Hindi Translationरे मन, कोटि कोटि जप कर
कष्ट क्यों उठाता है?
किंचित् कीर्तन अनंत कोटि जप है ।
रे मन, जप क्यों?
कूडसंग के शरणों को देख
रे मन, नाचता, गाता जीता रह ॥
Translated by: Banakara K Gowdappa
English Translation Why should I tell a billion beads,
O heart, and bear a million pains?
A single short hymn can be worth
A billion rosaries!
Why tell these beads at all,
O heart? Once you have seen
Kūḍala Saṅg's Śaraṇās, you may live, O heart,
Dancing and singing !
Translated by: L M A Menezes, S M Angadi
Tamil Translationகோடானு கோடி செபம் செய்து துன்பமுறுவது எதற்கோ ஐயனே?
நிறையன்பு கெழுமிய சிறுபா எண்ணற்ற செபமாம்!
செபம் என்பது எதற்கோ ஐயனே?
கூடல சங்கனின் அடியாரைக் கண்டு
ஆடிப்பாடி இன்புறுவாய் மனமே.
Translated by: Smt. Kalyani Venkataraman, Chennai
ಶಬ್ದಾರ್ಥಗಳುಕೋಟಲೆ = ಕಷ್ಟ; ಗೀತ = ಹಾಡು; ಜಪ = ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲಣೆ ಉಚ್ಚರಿಸುವುದು;
ಕನ್ನಡ ವ್ಯಾಖ್ಯಾನಭಕ್ತಿಗೀತೆಯೇ ಅನಂತಕೋಟಿ ಜಪ
ನಾವು ಮಾಡುವ ಕಾರ್ಯಗಳು ಎಷ್ಟೋ ವೇಳೆ ಆರಂಭದಲ್ಲಿ ಪ್ರಜ್ಞಾಪೂರ್ವಕವಾಗಿ ನಡೆದರೂ ಕ್ರಮೇಣ ಅವು ನಮಗೆ ಗೊತ್ತಿಲ್ಲದಂತೆಯೇ ಯಾಂತ್ರಿಕವಾಗಿ ನಡೆಯಲಾರಂಭಿಸುತ್ತವೆ. ಉದಾಹರಣೆಗೆ ಸೈಕಲ್ ನಡೆಸುವುದನ್ನೇ ತೆಗೆದುಕೊಳ್ಳಿ. ಪ್ರಾರಂಭದಲ್ಲಿ ಸೈಕಲ್ ಕಲಿಯುತ್ತಿರುವಾಗ ಎಷ್ಟೊಂದು ಗಾಬರಿ! ಎಲ್ಲಿ ಬಿದ್ದೇವೋ ಎಂಬ ಭಯ. ಆಗ ನಮ್ಮ ಗಮನವೆಲ್ಲವೂ ಸಂಪೂರ್ಣ ಸೈಕಲ್ ನಡೆಸುವುದರಲ್ಲಿಯೇ ಇರುತ್ತದೆ. ಹೀಗೆ ಅಭ್ಯಾಸ ಮಾಡುತ್ತಾ ಕ್ರಮೇಣ ನಿಪುಣರಾದಾಗ, ನಿರಾಯಾಸವಾಗಿ ಯಾವ ಆತಂಕವೂ ಇಲ್ಲದೆ ನಡೆಸುತ್ತೇವೆ. ಆಗ ನಮಗೆ ಸೈಕಲ್ ಬಗ್ಗೆ ಪರಿವೆಯೇ ಇರುವುದಿಲ್ಲ. ಯಾಂತ್ರಿಕವಾಗಿ ನಮ್ಮ ಕೈಕಾಲುಗಳು ಅದನ್ನು ನಡೆಸುತ್ತಿರುತ್ತವೆ. ನಾವು ನಮ್ಮ ಪಕ್ಕದ ಸವಾರನೊಂದಿಗೆ ಮಾತುಕತೆ ನಡೆಸುತ್ತಾ ಮುಂದುವರಿಯುತ್ತೇವೆ. ಇದರಂತೆಯೇ ನಿತ್ಯವೂ ನಾವು ಮಾಡುವ ಪೂಜೆಯು ಮೊದಮೊದಲು ಶ್ರದ್ಧೆ, ಭಕ್ತಿಗಳಿಂದ ಕೂಡಿದ್ದರೂ ಕ್ರಮೇಣ ಅವೆಲ್ಲಾ ಮಾಯವಾಗುತ್ತವೆ. ‘ಬರಬರ ಭಕ್ತಿಯರೆಯಾಯಿತ್ತು ಕಾಣಿರಣ್ಣಾ; ಮೊದಲ ದಿನ ಹಣೆಮುಟ್ಟಿ, ಮರುದಿನ ಕೈಮುಟ್ಟಿ ಮೂರೆಂಬ ದಿನಕೆ ತೂಕಡಿಕೆ ಕಾಣಿರಣ್ಣಾ! ....’ ಹೀಗೆ ಶ್ರದ್ಧೆ, ಭಕ್ತಿಗಳಿಂದ ಕೂಡಿರದ ಪೂಜೆಯಲ್ಲಿ ಮಾಡುವ ಮಂತ್ರ ಜಪವೂ ಒಂದು ಯಾಂತ್ರಿಕ ಕಾರ್ಯದಂತೆಯೇ ಆಗುತ್ತದೆ. ಬಾಯಿ, ನಾಲಿಗೆಗಳು ಯಾಂತ್ರಿಕವಾಗಿ ಮಂತ್ರ ಜಪಿಸುವ ಕೆಲಸ ಮಾಡುತ್ತಿರುತ್ತವೆ. ಆದರೆ ಮನಸ್ಸು ಮಾತ್ರ ಹಲವು ದಿಕ್ಕುಗಳಿಗೆ ಹಾಯ್ದು ಹಲವು ವಿಷಯಗಳೊಂದಿಗೆ ಹರಿದಾಡುತ್ತಿರುತ್ತದೆ. ಇದನ್ನೇ ಕಬೀರ್ದಾಸರು ಒಂದು ಕಡೆ ಈ ರೀತಿ ಹೇಳಿರುತ್ತಾರೆ.
“ಮಾಲಾ ತೋ ಕರ್ ಮೆ ಫಿರೈ, ಜೀಭ್ ಫಿರೈ ಮುಖ್ ಮಾಹಿಂ|
ಮನುಆ ತೋ ದಸ್ದಿಸಿ ಫಿರೈ ಯಹ್ ತೊ ಸುಮರಿನ್ ನಾಹಿಂ||”
(ಭಾವಾನುವಾದ)
ಕರದೊಳು ಮಾಲೆಯು ಮುಖದೊಳು ನಾಲಿಗೆ
ತಿರುಗುತಲಿರುವುವು ಕಾಣಾ! ಮನವಾದರೊ ದಶದಿಶಿಗಳ ತಿರುಗುತಲಿರುವುದು
ಇದ ಮರೆತಿರುವೆಯೋ ಜಾಣ ||
ಸರ್ವಜ್ಞ ಕವಿಯೂ ಕೂಡ ಈ ರೀತಿ ನುಡಿದಿರುತ್ತಾನೆ.
ಎಣಿಸುತಿರ್ಪುದು ಬಾಯಿ | ಪೋಣಿಸುತಿರ್ಪುದು ಬೆರಳು |
ಕ್ಷಣಕೊಮ್ಮೆ ಒಂದನೆಣಸುವನ ಜಪಕೊಂದು
ಹಣಿಕೆಯುಂಟೆಂದ ಸರ್ವಜ್ಞ ||
ಎಣಿಸುತಿರ್ಪುದು ಬೆರಳು | ಗುಣಿಸುತಿರ್ಪುದು ಜಿಹ್ವೆ |
ಮನಹೋಗಿ ಹಲವ ನೆನೆದರದು ಹಾಳೂರ |
ಶುನಕನಂತಕ್ಕು ಸರ್ವಜ್ಞ ||
ಈ ಕಾರಣದಿಂದಲೇ ಬಸವಣ್ಣನವರು ‘ಕೋಟ್ಯಾನುಕೋಟಿ ಜಪವನ್ನು ಮಾಡಿ ಕೋಟಲೆಗೊಳ್ಳಲದೇಕೆ ಮನವೇ ....’ ಎನ್ನುತ್ತಿದ್ದಾರೆ. ಜಪದ ಉದ್ದೇಶವಾದರೂ ಮನಸ್ಸನ್ನು ಕೇಂದ್ರೀಕರಿಸುವುದೇ ಆಗಿದೆ. ಕೋಟಿಗಟ್ಟಲೆ ಜಪವನ್ನು ಮಾಡಬೇಕೆಂದೇನೂ ಇಲ್ಲ. ಒಂದು ಪಕ್ಷ ಮಾಡಿದರೂ ಏಕಾಗ್ರಚಿತ್ತದಿಂದ ಮಾಡದೇ ಹೋದರೆ ಅದು ವೃಥಾ ಶ್ರಮ ಹಾಗೂ ಕಾಲಹರಣ. ಇದಕ್ಕೆ ಪರಿಹಾರವೆಂದರೆ ‘ಕಿಂಚಿತ್ತು ಗೀತವೊಂದು ಅನಂತಕೋಟಿ ಜಪ .......’ ಜಪ ಮಾಡುವಾಗ ಹರಿದಾಡುವ ಮನಸ್ಸು ಭಾವ ತುಂಬಿ ಹಾಡುವಾಗ ಬದ್ಧವಾಗಿ ಒಂದು ಕಡೆ ಕೇಂದ್ರಿಕೃತವಾಗುತ್ತದೆ. ಅಂದರೆ ಏಕಾಗ್ರತೆಯನ್ನು ಹೊಂದುತ್ತದೆ. ಈ ಕಾರಣದಿಂದಲೇ ಭಾವಭರಿತರಾಗಿ ಹಾಡುವ ಸಂಗೀತ ಕಲಾಕೋವಿದರಿಗೂ ತನ್ಮಯರಾಗಿ ತದೇಕ ಚಿತ್ತದಿಂದ ಕೇಳುವ ಸಂಗೀತಜ್ಞರಿಗೂ ಹೊರಗಿನ ಪ್ರಪಂಚದ ಅರವೇ ಇರುವುದಿಲ್ಲ. ಸಂಗೀತದ ರಾಗ ಲಯಗಳು ಮನಸ್ಸನ್ನು ಅಷ್ಟೊಂದು ಆಕರ್ಷಿಸುತ್ತವೆ ಹಾಗೂ ಹರ್ಷವನ್ನುಂಟು ಮಾಡುತ್ತವೆ. ಆದ್ದರಿಂದ ದೇವರ ಮುಂದೆ ಭಾವಪೂರ್ಣವಾಗಿ ಭಕ್ತಿಗೆ ಸಂಬಂಧಿಸಿದ ಒಂದು ಹಾಡನ್ನು ಹಾಡುವುದು ಅನಂತ ಕೋಟಿ ಜಪಕ್ಕೆ ಸಮ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.