ಬಸವಣ್ಣ   
Index   ವಚನ - 201    Search  
 
ಆಯುಷ್ಯವುಂಟು, ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ: ಆಯುಷ್ಯವು ತೀರಿ ಪ್ರಳಯವು ಬಂದರೆ ಆ ಅರ್ಥವನುಂಬುವರಿಲ್ಲಾ! ನೆಲನನಗಿದು ಮಡುಗದಿರಾ! ನೆಲ ನುಂಗಿದೊಡುಗುಳುವುದೆ? ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ! ನಿನ್ನ ಮಡದಿಗಿರಲೆಂದರೆ, ಮಡದಿಯ ಕೃತಕ ಬೇರೆ; ನಿನ್ನೊಡಲು ಕೆಡೆಯಲು ಮತ್ತೊಬ್ಬನಲ್ಲಿಗಡಕೆದೆ ಮಾಣ್ಬಳೆ? ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ; ಕೂಡಲಸಂಗನ ಶರಣರಿಗೊಡನೆ ಸವೆಸುವುದು.