ಕಳಬೇಡ, ಕೊಲಬೇಡ; ಹುಸಿಯ ನುಡಿಯಲು ಬೇಡ;
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ;
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ.
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ!
Art
Manuscript
Music Courtesy:Akkana Balaga, Sri Taralabalu Jagadguru Brihanmath, Sirigere
Hindi Translationचोरी मत करो, वध मत करो, झूठ मत बोलो,
क्रोध मत करो, औरों से घृणा मत करो,
आत्म स्तुति मत करो, पर निंदा मत करो,
यही अंतरंग शुद्धि है, यही बहिरंग शुद्धि ,
यही मम कूडलसंगमदेव को प्रसन्न करने की विधि है ॥
Translated by: Banakara K Gowdappa
English Translation Thou shalt not steal nor kill;
Nor speak a lie;
Be angry with no one,
Nor scorn another man;
Nor glory in thyself,
Nor others hold to blame...
This is your inward purity;
This is your outward purity;
This is the way to win our Lord
Kūḍala Saṅgama.
Translated by: L M A Menezes, S M Angadi
Tamil Translationகளவாடாய் கொல்லாய், பொய் சொல்லாய்
சினங்கொள்ளாய் பிறரை வெறுக்காதிருப்பாய்,
தன்னைப் புகழாய், பிறரை இகழாய்
இதே அகத்தூய்மை, இதே புறத்தூய்மை
இதே நம் கூடல சங்கம தேவனை ஈர்க்கும் வழி.
Translated by: Smt. Kalyani Venkataraman, Chennai
Telugu Translationదొంగలింపకు; చంపకు; కల్లలాడకు;
కోపింపకు; పరుల కసహ్యపడకు;
పొగడి కొనకు; పరుల తెగనాడబోకు;
ఇదే అంతరంగశుద్ధి; ఇదే బహిరంగశుద్ధి
ఇదే మా కూడల నంగయ్యను మెప్పించు గతి.
Translated by: Dr. Badala Ramaiah
Urdu Translationنہ خوںبہاؤ، نہ چوری کرو، نہ جھوٹ کہو
حقیرجانوکسی کو،نہ قہَرسےدیکھو
نہ د ل میں جذبۂ نفرت نہ لب پہ غیبت ہو
بُرا کہے جسے دنیا اسے بُرانہ کہو
زُباں سے اپنی ہی مدحت کبھی کیا نہ کرو
نہ ہوں یہ عیب توہیں جسم و روح پاکیزہ
یہ عیب جس میںنہ ہوں اس سے شاد ہوتے ہیں
مرےعزیزمِرےدیوا کوڈلا سنگم
Translated by: Hameed Almas
ತಿಳಿಗನ್ನಡದಲ್ಲಿ ತಿಳಿಯ ಹೇಳುವುದು ಬಸವಣ್ಣನವರ ಒಂದು ಹಿರಿದಾದ ಗುಣ. ಅದನ್ನು ನಾವು ಈ ವಚನದಲ್ಲಿ ಕಾಣಬಹುದು. ‘ಕಳ್ಳತನ ಮಾಡಬಾರದು, ಪ್ರಾಣಿಗಳನ್ನು ಹಿಂಸಿಸಬಾರದು, ಸುಳ್ಳನ್ನು ಹೇಳಬಾರದು, ಸಿಟ್ಟು ಮಾಡಬಾರದು, ಇನ್ನೊಬ್ಬರನ್ನು ಕಂಡು ಅಸಹ್ಯ ಪಟ್ಟುಕೊಳ್ಳಬಾರದು, ತನ್ನನ್ನು ತಾನು ಹೊಗಳಿ ಕೊಳ್ಳಬಾರದು, ನಿಂದಿಸಬಾರದು.’ ಇವು ಅಣ್ಣನವರು ಬೋಧಿಸಿದ ಸಪ್ತಶೀಲಗಳು. ಈ ಸಪ್ತಶೀಲಗಳನ್ನು ಆಚರಣೆಯಲ್ಲಿ ತರುವುದೇ ಅಂತರಂಗಶುದ್ಧಿ ಮತ್ತು ಬಹಿರಂಗಶುದ್ಧಿ ಹಾಗೂ ದೇವರನ್ನು ಒಲಿಸುವ ರೀತಿ. ಇದು ಲೋಕದ ಜನತೆಗೆ ಅಣ್ಣನು ಉಪದೇಶಿಸಿದ ಶಾಂತಿ ಮಂತ್ರ.
ಕೆಟ್ಟ ವಿಚಾರಗಳು ಮನಸ್ಸಿಗೆ ಬರದಿರಲೆಂದು ಬಯಸಿದಾಗಲೇ ಹೆಚ್ಚು ಹೆಚ್ಚು ಅಂತಹ ವಿಚಾರಗಳು ಮುನ್ನುಗ್ಗಿ ಬರುವುವು. ಕ್ರಿಯೆ ಮತ್ತು ಪ್ರತಿಕ್ರಿಯೆ ಯಾವಾಗಲೂ ಸಮ ಮತ್ತು ವಿರುದ್ಧ (Action and reaction are always equal and opposite) ಎಂಬ ನ್ಯೂಟನ್ನನ ಸಿದ್ಧಾಂತದಂತೆ ಬಾರದಿರಲೆಂದು ಬಯಸುವುದೇ ಅದು ಮತ್ತೆ ಒತ್ತರಿಸಿ ಬರುವುದಕ್ಕೆ ಕಾರಣ. ಆದ್ದರಿಂದ ಕೆಟ್ಟ ನಡವಳಿಕೆಗಳು, ಕ್ಷುಲ್ಲಕ ವಿಚಾರಗಳು ತೊಲಗಬೇಕಾದರೆ ಅದಕ್ಕೆ ಪರಿಹಾರ ಅವು ಬಾರದಿರಲೆಂದು ಪ್ರಾರ್ಥಿಸಿಕೊಳ್ಳುವುದಲ್ಲ; ಒಳ್ಳೆಯ ನಡವಳಿಕೆಗಳನ್ನೂ, ಒಳ್ಳೆಯ ವಿಚಾರಗಳನ್ನೂ ಮೈಗೂಡಿಸಿಕೊಳ್ಳುವುದು. ಹಾಗೆ ಒಳ್ಳೆಯ ರೀತಿ ನೀತಿಗಳನ್ನು ಮೈಗೂಡಿಸಿಕೊಂಡರೆ ಕೆಟ್ಟ ವಿಚಾರಗಳಿಗೆ ತಲೆಹಾಕಲು ಅವಕಾಶವೇ ಇರುವುದಿಲ್ಲ. ಒಂದು ಅಧಿಕಾರವನ್ನು ಗ್ರಹಿಸಿ ಪ್ರಜ್ವಲಿಸುವುದೇ ಮತ್ತೊಂದು ಅಧಿಕಾರವನ್ನು ತ್ಯಜಿಸಿ ಮಿಣುಕುವುದಕ್ಕೆ ಕಾರಣ. ಒಂದರ ಆಕ್ರಮಣವೇ ಮತ್ತೊಂದರ ನಿಷ್ಕ್ರಮಣಕ್ಕೆ ದಾರಿ. ಆದ್ದರಿಂದಲೇ ಸಪ್ತಶೀಲಗಳನ್ನು ಬೋಧಿಸಿದ ಅಣ್ಣನವರೇ ಅವುಗಳನ್ನು ಬಳಕೆಗೆ ತರುವ ಮಾರ್ಗವನ್ನೂ ಪರೋಕ್ಷವಾಗಿ ತೋರಿಸಿದ್ದಾರೆ.
1. “ಕಾಯಕವೇ ಕೈಲಾಸ” ಕಳ್ಳತನ ಮಾಡದೇ ಇರಬೇಕಾದರೆ ಮೊದಲು ನಾವು ಕಾಯಕ ನಿಷ್ಠರಾಗಬೇಕು. ಅಂದರೆ ದುಡಿದು ಉಣ್ಣುವ ಜನರಾಗಬೇಕು. ನಮ್ಮ ದುಡಿಮೆಯಿಂದಲೇ ಜೀವನ ಸಾಗಿಸಲು ಬರುವಾಗ ಕಳ್ಳತನ ಮಾಡಿ ಹಣ ಸಂಪಾದಿಸಿ ಜೀವನ ನಡೆಸುವ ಕಡೆ ಮನ ಒಲೈಸುವುದಾದರೂ ಹೇಗೆ?
2. “ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ....” ದಯಾಗುಣವನ್ನು ನಮ್ಮ ಮನಸ್ಸಿನಲ್ಲಿ ಬೆಳಸಿಕೊಂಡರೆ ಪ್ರಾಣಿಗಳನ್ನು ಹಿಂಸಿಸಲು ಮನಬಾರದು.
3. “ಸತ್ಯವ ನುಡಿವುದೇ ಸ್ವರ್ಗಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ......” ಎಂಬುದನ್ನು ಜ್ಞಾಪಿಸಿಕೊಂಡು ಸತ್ಯ ನುಡಿವಲ್ಲಿ ಸ್ವರ್ಗವಿದೆಯೆಂದು ತಿಳಿದು ಸತ್ಯ ನುಡಿವ ಪರಿಪಾಠವನ್ನು ಇಟ್ಟುಕೊಂಡರೆ ಸುಳ್ಳು ಹೇಳುವತ್ತ ಮನ ಒಪ್ಪದು.
4. “ತನಗೆ ಮುನಿವರಿಗೆ ತಾ ಮುನಿಯ ಲೇಕಯ್ಯಾ” ಅದರಿಂದ ತನಗಾಗುವ ಲಾಭವೇನು? ಅವರಿಗಾಗುವ ನಷ್ಟವೇನು? “ಮನೆಯೊಳಗಣ ಬೆಂಕಿ ಮನೆಯ ಸುಡುವುದಲ್ಲದೆ ನೆರೆಮನೆಯ ಸುಡುವುದೆ?....” ಎಂದುಕೊಂಡು ಕೋಪಕ್ಕೆ ಪ್ರತಿಯಾಗಿ ಕೋಪವ ಮಾಡಬಾರದೆಂದು ತಿಳಿದು “ಮೃದುವಚನವೇ ಸಕಲ ಜಪಂಗಳಯ್ಯಾ, ಮೃದು ವಚನವೇ ಸಕಲ ತಪಂಗಳಯ್ಯಾ, ಸದುವಿನಯವೇ ಸದಾಶಿವನೊಲುಮೆ” ಎಂದು ಕೋಪಕ್ಕೆ ಪ್ರತಿಯಾಗಿ ಶರಣೆಂಬುದ ಕಲಿತರೆ ಕೋಪಕ್ಕೆ ಸ್ಥಳವೆಲ್ಲಿ?
5.6. ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದು ಶರಣರ ಆದ್ಯ ಕರ್ತವ್ಯವೆಂದು ಭಾವಿಸಿ ಎಲ್ಲರ ಹಿತವನ್ನು ಬಯಸಿದರೆ, ಎಲ್ಲರ ಹಿತವೇ ನನ್ನ ಹಿತವೆಂದುಕೊಂಡರೆ ಇನ್ನೊಬ್ಬರನ್ನು ಕಂಡು ಅಸಹ್ಯಪಡುವ ಪ್ರಸಂಗವಾಗಲೀ, ಇನ್ನೊಬ್ಬರನ್ನು ಹಳಿಯುವ ಸಂದರ್ಭವಾಗಲೀ ಬಾರದು.
7. ತನ್ನನ್ನು ತಾನು ಹೊಗಳಿಕೊಳ್ಳುವುದು ಅಹಂಕಾರ ನೆತ್ತಿಗೇರಿದಾಗ. ಆದ್ದರಿಂದ ಅಹಂಕಾರ ಆತ್ಮ ಪ್ರಶಂಸೆಗೆ ಮೂಲ ಕಾರಣ. “ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ....” ಎಂದು ಎಲ್ಲರಿಗಿಂತ ತಾನು ಕಿರಿಯ ಎಂಬ ಭಾವನೆಯನ್ನು ಒಲಿಸಿಕೊಂಡು ಸೌಜನ್ಯಮೂರ್ತಿಯಾದರೆ ಕಾರಣವಾದ (Cause) ಅಹಂಕಾರವೂ ನಿರ್ಮೂಲಗೊಳ್ಳುವುದು, ಫಲತಃ ಕಾರ್ಯವಾದ (Effect) ಹೊಗಳಿಕೊಳ್ಳುವಿಕೆಯೂ ಬುಡಸಹಿತ ಬಿದ್ದು ಹೋಗುವುದು. ನುಡಿ-ನಡೆಯೊಳಗೊಂದಾದವ ಬಸವಣ್ಣ ಆದ್ದರಿಂದ ಬಸವಣ್ಣ ಈ ರೀತಿ ನುಡಿದನಲ್ಲದೆ ಅದರಂತೆ ನಡೆದನೆಂಬುದಕ್ಕೆ ಆತನ ಅನೇಕ ವಚನಗಳು ಸಾಕ್ಷಿಯಾಗಿವೆ.
“ಭಕ್ತಿ ಸುಭಾಷೆಯ ನುಡಿಯ ನುಡಿವೆ
ನುಡಿದಂತೆ ನಡೆವೆ
ನುಡಿಯೊಳಗೆ ನಡೆಯ ಪೂರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನೀನೆದ್ದು ಹೋಗು
ಕೂಡಲಸಂಗಮದೇವಾ”
ಎಂದು ತನ್ನ ನಡೆಗೂ - ನುಡಿಗೂ ಎಳ್ಳುಮೊನೆಯಷ್ಟಾದರೂ ವ್ಯತ್ಯಾಸವಿದ್ದಲ್ಲಿ ಎತ್ತಿ ತೋರಿಸಲು ದೇವರಿಗೇ ಸವಾಲನ್ನು ಹಾಕಿದ್ದಾರೆ ಅಣ್ಣ ಬಸವಣ್ಣ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಅಶೋಕನ ಬ್ರಾಹ್ಮಿ ಲಿಪಿಯಲ್ಲಿ ಬಸವಣ್ಣನವರ ವಚನ
ಕಳಬೇಡ ?? ???
ಕೊಲಬೇಡ ??? ???
ಹುಸಿಯ ನುಡಿಯಲು ಬೇಡ ????? ??????? ???
ಮುನಿಯಬೇಡ ????????
ಅನ್ಯರಿಗೆ ಅಸಹ್ಯ ಪಡಬೇಡ ???????? ????? ?????
ತನ್ನ ಬಣ್ಣಿಸಬೇಡ ???? ?????????
ಇದಿರ ಹಳಿಯಲು ಬೇಡ ???? ?????? ???
ಇದೇ ಅಂತರಂಗಶುದ್ಧಿ ??? ?????? ??????
ಇದೇ ಬಹಿರಂಗಶುದ್ಧಿ ??? ?????? ??????
ಇದೇ ನಮ್ಮ ??? ???? ಕೂಡಲಸಂಗಮದೇವರನೊಲಿಸುವ ಪರಿ! ???? ???? ??????????? ???
  Chandrashekhara kaggallugoudru
Shivamogga
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.