ಲೇಸೆನಿಸಿಕೊಂಡು ಐದು ದಿನ ಬದುಕಿದರೇನು?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು?
'ಜೀವಿತಂ ಶಿವಭಕ್ತಾನಾಂ| ವರಂ ಪಂಚ ದಿನಾನಿ ಚ||
ನಾಜಕಲ್ಪಸಹಸ್ರೇಭ್ಯೊ| ಭಕ್ತಿಹೀನಸ್ಯ ಶಾಂಕರಿ'||
ಎಂದುದಾಗಿ
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನೋ?
Art
Manuscript
Music Courtesy:
Video
TransliterationLēsenisikoṇḍu aidu dina badukidarēnu?
Lēsenisikoṇḍu nālku dina badukidarēnu?
Lēsenisikoṇḍu mūru dina badukidarēnu?
Lēsenisikoṇḍu eraḍu dina badukidarēnu?
'Jīvitaṁ śivabhaktānāṁ| varaṁ pan̄ca dināni ca||
nājakalpasahasrēbhyo| bhaktihīnasya śāṅkari'||
endudāgi
kūḍalasaṅgana śaraṇara vacanadalli
lēsenisikoṇḍu ondu dina badukidarēnō?
Hindi Translationउत्तम कहाकर पाँच दिन जीने से क्या ?
उत्तम कहाकर चार दिन जीने से कया?
उत्तम कहाकर तीन दिन जीने से क्या?
उत्तम कहाकर दो दिन जीने से क्या?
जीवितं शिवभक्तानां वरं पंच दिनानि च
अजकल्प सहस्रेभ्यो भक्ति हीनस्य शांकरी
अतः कूडलसंगमदेव के शरणों ऐसे उत्तम कहाकर
एक दिन जीने से क्या!
Translated by: Banakara K Gowdappa
English Translation What does it matter for a man
Of good repute, to live five days?
What does it matter to live four,
Or three, or two? It is said:
'A Śivabhakta's life is good
Were it but for a week;
However, a life without devotion,
O Śaṅkari
Is worthless, though it lasts
A thousand of Brahma's cycles of time'
Accordingly,
Is it not enough, praised by
Kūḍala Saṅga's Śaraṇās
To live a single day!
Translated by: L M A Menezes, S M Angadi
Tamil Translationநன்றென்றெண்ணி ஐந்துநாள் வாழலாகாதோ?
நன்றென்றெண்ணி நான்குநாள் வாழலாகாதோ?
நன்றென்றெண்ணி மூன்றுநாள் வாழலாகாதோ?
நன்றென்றெண்ணி இரண்டுநாள் வாழலாகாதோ?
“ஜீவிதம் சிவபக்தானாம் வரம் பஞ்ச தினானி ச|
அஜகல்ப ஸஹஸ்ரேப்யோ பக்தி ஹீனஸ்ய சாங்கரீ ||”
என்பதால் கூடல சங்கனின் அடியார் மொழியை
நன்றென்றெண்ணி ஒருநாள் வாழலாகாதோ?
Translated by: Smt. Kalyani Venkataraman, Chennai
Urdu Translationوہ پانچ دن کہ گزرجائیں جو فراغت سے
مری نظرمیں نہیں ہیںحیات کا حاصل
یا چاردن کہ گزرجائیں جوفراغت سے
مری نظرمیںنہیں ہیںحیات کا حاصل
وہ تین دن کہ گزرجائیں جوفراغت سے
مری نظرمیںنہیں ہیںحیات کا حاصل
یاد دہی دن کہ گزرجائیں جوفراغت سے
مری نظرمیںنہیں ہیںحیات کا حاصل
بُھلاکےاس کوہزاروں برس کےجینےسے
جوبن کےشیوبھگت پانچ دن اگرجی لیں
وہ پانچ د ن ہی ہزاروں برس سے بہترہیں
توآؤکوڈلا سنگا کے پاک شرنوں کی
ہرایک بات سنیں اورنیک نامی سے
گزارلیں جو یہاں ایک دن ہی بہترہے
Translated by: Hameed Almas
ಸ್ಥಲ -
ಭಕ್ತನ ಜ್ಞಾನಿಸ್ಥಲವಿಷಯ -
ಜೀವನ
ಶಬ್ದಾರ್ಥಗಳುಅಜಕಲ್ಪ = ; ಲೇಸು = ಒಳ್ಳೆಯದು; ಶಾಂಕರಿ = ;
ಕನ್ನಡ ವ್ಯಾಖ್ಯಾನಬದುಕೆಂದರೆ ಬಹುಕಾಲ ಬದುಕುವುದಲ್ಲ. ಬತಗೆಟ್ಟ ಬದುಕು ದೀರ್ಘವಾದಷ್ಟು-ಬದುಕುವವನಿಗೂ ಮರ್ಯಾದೆಯಲ್ಲ, ಅವನ ನೆರೆಹೊರೆಯ ಜನಕ್ಕೂ ನೆಮ್ಮದಿಯಲ್ಲ. ಬದುಕಿದರೆ-ಅವನು ಸತ್ತ ಮೇಲೆ ಅವನ ಆ ಬದುಕನ್ನು-ಬದುಕಬೇಕಾದ ಜನ ಬಯಸುವಂತಿರಬೇಕು. ಅವನ ಜೀವನಿತಸಂದರ್ಭಗಳ ಸಂಕೀರ್ಣತೆ, ಅಲ್ಲಿ ಅವನು ತಾಳಿದ ಧೀರ ನಿಲವು, ಇಟ್ಟ ಧೀರೋದಾತ್ತ ಹೆಜ್ಜೆ-ಆ ಉದ್ದಕ್ಕೂ ಅವನು ಉಳಿಸಿ ಬೆಳೆಸಿಕೊಂಡು ಬಂದ ನಿಷ್ಠೆ ಮುಂತಾದವು ಜನರ ಮನಸ್ಸಿಗೆ ಹಿಡಿಸುವಂತಿರಬೇಕು. ಅಂಥ ಸಾಹಸ ಸುಂದರ ಸತ್ವಶಾಲೀ ಬದುಕನ್ನು ಎಷ್ಟು ಸ್ವಲ್ಪಾವಧಿ ಬದುಕಿದರೂ ಸಾಕು ಅದು ಮಹತ್ತರವೆ-ಕ್ಲೈಬ್ಯ ಕುಬ್ಜ ಭಕ್ತಿವಿಹೀನ ಜೀವನವನ್ನು ಎಷ್ಟು ದೀರ್ಘಾವಧಿ ಬದುಕಿದರೂ ಕ್ಷುದ್ರವೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.