ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ,
ಸಲೆ ನೆಲೆ ಸನ್ನಿಹಿತನಾಗಿರ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು.
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ-
ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದೊಡೆ,
ತನ್ನ ಭಕ್ತಿ ತನ್ನನೇ ಕೆಡಿಸುವುದು, ಕೂಡಲಸಂಗಮದೇವಾ.
Hindi Translationदीर्घ कालीन श्रम से एकत्र घास
एक चिनगारी से जैसे भस्म होती है,
वैसे निश्चित, लक्ष्यसन्निहित-
शरण की भक्ति एक दोष से नष्ट होती है
स्वधर्मार्जित पितृधन-
अधर्म से नष्ट करनेवाले पुत्रवत्
शिवसंपत्ति शिवार्पित करना छोड-,
औरों को अर्पित करने से
उसकी भक्ति उसी का नाश करेगी, कूडलसंगमदेव॥
Translated by: Banakara K Gowdappa
English Translation As a stack piled a long long time,
Laboriously,
May blaze with a single spark,
Even so the piety
Of one confirmed in sancity
May perish with a single sin.
Even as a son who wastes in vice
The wealth his father gathered virtuously-
If Śiva's riches are not given to Him,
But to another, one's own piety
Will ruin him, Lord
Kūḍala Saṅgama!
Translated by: L M A Menezes, S M Angadi
Tamil Translationபலகாலம் முயன்று திரட்டிய படப்பு
ஒரு பொறி நெருப்பி லெரிதற்போல,
நன்கு நிலைத்து அருகி யாற்றும் தொண்டன் பக்தி,
சிறு அலட்சியத்தால் கெடும்
அறம் மூலந்தேடிய தந்தை செல்வத்தைத்
தீ நெறியிலழிக்கும் மகனனைய,
சிவனுடைமையை சிவனுக்கீயாது பிறருக்கீயின்
தன்பக்தி தன்னையே அழிக்கும்
கூடல சங்கம தேவனே.
Translated by: Smt. Kalyani Venkataraman, Chennai
Telugu Translationకలకాలము ధావంతపడి పేర్చిన వరివామి
ఒక్క మిణుగురుచే మండి మసిjైునరీతి;
సరి సరి సన్నిహితుడై యున్న శరణుని భక్తి
చిన్న తప్పుచే చెడిపోవునయ్యా;
స్వధర్మమున కూర్చు తండ్రి యాస్తి
అధర్మమున చెఱచు కొడుకురీతి
శివుని సొమ్ము శివునకే వెచ్చింపక
వెచ్చింప పరులకు; తన భక్తియే
తన్ను గాల్చు కూడల సంగమదేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶಿವನು ತಂದೆ, ಅವನ ಸುಪುತ್ರನು ಶಿವಭಕ್ತ, ಭಕ್ತನಿಗೆ ಏನೆಲ್ಲ ಸೌಭಾಗ್ಯವಿದೆಯೋ ಅದೆಲ್ಲಾ ಶಿವನದೇ ಆಗಿದೆ. ಹೀಗಿರುವಲ್ಲಿ ಶಿವಭಕ್ತನು-ತಂದೆಯು ಅರ್ಜಿಸಿದ್ದನ್ನು ಕೆಟ್ಟ ಮಗನಂತೆ ಅಪವ್ಯಯ ಮಾಡದೆ-ಶಿವನ ಸ್ವತ್ತನ್ನೆಲ್ಲ ಶಿವ(ಜಂಗಮ)ನಿಗೇ ಸಲ್ಲಿಸಬೇಕು, ಒಮ್ಮೆಯಾಗಲಿ ಆಶಿವಕ್ಕೆ ವ್ಯಯವಾದರೆ ಅದು ಅನಾಚಾರ. ಇಂಥ ಅನಾಚಾರದಿಂದ ಆ ಭಕ್ತನು ಕಾಲದಿಂದಲೂ ಮಾಡಿಕೊಂಡು ಬಂದಿದ್ದ ಭಕ್ತಿಯೆಲ್ಲಾ-ಕಷ್ಟಪಟ್ಟು ಒಟ್ಟಿಕೊಂಡಿದ್ದ ಕುಳ್ಳಿನ ರಾಶಿಗೆ ಒಂದು ಕಿಡಿ ಬಿದ್ದರೆ ಹೇಗೋ ಹಾಗೆ-ಸುಟ್ಟು ಬೂದಿ ಯಾಗುವುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.