ಬಸವಣ್ಣ   
Index   ವಚನ - 254    Search  
 
ನಡೆಯ ಕಂಡಾ, ನಂಬಿ: ನುಡಿಯಲ್ಲಾ ಉಪಚಾರ ! ಮಿಗಿಲೊಂದು ಮಾತು ಬಂದರೆ ಸೈರಿಸಲಾರೆನು; ತುಯ್ಯಲಾದರೆ ಉಂಬೆ; ಹುಯ್ಯಲಾದರೆ ಓಡುವೆ! ಆಳು ಬೇಡಿದಡೆ ಆಳ್ದನೇನನೀ[ಯ]ನಯ್ಯಾ? ಆಳಾಗಿ ಹೊಕ್ಕು ಅರಸನಾಗಿ ನಡೆದರೆ, ಆಳಿಗೊಂಡಿತ್ತೆನ್ನ ಕೂಡಲಸಂಗನ ಭಕ್ತಿ!