಬನಿದ್ದಾನಲ್ಲ ?! ಅವನು ಅವರ ಹಿಂದೆಯೇ ಪ್ರಳಯರುದ್ರನಾಗಿ ಹರಿತವಾದ ಭಾರವಾದ ಖಡ್ಗವೆತ್ತಿ ಅವರ ಹೆಕ್ಕತ್ತಿಗೇ ಗುರಿಯಿಟ್ಟು ನಿಂತಿದ್ದಾನಲ್ಲ ?!
ಅಂದೇ ಹುಟ್ಟಿ ಅಂದೇ ಸತ್ತಿತೆಂಬಷ್ಟು ಶೀಘ್ರಮರಣಕ್ಕೆ ತುತ್ತಾದ ಬಲಿಪಶು ಸೇಡುತೀರಿಸಿಕೊಳ್ಳದೆ ಬಿಡದು-ಕಾಣದ ದೇವರ ಎತ್ತಿದ ಕೈಯ ಮಿಂಚುವ ಖಡ್ಗದ ಸಿಡಿಲೇಟಿನ ಮೂಲಕ !
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.