Hindi Translationकालाग्नि रुद्र के मिलन अपरिचित
दानादाल कहते रहते- हैं
दावानल प्रज्वलित हो, तो जैसे सियार
चिल्लाता है वैसे ही नरविंध्य में मनुज
तात्कालिक प्रेम न जानकर
वैभवार्थ आचरित भक्ति
रात में छत्री धराने के समान है
कूडलसंगमदेव॥
Translated by: Banakara K Gowdappa
English Translation Those who forget
The challenge of Rudra of the Doomsday fire,
Keep saying, 'grain' and 'split grain'.
Like a fox howling when the forest fire
Grows beyond bounds, these men
Dwell in a human waste.
The piety of one
Who does it for vainglorys sake,
Not knowing that such love
Is solely for the time,
Is like a sunshade borne at night,
O Lord Kūḍala Saṅgama!
Translated by: L M A Menezes, S M Angadi
Tamil Translationஊழித்தீக் கடவுளின் பிடியினை யறியார்
அஃறிணைக் பொருட்களனைய ரையனே
அடர்ந்த அடவியிலே தீப்படரின்
பெருங் குரலிலே ஊளையிடும்
நரியனையதாமையனே, மாந்தர் நாரடவியிலே
உரிய நேரத்தில் அன்புடன் ஈயாது
பெருமைக்குச் செய்யும் பக்தி
இருளிலே குடைபிடித்த தனையது
கூடல சங்கம தேவனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನವಿಂಧ್ಯವೆಂದರೆ ಕಾಡುಮೇಡು ತುಂಬಿರುವ ಪರ್ವತಪ್ರದೇಶ. ಅದು ಕಾಡುಪ್ರಾಣಿಗಳ ತವರು, ಕಳ್ಳಕಾಕರ ಬೀಡು ಕೂಡ. ನರವಿಂಧ್ಯವೆಂದರೆ ಕಾಡುಮೇಡಿಲ್ಲದೆ ಕಾಡುಪ್ರಾಣಿಗಳಿಲ್ಲದೆ ಮುಗ್ಧಜನರಿರುವ ಅವರಿಗೆ ಹತ್ತುಪಟ್ಟು ಕಳ್ಳಕಾಕರೇ ತುಂಬಿರುವ ಊರು ನಗರ ಪಟ್ಟಣಪ್ರದೇಶ. ಇಂಥ ನರವಿಂಧ್ಯದಲ್ಲಿ ಮನೆಗೆ ಶಿವಭಕ್ತರು ಬಂದರೆ ಅವರನ್ನು ಪ್ರೀತಿಯಿಂದ ಕಾಣಬೇಕು ಜನರು-ತಮ್ಮಲ್ಲಿರುವುದನ್ನು ಕಾಲೋಚಿತವಾಗಿ ನೀಡಿ ಉಪಚರಿಸಬೇಕು. ಯಾರಿಂದಲೂ ಇದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸುವುದಿಲ್ಲ ಶಿವಭಕ್ತರು. ಆದರೂ ಜನ ಸೇವಾಮಾರ್ಗದಲ್ಲಿ ಸರಳತೆಯನ್ನು ಅಳವಡಿಸಿಕೊಂಡರೆ ಘನತೆ ಬರುವುದಿಲ್ಲವೆಂದು-ಸೂಳೆಯ ಮಗ ಮಾಳದ ಮಾಡಿದಂತೆ ಬರೀ ಬಡಾಯಿಗೆ ಮಾಡುವರು, ಅಲ್ಲಿ ಕಳ್ಳಕಾಕರು ಸಂತೆ ಸೇರುವರು, ಇದು ಇರುಳಲ್ಲಿ ಕೊಡೆ ಹಿಡಿಸಿಕೊಂಡಂತೆ ಅವಿವೇಕದ ತಲೆತಿರುಕತನವಷ್ಟೆ.
ಇಂಥವರು ವ್ಯರ್ಥವಾದ ಸಡಗರದಲ್ಲಿ ಆಯುರ್ಮಾನವನ್ನು ಕಳೆಯುತ್ತ-ಸಾವು ಧುತ್ತೆಂದು ಎದುರಿಗೆ ಬಂದು ನಿಂತಾಗ-ಬೆಂಕಿ ಬಿದ್ದ ಕಾಡಿನಲ್ಲಿ ದಿಕ್ಕುಗಾಣದೆ ಊಳಿಡುವ ನರಿಯಂತೆ ಹೃದಯವಿದ್ರಾವಕವಾಗಿ ಗೊಳೋ ಎಂದು ಗೋಳಾಡುವರು. ಆಗ ಅವರ ಮೊರೆಯನ್ನು ಕೇಳಲು ದುಂದಿಂದ ಪುರಸ್ಕ್ರತರಾದವರಾರೂ ಇರುವುದಿಲ್ಲ-ತಿರಸ್ಕ್ರತನಾದ ಶಿವನು ಕೈಲಾಸದಲ್ಲಿರುವನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.