Hindi Translationबलि की भूमि, कर्ण का कवच,
खचर की अस्थि, शिबि का माँस
हाय व्यर्थ हो गये!
शिवभाक्ति मतिक्रम्य यद्दानं च विधीयते ।
निष्फलं तु भवेद्दानं रौरवं नरकं व्रजेत्।
अतः कूडल संग के शरणों के बिना जाने
किसने कीर्तिवार्ता हेतु धन दिया-,हाय व्यर्थ हुआ॥
Translated by: Banakara K Gowdappa
English Translation Bali's land gift and Karṇas amulet,
Khacara's bones and Śibi flesh,
Behold! have gone in vain!
"The charity made in spite
Of Shivabhakti is
Unprofitable charity,
And he who does it shall attain
Terrific hell!"
Therefore,
The charity made for reputation's sake
By one who knoweth not
Kūḍala Saṅga's Śaraṇās
Behold! is gone in vain!
Translated by: L M A Menezes, S M Angadi
Tamil Translationபலியின் பூமி கர்ணனின் கவசம் கசரனின் என்பு
சிபியின் ஊன் வீணாயிற்றன்றோ!
“சிவபக்தி மதிக்ரம்ய யத்தானம் ச விதீயதே!
நிஷ்பலம் து பவேத்தானம் ரௌரவம் நரகம் வ்ரஜேத்”
இதனால், கூடல சங்கமன் அடியார்க்கன்றி,
புகழ்ச்சியின் மாட்டு ஈவோன் செல்வம் வீணாயிற்றன்றோ,
Translated by: Smt. Kalyani Venkataraman, Chennai
ಶಬ್ದಾರ್ಥಗಳುಆಸ್ಥಿ = ಅಸ್ತಿ ; ಕವಚ = ಹೊದಿಕೆ, ಉಕ್ಕಿನ ಅಂಗಿ, ರಕ್ಷಾ ಮಂತ್ರ; ಕೌರ = ; ಖಚರ = ಆಕಾಶದಲ್ಲಿ ಓಡಾಡುವ ಯಕ್ಷ ಮೊದಲಾದ ದೇವತೆಗಳಲ್ಲಿ ಒಂದು ಭೇದ; ಭವ = ಜೀವನ; ವ್ರಜ = ಸಮೂಹ;
ಕನ್ನಡ ವ್ಯಾಖ್ಯಾನಶಿವಶರಣರಿಗೆ ಕೊಡುವವರು-ತಮ್ಮದೆಂಬುದೇನಿದೆಯೋ ಅದೆಲ್ಲಾ ಶಿವನದೇ ಎಂದೂ, ಆ ಶಿವನ ಸ್ವತ್ತನ್ನು ಶಿವಸ್ವರೂಪಿಗಳೇ ಆದ ಶಿವಶರಣರಿಗೆ ಒಪ್ಪಿಸುತ್ತಿರುವೆವೆಂದೂ ದಾಸೋಹಂಬುದ್ದಿಯಿಂದ ದಾನ ಮಾಡಬೇಕು. ಹಾಗಲ್ಲದೆ ತಾನು ತನ್ನದೆಂಬ ಅಹಂಕಾರ ಮಮಕಾರದಿಂದ-ವಾರ್ತೆಯಾಗಿ ಪ್ರಕಟವಾಗಲು, ಕೀರ್ತಿಯಾಗಿ ಹಬ್ಬಲು ಸ್ವತ್ತನ್ನೆಲ್ಲ ವಂಚಕರಿಗೆ ಹೊಗಳುಭಟ್ಟರಿಗೆ ಕೊಟ್ಟರೆ ಅದು ದಂಡವಾಗುವುದೆನ್ನುತ್ತ ಬಸವಣ್ಣನವರು ಬಲಿ-ಕರ್ಣ-ಖಚರ-ಶಿಬಿ ಎಂಬ ನಾಲ್ವರು ಪುರಾಣಪ್ರಸಿದ್ಧರ ನಿದರ್ಶನಗಳನ್ನು ಕೊಟ್ಟಿರುವರು,
ಬಲಿಯೊಬ್ಬ ರಾಕ್ಷಸರಾಜ-ಅವನು ಇಂದ್ರೈಶ್ವರ್ಯಕಾಮಿ. ಅಂಥವನು ವಾಮನನಿಗೆ ಭೂಮಿಯನ್ನು ಕೊಟ್ಟುದು ಸೊಕ್ಕಿನಿಂದಲೇ ಹೊರತು ಭಕ್ತಿಯಿಂದಲ್ಲ. ಕರ್ಣನು ಇಂದ್ರನಿಗೆ ತನ್ನ ಸಹಜ ಕವಚವನ್ನು ಕತ್ತರಿಸಿಕೊಟ್ಟುದು-ತನ್ನಂಥ ಶೂರನಿಗೆ ಯುದ್ಧ ಕವಚ ಬೇಕಿಲ್ಲವೆಂಬಂಥ ಅಹಂಕಾರದಿಂದಲ್ಲದೆ ಭಕ್ತಿಯಿಂದಲ್ಲ. ಖಚರನೆಂಬವನು ಯಜ್ಞ ಮಾಡುತ್ತಿದ್ದಾಗ-ಬ್ರಾಹ್ಮಣ ವೇಷದಿಂದ ಬಂದು ಬೇಡಿದ ನಾರಾಯಣನಿಗೆ-ಅವನು ತನ್ನ ಮೈಯ ಮೂಳೆಯನ್ನು ಕೊಟ್ಟುದು ಕರ್ಮಕ್ಕಾಗಿಯೇ ಹೊರತು ಭಕ್ತಿಗಾಗಿಯಲ್ಲ. ಮರೆಹೊಕ್ಕವರನ್ನು ಕಾಪಾಡುವ ವ್ರತಹಿಡಿದ ಶಿಬಿಯು ಒಬ್ಬ ರಾಜ. ಅವನು ಇಂದ್ರಾಗ್ನಿ ದೇವತೆಗಳಿಗೆ ಮಾಂಸವನ್ನು ತನ್ನ ಮೈಯಿಂದ ಕತ್ತರಿಸಿಕೊಟ್ಟುದು ಕೂಡ ಕೀರ್ತಿವಾರ್ತೆಗಾಗಿಯೇ ಹೊರತು ಭಕ್ತಿಗಾಗಿಯಲ್ಲವೆಂಬಂತೆ ಈ ವಚನದ ಧಾಟಿಯಿದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.