Hindi Translationसर्प-दंशित व्यक्तियों से बातें कर सकते हैं
भूत-ग्रस्त व्यक्तियों से बातें कर सकते हैं;
धन-पिशाच ग्रस्त व्यक्तियों से बातें नहीं कर सकते;
निर्धनता रूपी मांत्रिक के आते ही
बोलते हैं, कूडलसंगमदेव॥
Translated by: Banakara K Gowdappa
English Translation You can make them talk
if the serpent
has stung
them.
You can make them talk
if they're struck
by an evil planet.
But you can't make them talk
if they're struck dumb
by riches.
Yet when Poverty the magician
enters, they'll speak
at once,
O lord of the meeting rivers.
Translated by: A K Ramanujan Book Name: Speaking Of Siva Publisher: Penguin Books ----------------------------------
Question you may one bitten by a snake;
Question you may one ghost-possessed:
You cannot question one possessed
By the ghost of wealth.... But if
The exorcist called poverty
Draw near, he speaks at once,
O Kūḍala Saṅgama Lord!
Translated by: L M A Menezes, S M Angadi
Tamil Translationபாம்பு தீண்டியோரைப் பேச வைக்கலாம்,
பேய் பிடித்தோரைப் பேச வைக்கலாம்.
செல்வப்பேய் பிடித்தோரைப் பேசவைக்க வியலுமோ? காணாய்
“வறுமை” எனும் மந்திரவாதி வரின்
உடனே பேசுவரையனே, கூடல சங்கம தேவனே.
Translated by: Smt. Kalyani Venkataraman, Chennai
Telugu Translationపాము కఱచిన వారిని పలికింప నగు?
గాలి సోకిన వారిని పలికింపనగు
సిరి సోకు వారల పలికింపరాదు సుమీ!
పేదఱికమను మంత్రవాది రాగ
తక్షణమే పల్కెదరయ్యా కూడల సంగమదేవా!
Translated by: Dr. Badala Ramaiah
Urdu Translationسانپ نگلےہوئےلوگوں کی زباں کھل جائے
اورشیطان گزیدوں کی زباں کھل جائے
لیکن اس شخص کےہونٹوں پہ نہ جنبش ہوگی
جس پہ قابض ہوفقط سیم کا زرکا شیطاں
صرف اُس و قت ہی شخص کرے گا باتیں
جبکہ افلاس کا سایہ ہومسلّط اس پر
اے مری جان مرے کوڈلا سنگم دیوا
Translated by: Hameed Almas
ಸ್ಥಲ -
ಭಕ್ತನ ಜ್ಞಾನಿಸ್ಥಲವಿಷಯ -
ಸಿರಿ-ಸಂಪತ್ತು
ಶಬ್ದಾರ್ಥಗಳುಗರ = ದೆವ್ವ; ಸಿರಿ = ಸಂಪತ್ತು;
ಕನ್ನಡ ವ್ಯಾಖ್ಯಾನಸಿರಿಯಿಂದ ಮೆರೆಯಬಾರದು
ಐಶ್ವರ್ಯದಿಂದ ಮದೋನ್ಮತ್ತರಾದ ಜನರ ಸ್ಥಿತಿಯನ್ನು ಇಲ್ಲಿ ಅಣ್ಣನವರು ಬಣ್ಣಿಸಿದ್ದಾರೆ. ಒಬ್ಬ ಮನುಷ್ಯನಿಗೆ ಹಾವು ಕಚ್ಚಿದಾಗ ಮೈಯಲ್ಲೆಲ್ಲಾ ವಿಷವೇರಿ ಮೂರ್ಛೆಕೊಂಡುದುದರ ಪರಿಣಾಮವಾಗಿ ಮಾತೇ ನಿಂತುಹೋಗುತ್ತದೆ. ಆದರೆ ಅವನಿಗೆ ಒಳ್ಳೆಯ ಔಷಧವನ್ನು ಕೊಟ್ಟು ಸುಸ್ಥಿತಿಗೆ ತಂದು ಮಾತನಾಡುವಂತೆ ಮಾಡಬಹುದು. ಇದೇ ರೀತಿ ಭೂತ ಒಬ್ಬ ವ್ಯಕ್ತಿಯ ಶರೀರವನ್ನು ಹೊಕ್ಕಾಗ ಅವನು ಸಹಜ ರೀತಿಯಲ್ಲಿ ಮಾತನಾಡಲಾರ. ಆದರೆ ಮಂತ್ರವಾದಿಯೊಬ್ಬ ಅಂಥವನನ್ನೂ ತನ್ನ ಮಂತ್ರ ಶಕ್ತಿಯಿಂದ ಸಹಜ ಸ್ಥಿತಿಗೆ ಬರುವಂತೆ ಮಾಡಿ ಸರಿಯಾದ ರೀತಿಯಲ್ಲಿ ಮಾತನಾಡುವಂತೆ ಮಾಡಬಹುದು. ಆದರೆ ಐಶ್ವರ್ಯವೆಂಬ ಭೂತ ಹಿಡಿದುಕೊಂಡಿರುವ ಸಿರಿವಂತನನ್ನು ಮಾತ್ರ ಮಾತನಾಡುವಂತೆ ಮಾಡಲು, ಅವನ ಸಂಗಡ ಮಾತನಾಡಲು ಎರಡೂ ಸಾಧ್ಯವಿಲ್ಲ. ಏಕೆಂದರೆ ಐಶ್ವರ್ಯ ಬಲದಿಂದ ಅಹಂಕಾರ ಅವನ ತಲೆಗೇರಿರುತ್ತದೆ. ಆದ್ದರಿಂದ ಅವನು ಲೋಕಕಂಠಕನಾಗುತ್ತಾನೆ. ಹಿಂದಿನ ಸಮಾಜದಲ್ಲಿ ಯಾರೇ ಆಗಲಿ ಲೋಕಸೇವಕನಾಗದಿದ್ದರೂ ಚಿಂತೆಯಿಲ್ಲ ಲೋಕಕಂಠಕನಾಗದಿದ್ದರೆ ಅಷ್ಟೇ ಸಾಕು. ಈ ಲೋಕಕಂಠಕತನನಿವಾರಣೆಯಾಗಬೇಕಾದರೆ ಮೊದಲು ಆ ವ್ಯಕ್ತಿಯ ಅಹಂಕಾರ ದೂರವಾಗಬೇಕು. ಹಾಗಾದರೆ ಆ ಅಹಂಕಾರವನ್ನು ಹೊಡೆದೋಡಿಸುವ ಮಂತ್ರವಾದಿ ಯಾರು? ಆ ಮಂತ್ರವಾದಿಯೇ ಬಡತನ. ಅವನು ಮಾತನಾಡುವುದು ಯಾವಾಗ? ಆ ಬಡತನವೆಂಬ ಮಂತ್ರವಾದಿ ಬಂದ ತಕ್ಷಣವೇ ಎಂದರೆ ಬಡತನ ಪ್ರಾಪ್ತವಾದಕೂಡಲೇ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.