ಹಸಿವಾದೊಡುಂಬುದನು, ಸತಿಯ ಸಂಭೋಗವನು
ಆನಾಗಿ ನೀ ಮಾಡೆಂಬವರುಂಟೆ;
ಮಾಡುವುದು, ಮಾಡುವುದು ಮನಮುಟ್ಟಿ:
ಮಾಡುವುದು, ಮಾಡುವುದು ತನುಮುಟ್ಟಿ
ತನುಮುಟ್ಟಿ ಮನಮುಟ್ಟದಿರ್ದೊಡೆ
ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ.
Hindi Translationभूख लगने पर खाने के लिये,
पत्नी से संभोग करने के लिए,
कोई किसी और से कहता है?
मन लगाकर स्वयं करना है
तन लगाकर स्वयं करना है
तन लगे पर मन न लगे,
तो कूडलसंगमदेव कभी प्रसन्न नहीं होंगे ॥
Translated by: Banakara K Gowdappa
English Translation To sate your hunger or to sate your lust
Is never done by deputy!
One ought to do it, do with heart,
One ought to do it, do it oneself.
If body acts, without the heart,
It does not please at all
Lord Kūḍala Saṅgama.
Translated by: L M A Menezes, S M Angadi
Tamil Translationபசியாயினுண்பதையும், கிழத்தியுடன் கூடுவதையும்
தன்பொருட்டு “நீ செய்” என்பவருண்டோ?
செய்வது, செய்வது மனம் நிறைந்து,
செய்வது, செய்வது உடல் நிறைந்து,
உடல் நிறைந்து, மனம் நிறைந்து ஆற்றாயெனின்
கூடல சங்கம தேவன் எவ்வகையிலும் ஏலான்.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನತನಗೆ ಹಸಿವಾದರೆ ತಾನೇ ಉಣ್ಣಬೇಕು, ತನಗೆ ರತಿಯಾದರೆ ತಾನೇ ಹೆಂಡತಿಯೊಡನೆ ಸಂಭೋಗಿಸಬೇಕು. ನನಗೆ ಹಸಿವಾಯಿತು-ನೀನು ಉಣ್ಣು ಎಂದರೆ, ನನಗೆ ರತಿಯಾಯಿತು-ನೀನು ಸಂಭೋಗಿಸು ಎಂದರೆ ಅಪಹಾಸ್ಯವಾದೀತು. ಏಕೆಂದರೆ ಅವು ತನ್ನದೇ ಆದ ದೇಹ ಮುಟ್ಟಿ ಮನ ಮುಟ್ಟಿ ನಡೆಯಬೇಕಾದ ತೀರ ವೈಯಕ್ತಿಕ ರಸಕ್ರಿಯೆಗಳು. ಅವನ್ನು ಒಬ್ಬರಿಗಾಗಿ ಇನ್ನೊಬ್ಬರು ಮಾಡಲಾಗುವುದಿಲ್ಲ.
ಹಾಗೆಯೇ ಶಿವಪೂಜೆಯು ತನುಮುಟ್ಟಿ ಮನಮುಟ್ಟಿ ತನ್ನಿಂದಲೇ ನಡೆಯಬೇಕಾದೊಂದು ರಾಸಲೀಲೆ. ಕೂಲಿಯ ಭಕ್ತಿಗೆ ಕೂಲಿಯ ಪೂಜೆಗೆ ದೇವರೊಲಿಯುವುದಿಲ್ಲ-ಎನ್ನುತ್ತ-ಜನರು ದೇವರ ಪೂಜೆಯನ್ನು ನೇರವಾಗಿ ತಾವೇ ಮಾಡದೆ ಇನ್ನೊಬ್ಬರ ಕೈಯಲ್ಲಿ ಮಾಡಿಸುವ ಛಾಂದಸ ಪ್ರವೃತ್ತಿಯನ್ನು ಬಸವಣ್ಣನವರು ಕಟುವಾಗಿ ಖಂಡಿಸುತ್ತಿರುವರು.
ಇಷ್ಟಲಿಂಗದ ಪೂಜೆಯನ್ನು ತಾನೇ ಮಾಡಬೇಕೆಂಬುದಿರಲಿ, ದೇವಾಲಯದಲ್ಲಿ ಶಿವಲಿಂಗಪೂಜೆಯನ್ನೂ ಅರ್ಚಕನ ಮಧ್ಯಸ್ಥಿಕೆಯಿಲ್ಲದೆ ತಾನೇ ಮಾಡಬೇಕೆಂಬುದು ಬಸವಣ್ಣನವರ ಚಳುವಳಿ. ಅವರು ಪುರೋಹಿತ ಷಾಹಿಯ ಮಧ್ಯಸ್ಥಿಕೆಯನ್ನು ಸ್ವಂತ ಶಿವಧರ್ಮದಲ್ಲಿಯೂ ಸಹಿಸಲಿಲ್ಲ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.