ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ!
ನಾಯ ಹಾಲು ನಾಯಿಗಲ್ಲದೆ, ಪಂಚಾಮೃತಕ್ಕೆ ಸಲ್ಲದಯ್ಯಾ.
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ, ಕಂಡಯ್ಯಾ!
Hindi Translationपापी का धन प्रायश्चित के लिए है
न कि सत्पात्र के लिए;
श्वान का दूध श्वान के लिए है,
न कि पंचामृत के लिए;
देखो, कूडलसंगमदेव के शरणों के अतिरिक्त
औरों को प्रदत्त अर्थ व्यर्थ है ॥
Translated by: Banakara K Gowdappa
English Translation The sinner's wealth serves not a worthy cause-
Only to expiate his sins!
A dog's milk serves only a dog,
Not for a five-fold bath.
Mark, Sir! The wealth you render any one
But our Kūḍala Saṅga's Śaraṇās,
Is given in vain!
Translated by: L M A Menezes, S M Angadi
Tamil Translationதீயோன் செல்வம், கழுவாய்க்கன்று, நற்செயலிற்காமோ?
நாயின்பால், நாய்க்கன்று, பஞ்சாமிர்தத்திற்காமோ?
நம் கூடல சங்கனின் அடியாருக்கன்று
ஈட்டும் செல்வம் பயனிலை காணாய், ஐயனே.
Translated by: Smt. Kalyani Venkataraman, Chennai
Telugu Translationపాపి సొత్తు ప్రాయశ్చిత్తమునకు గాక;
సత్పాత్రకు చెల్లదయ్య: కుక్కపాలు కుక్కకుగాక
పంచామృతమునకు పనికి రావయ్యా!
మా కూడల సంగని శరణులకు గాక
అన్యులకు పెట్టు ద్రవ్యము వ్యర్ధమయ్య:
Translated by: Dr. Badala Ramaiah
Urdu Translationکسی پاپی کی ان گنت دولت
نیک کاموںمیںسود مند نہیں
وہ پشیماں رہےگا آخرکار
جیسےکُتیا کا دودھ پلّے کو
کام آتاہے،کوئی اس سےمگر
پنج امرت بنا نہیں سکتا
اپنی پونجی کواپنی دولت کو
کوڈلا سنگما کےشرنوں پر
تم نچھاورنہ کرسکوتوسنو
ساراسرمایہ رائگاں ہوگا
Translated by: Hameed Almas
ಕನ್ನಡ ವ್ಯಾಖ್ಯಾನಪಾಪಿ ಸಂಪಾದಿಸಿದ ಧನ ಮೊತ್ತದಲ್ಲಿ ಎಷ್ಟೇ ಆಗಾಧವಾದುದಾದರೂ-ಅದು ಅವನು ಮಾಡಿದ ಮಹಾಪಾತಗಳ ಪರಿಹಾರಕ್ಕೆ ಕೈಗೊಳ್ಳುವ ಪ್ರಾಯಶ್ಚಿತ್ತದ ವೆಚ್ಚಕ್ಕೆ ಮಾತ್ರ ಬಳಕೆಯಾಗುವಷ್ಟು ನಿಕೃಷ್ಟ. ಆ ಐಶ್ವರ್ಯದ ಒಂದೊಂದು ಕಾಸೂ ಬಡವರ ಮುಗ್ಧರ ಅನಾಥರ ರಕ್ತದಲ್ಲಿ ಕಾದು, ಕಣ್ಣೀರಲ್ಲಿ ನೆಂದುದೆಂದ ಮೇಲೆ ಧರ್ಮಕಾರ್ಯಕ್ಕೆ ಬಳಕೆಯಾಗುವ ಯೋಗ್ಯತೆ ಎಲ್ಲಿದೆ ಅದಕ್ಕೆ ? ಅದು ಕಳ್ಳಿಗೆ ಮಾಂಸಕ್ಕೆ ಕಳ್ಳರಿಗೆ ಹಿಂಸೆಗೆ ಕಾಮಕ್ಕೆ ಕ್ರೌರ್ಯಕ್ಕೆ ವೆಚ್ಚವಾಗಲು ಗಂಟುಗಂಟಾಗಿ ಸಿದ್ಧವಾಗಿರುವುದು. ಹೀಗೆ ದೆವ್ವಕ್ಕೆ ಮೀಸಲಾದುದು ದೇವರಿಗೆ ಸಂದೀತೇ ? ಶರಣರಿಗಿಲ್ಲದ ದೇವರಿಗಿಲ್ಲದ ಈ ದೆವ್ವದ ಹಣ ತನ್ನ ಮೌಲ್ಯವನ್ನು ಉಳಿಸಿಕೊಳ್ಳಲಾರದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.