Hindi Translationआशा नहीं मिटती, क्रोध नहीं हटता,
क्रूरता, कुभाषा, कपट न छूटने तक
तू कहाँ? शिव कहाँ? ह्ट जा पगले
भवरोग-तिमिर न फटने तक
कूडलसंगमदेव कहाँ? तू कहाँ? पगले ॥
Translated by: Banakara K Gowdappa
English Translation Unless your greed abates, your anger cools,
Unless foul words and cruelty and fraud
Depart, what is the chance to meet
Between God and you? Avaunt, you fool!
Unless the darkness of this world's malady
Clears up, where is the chance to meet
Between Lord Kūḍala Saṅgama and you, you fool?
Translated by: L M A Menezes, S M Angadi
Tamil Translationவிருப்பமடங்காது, சினம் நீங்காது,
ஆகாவசைமொழியும், கயமையும் நீங்காவரை,
நீ எங்கே, சிவனெங்கே, அடைவாயோ, மருளே,
பிறவிப்பிணியெனு மிருளை யறியாவரை,
கூடலசங்கைய னெங்கே -- நீ -- எங்கே மருளே.
Translated by: Smt. Kalyani Venkataraman, Chennai
Telugu Translationఆర్తి నణగదు; క్రోధముడుగదు
క్రూరకుభాషా కుహకము విడనంతదాక
నీ వెక్కడ? శివు డెక్కడ? పొమ్మాకడకో వెడగా?
భవరోగమను తిమిరము తెలియనందాక
కూడల సంగయ్య యెక్కడ నీ వెక్కడ? వెడగా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಬೀದಿಯ ಹುಚ್ಚನನ್ನು ನೋಡಿರಬಹುದು. ಬಿದ್ದ ಚಿಂದಿಬಟ್ಟೆಯನ್ನು ಹರಿದ ಕಾಗದವನ್ನು ಹಾಳು ಮೂಳನ್ನು ಅವನು ಆಯುವನು. ಕಂತೆ ಬೊಂತೆ ಕಟ್ಟುವನು. ಕಂಕುಳಲ್ಲಿ ಹೆಗಲ ಮೇಲೆ ಹೊರುವನು-ಉಳಿದುದನ್ನು ಕೈಯಿಕಾಲುಕುತ್ತಿಗೆಗೆ ಸುತ್ತಿ ಸಿಂಗರಿಸಿಕೊಂಡೆನೆಂದು ಬೀಗುವನು. ಒಮ್ಮೆ ರೇಗುವನು, ಒಮ್ಮೆ ಕೊಳಕು ಮಾತಾಡಿ ಕೂಗುವನು. ಒಮ್ಮೆ ರಹಸ್ಯವಾಗಿ ಸಂಧಾನ ನಡೆಸುತ್ತಿರವವನಂತೆ ತನ್ನಲ್ಲಿ ತಾನೇ ಪಿಸುಗುಟ್ಟುವನು-ನೋಡಿದವರಿಗೆ ಕಗ್ಗಂಟಾಗಿ ಕಾಣುವನು-ಇವನು ಮಾನಸಿಕ ರೋಗಿ.
ಹೀಗೆ ಭವರೋಗಸಂಸಾರಿಯನ್ನು ಯಾರೂ ಗುರುತಿಸಲರಿಯರು-ಎಲ್ಲರೂ ಅವನಂತೆಯೇ ಆಗಿ-ಯಾರಿಗೂ ಅವನು ಅಸ್ವಸ್ಥನೆನಿಸುವುದಿಲ್ಲ ಕೂಡ. ಆದರೂ ಮೇಲೆ ಹೇಳಿದ ಮಾನಸಿಕ ರೋಗದ ಆ ಹುಚ್ಚನಿಗಿಂತ ಭವರೋಗದ ಈ ಸಂಸಾರಿ ತೀರ ಭಿನ್ನವೇನೂ ಅಲ್ಲ. ಇವನೂ ಈ ಸಂಸಾರ ಮಾರ್ಗದಲ್ಲಿ ಹೇಯವಾದುದನ್ನೆಲ್ಲ ಎತ್ತಿಕೊಂಡು ಎದೆಗವಚಿಕೊಳ್ಳುತ್ತಾನೆ. ಕರುಣಿಸುವೆಡೆ ಕ್ರೌರ್ಯ ತೋರಿಸುತ್ತಾನೆ. ಪ್ರೀತಿಸುವೆಡೆ ಕ್ರೋಧಿಸುತ್ತಾನೆ. ಸರಸಸಲ್ಲಾಪದೆಡೆ ಕುಹಕವಾಡುತ್ತಾನೆ-ಈ ವೈಪರೀತ್ಯದ ಹುಚ್ಚು ಬಿಡುವವರೆಗೆ-ಅವನಿಗೆ ಮತ್ತು ಶಿವನಿಗೆ ಸಮರಸಸಂಬಂಧವೇರ್ಪಡುವುದಿಲ್ಲವೆನ್ನುವರು ಬಸವಣ್ಣನವರು.
ವಿ : ಆರತವೆಂದರೆ ಕಾಮ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.