ಭಕ್ತಿ ಎಂತಹುದಯ್ಯಾ? ದಾಸಯ್ಯ ಮಾಡಿದಂತಹುದಯ್ಯಾ.
ಭಕ್ತಿ ಎಂತಹುದಯ್ಯಾ? ಸಿರಿಯಾಳ ಮಾಡಿದಂತಹುದಯ್ಯಾ.
ಭಕ್ತಿ ಎಂತಹುದಯ್ಯಾ? ನಮ್ಮ ಸಿಂಧುಬಲ್ಲಾಳ ಮಾಡಿದಂತಹುದಯ್ಯಾ.
ಭಕ್ತಿ ಎಂತಹುದಯ್ಯಾ? ಕೂಡಲಸಂಗಮದೇವಾ,
ನೀ ಬಾಣನ ಬಾಗಿಲ ಕಾಯ್ದಂತಹುದಯ್ಯಾ.
Hindi Translationभक्ति कैसी? जैसी दासय्या ने की थी,
भक्ति कैसी? जैसी सिरियाळ ने की थी,
भाक्ति कैसी? जैसी सिंधु बल्लाळ ने की थी;
भक्ती कैसी? कूडलसंगमदेव
जैसी तुमने बाण के द्वार की रखवाली की थी ॥
Translated by: Banakara K Gowdappa
English Translation What is devotion? It is
As Dāsayya did practise it.
What is devotion? It is
As Siriyāḷa practised it.
What is devotion? It is
As our Sindhu-Ballāḷa
Did practise it.
What is devotion, Lord
Kūḍala Saṅgama? It is as you
Kept guard at Baṇa's door!
Translated by: L M A Menezes, S M Angadi
Tamil Translationபக்தி எத்தன்மைத் தையனே?
தாசையன் செய்ததனைய தையனே.
பக்தி எத்தன்மைத்தையனே?
சிறுத்தொண்டன் செய்ததனைய தையனே.
பக்தி எத்தன்மைத்தையனே?
சிந்துவல்லாளன் செய்ததனைய தையனே.
பக்தி எத்தன்மைத்தையனே?
கூடல சங்கம தேவனே
நீ பாணனின் வாயிலைக் காத்ததனைய தையனே.
Translated by: Smt. Kalyani Venkataraman, Chennai
Telugu Translationభక్తి ఎట్టిదయ్యా? దాసయ్య చేసినట్టిదయ్యా,
భక్తి ఎట్టిదయ్యా? సిరియాళుడు చేసినట్టిదయ్యా,
భక్తి ఎట్టిదయ్యా? మా సింధుబళ్ళాలుడు చేసినట్టిదయ్యా,
భక్తి ఎట్టిదయ్యా సంగమ దేవా?
నీవు బాణుని వాకిట కాచునట్టిదయ్యా.
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಜ್ಞಾನಿಸ್ಥಲವಿಷಯ -
ಭಕ್ತಿ
ಶಬ್ದಾರ್ಥಗಳುಭಕ್ತಿ = ದೇವರ ಮೇಲಿನ ಸ್ನೇಹ;
ಕನ್ನಡ ವ್ಯಾಖ್ಯಾನಭಕ್ತಿ ಎಂದರೇನೆಂದು ಯಾರಾದರೂ ಪ್ರಶ್ನಿಸಿದರೆ-ಅದಕ್ಕೆ ಬಸವಣ್ಣನವರು-ಅದು ಪರಮಪ್ರೇಮ ಸ್ವರೂಪಿ ಎಂದು ಮುಂತಾಗಿ ವಿವರಣಾತ್ಮಕವಾದ ಉತ್ತರ ಕೊಡುವುದಿಲ್ಲ. ಅದು ದೇವರದಾಸಿಮಯ್ಯ-ಸಿರಿಯಾಳ-ಬಲ್ಲಾಳ ಮುಂತಾದ ಶರಣರು ಮಾಡಿದಂಥಾದ್ದೆಂದು ನಿದರ್ಶನಪೂರ್ವಕವಾಗಿ ಉತ್ತರ ಕೊಡುವರು.
ಭಕ್ತಿಯೆನ್ನುವುದು ಬರಿಯ ಸ್ತೋತ್ರವಲ್ಲ, ಪೂಜೆಯಲ್ಲ, ಭಕ್ತಿ ಮಾಡುವೆನೆಂದಾಗ-ಸಮಯ ಬಂದರೆ-ಉಟ್ಟ ಬಟ್ಟೆಯನ್ನೂ ದಾನ ಕೊಟ್ಟು ಬತ್ತಲೆಯಾಗಬೇಕಾದೀತು, ಮಕ್ಕಳ ಮೇಲಣ ವ್ಯಾವೋಹವನ್ನೂ ಬಿಡಬೇಕಾದೀತು, ಹೆಂಡತಿಯ ಮೇಲಣ ಅಭಿಮಾನವನ್ನೂ ತೊರೆಯಬೇಕಾದೀತು. ಹೀಗೆ ದಾಸಿಮಯ್ಯ ಮುಂತಾದವರು ಶಿವನ ಕಠಿಣ ಪರೀಕ್ಷೆಗೆ ಒಳಗಾಗಿ ತಮ್ಮದೆನ್ನುವುದೆಲ್ಲವನ್ನೂ ಬಿಟ್ಟುಕೊಟ್ಟು ಶಿವ ಸಾಮ್ರಾಜ್ಯದ ಹರಿಕಾರರಾದರು.
ಒಂದು ಪಕ್ಷ ಇದು ನಮಗೂ ಸಾಧ್ಯವಾದರೆ-ಶಿವನು ತನ್ನ ಪರಮಭಕ್ತನಾದ ಬಾಣನನ್ನು ರಕ್ಷಿಸಲೋಸುಗ ಅವನ ಮನೆಯ ಬಾಗಿಲನ್ನು ಕಾಯುವ ಭಟನೂ ಆಗಿ ನಿಂತಂತೆ-ನಮ್ಮನ್ನೂ ಆ ಶಿವನು ರಕ್ಷಿಸದೆ ಬಿಡನು. ಅದಕ್ಕೆ ಪಾತ್ರರಾಗುವುದೇ ಭಕ್ತಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.