Hindi Translationखाते समय ‘नाहीं’ नहीं कहता,
पहनते समय ‘नाहीं’ नहीं कहता,
भाई बंधुओं के आने पर ‘नाहीं’ नहीं कहता;
लिंग के लिए ‘नहीं’ कहता,
जंगम के लिए ‘नहीं’ कहता,
आगंतुक शरणों से ‘नहीं’ कहता,
मरते समय अपने शरीर को
मंदिर ले जाने के लिए कहता है,
शव शिव से बेगारी लेना चाहता है?
कूडलसंगमदेव।
Translated by: Banakara K Gowdappa
English Translation He does not say he hasn't
Whenever he eats;
He does not say he hasn't
Whenever he clothes;
He does not say he hasn't
Whenever his kinsfolk come:
To Liṅga he says Nay,
To Jaṅgama says Nay,
And to the Saints who come..
When, dying, he asks to bear
His body to the temple,
Would the corpse have hired
God for no wage,
O Kūḍala Saṅgama Lord?
Translated by: L M A Menezes, S M Angadi
Tamil Translationஉண்ணற்கு இல்லையெனான், உடுத்தற்கு இல்லையெனான்,
உற்றார் வரின் இல்லையெனான்,
இலிங்கத்திற்கு ஈயான், மெய்யடியாருக்கு ஈயான்,
வந்த பழமை மிக்கோர்க்கு ஈயான்,
இறப்பின் உடலைக் கோயிலிலே இடு என்பான்,
இறைவனுக்குப் பிணம் ஊதியமின்றி தொண்டாற்றுமோ
கூடல சங்கம தேவனே.
Translated by: Smt. Kalyani Venkataraman, Chennai
ಶಬ್ದಾರ್ಥಗಳುಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಪುರಾತರು = ಹಿಂದಿನ ಕಾಲದ ಸುಪ್ರಸಿದ್ದ ಭಕ್ತರು;
ಕನ್ನಡ ವ್ಯಾಖ್ಯಾನತನಗಾದರೆ ಉಣ್ಣಲುಂಟು ಉಡಲುಂಟು-ಬಂದ ತನ್ನ ಬಂಧುಗಳಿಗೂ ಉಂಟು-ಆದರೆ ಲಿಂಗಕ್ಕೆ ಜಂಗಮಕ್ಕೆ ಶರಣಜನಕ್ಕೆ ಇಲ್ಲವೆಂಬ. ಸಾಯುವ ಸಮಯ ಬಂದಾಗ-ನನ್ನನ್ನು ದೇವಾಲಯಕ್ಕೆ ಒಯ್ಯಿರಿ, ದೇವರ ಸನ್ನಿಧಿಯಲ್ಲಿ ಪ್ರಾಣ ಬಿಡಬೇಕು, ನನ್ನ ದೇಹ ದೇವರಿಗೆ ಮೀಸಲು ಬಿಟ್ಟಿದ್ದೆ ಎನ್ನುವನು.
ತಿಂದುಂಡು ಮೆರೆಯುವಾಗ ದೇವರಿಗೆ-ಉದಾಸೀನದಿಂದ ಲೋಭದಿಂದ-ದೂರವಾಗಿದ್ದವನು ಸಾಯುವ ಸಮಯ ಬಂದಾಗ ತನ್ನ ಹೆಣದ ಕಾಣಿಕೆಯನ್ನು ಕೊಟ್ಟು ದೇವರಿಗೆ ಹತ್ತಿರವಾಗಬೇಕೆಂಬುದು ಅದೆಷ್ಟು ವಿಪರ್ಯಾಸ ! ಇಟ್ಟರೆ ಕೊಳೆತು ನಾರುವ, ನಾಯಿನರಿಗೆ ಮಾತ್ರ ತಕ್ಕುದಾದ ತನ್ನ ಹೆಣವನ್ನು ಮಹಾದಾನಿಯಾದ ದೇವರಿಗೆ ಬಿಟ್ಟುಹೋದ ದುರ್ದಾನಿಯವನು. ತನ್ನ ದೇಹವನ್ನು-ಅದರ ಕೌಮಾರ ಮತ್ತು ಯೌವನದ ಅವಧಿಯಲ್ಲಿ ದುರ್ವಿಷಯದಲ್ಲಿ ತೊಡಗಿಸಿದವನು-ಕೊಳೆತು ನಾರುವಾಗ ಅದನ್ನು ಶಿವನಿರ್ಗಪಿಸುವೆನೆನ್ನುವುದು ಅದೆಷ್ಟು ಬೀಭತ್ಸತ್ಯಾಗ !
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.