ಭಕ್ತ ಭಕ್ತನ ಮನೆಗೆ ಬಂದರೆ, ಭೃತ್ಯಾಚಾರವ ಮಾಡಬೇಕು:
ಕರ್ತನಾಗಿ ಕಾಲ ತೊಳೆಯಿಸಿಕೊಂಡರೆ,
ಹಿಂದೆ ಮಾಡಿದ ಭಕ್ತಿಗೆ ಹಾನಿ!
ಲಕ್ಷಗಾವುದ ದಾರಿಯ ಹೋಗಿ
ಭಕ್ತನು ಭಕ್ತನ ಕಾಂಬುದು ಸದಾಚಾರ;
ಅಲ್ಲಿ ಕೂಡಿ ದಾಸೋಹವ ಮಾಡಿದರೆ
ಕೂಡಿಕೊಂಬನು ನಮ್ಮ ಕೂಡಲಸಂಗಮದೇವನು.
Hindi Translationभक्त, भक्त द्वार आने पर
भृत्याचार करना चाहिए।
कर्ता बनकर पैर धुलवाने से
पूर्व-कृत भक्ति नष्ट होगी!
लाख कोस चलकर
भक्त का भक्त को देखना सदाचार है ।
वहाँ मिलकर ‘दासोह’ करें तो
मम कूडलसंगमदेव अपना लेंगे॥
Translated by: Banakara K Gowdappa
English Translation When bhakta comes to bhakta's house,
He must behave as servant would:
If he should ask to wash his feet,
As though he were the lord,
His past devotion is a waste!
A hundred thousand leagues, to see
A bhakta, is meritorious deed;
And if, together, they perform
The lowliest service, then indeed
Our Lord Kūḍala Saṅgama
Shall take them to his heart!
Translated by: L M A Menezes, S M Angadi
Tamil Translationஅடியார், அடியார் மகைபுகின் தொண்டு செயல் வேண்டும்,
உடையனெனக் காலை தூய்மை செய்து கொளின்,
முன்பு செய்த பக்திக்கு அது கேடு,
இலட்சக்காத வழி சென்று,
அடியார் அடியாரைக் காண்பது நன்னெறியாம்,
ஆங்குக் கூடித் தொண்டு செயின்
கூடிக் கொள்வன் தம் கூடல சங்கம தேவன்.
Translated by: Smt. Kalyani Venkataraman, Chennai
Telugu Translationభక్తుడు భక్తుని యింటికి రాగ;
భృత్యాచారము సేయవలె;
కర్తjైు కాళ్ళు తా కడిగించుకొన
ముందు చేసిన భక్తి కి ముప్పువచ్చు:
కడు దూరము నడచివచ్చి; భక్తుడు
భక్తుని చూచుట సదాచారమట గూడి
దాసోహము సేయకూడుకొనునయ్య కూడల సంగయ్య:
Translated by: Dr. Badala Ramaiah
ಕನ್ನಡ ವ್ಯಾಖ್ಯಾನನಾವು ನಿಜವಾದ ಭಕ್ತರಾದರೆ ನಮ್ಮ ಮನೆಗೊಬ್ಬ ಭಕ್ತ ಬಂದಾಗ-ಆ ಮಹನೀಯನಿಗೆ ನಾವೇ ಕಾಲು ತೊಳೆದು ಒಳಗೆ ಬರಮಾಡಿಕೊಳ್ಳಬೇಕೇ ಹೊರತು-ನಾವೇ ಕಾಲುಚಾಚಿ ಕುಳಿತು ಅವನಿಂದ ಪಾದಪೂಜೆ ಮಾಡಿಸಿಕೊಳ್ಳುವುದೆಂದರೆ-ಅದುವರೆಗೆ ನಾವು ಮಾಡಿದ ಭಕ್ತಿಗೆ ನಾವೇ ಬೆಂಕಿ ಹಚ್ಚಿಕೊಂಡಂತಾಗುವುದು.
ಮತ್ತು ಎಷ್ಟೇ ದೂರವಾಗಲಿ ನಾವಾಗಿಯೇ ನಡೆದು ಹೋಗಿ ಅವನ ದರ್ಶನ ಪಡೆದುಕೊಂಡು ಅವನು ಮಾಡುವ ದಾಸೋಹದಲ್ಲಿ ನಮ್ಮ ಕೈಂಕರ್ಯ ಸಲ್ಲಿಸಿದ್ದರೆ ಸದಾಚಾರವಾಗುತ್ತಿತ್ತು. ಆಗ ಶಿವನೂ ಅಲ್ಲಿ ನಮ್ಮ ಜೊತೆಗೂಡುತ್ತಿದ್ದನು-ಎಂಬಲ್ಲಿ ಆ ಭಕ್ತನು ತಾನಾಗಿ ಬಂದು ನಮಗೆ ದರ್ಶನ ಕೊಟ್ಟಾಗ ಗರ್ವದಿಂದ ನಡೆದುಕೊಳ್ಳುವುದು ಅನಾಚಾರ.
ವಿ: ಈ ವಚನದಲ್ಲಿ ಬಸವಣ್ಣನವರು ಮಾಡಿರುವ ಎರಡು ಕಟ್ಟಪ್ಪಣೆಗಳನ್ನು ಗಮನಿಸಿರಿ : (1) ಭಕ್ತರು ಭಕ್ತರ ಮನೆಗೆ ದೂರವನ್ನು ಎಣಿಸದೆ ಹೋಗಬೇಕು. ಮನೆಯವರು ಬಂದವರ ಕಾಲು ತೊಳೆದು ಒಳಗೆ ಬರಮಾಡಿಕೊಳ್ಳಬೇಕು, ಕೂಡಿಕೊಂಡು ದಾಸೋಹ ಮಾಡಬೇಕು. (2) ಬಂದ ಭಕ್ತರಿಗೆ ನಾವು ಪಾದಾರ್ಚನೆ ಮಾಡಬೇಕೇ ಹೊರತು-ನಾವೇ ಅವರಿಂದ ಪಾದರ್ಚನೆ ಮಾಡಿಸಿಕೊಳ್ಳಬಾರದು (ಮಠದಲ್ಲಿರುವ ಅಥವಾ ಬೀಡುಬಿಟ್ಟಿರುವ ಕರ್ತ ಜಂಗಮನಿಗೆ ಈ ನಿಯಮ ಅನ್ವಯಿಸುವುದಿಲ್ಲ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.