Hindi Translationकंटील घेरे पर जैसे गिरगिट है वैसे है मेरा मन है ।
क्षण क्षण में रंग बदलनेवाले गिरगिट सा है मेरा मन
चमगीदड के जीवन सा मेरा मन;
आधी रात में जागनेवाले अंधे को
फाटक पर पौ फटने की भाँति
जो भक्ति मुझमें नहीं है
उसकी आशा करने से मिलेगी कूडलसंगमदेव ॥
Translated by: Banakara K Gowdappa
English Translation Like a lizard darting about
A hedge, so is my mind, O Lord;
Like a chameleon who appears
One thing each several time,
So is my mind!
Like the condition of a flying-fox,
So is my mind!
Even as dawn breaking at the gate
For the blind man who wakes
At dead of night-
Is there, for the mere wish,
A disinterested piety,
O Kūḍala Saṅgama Lord?
Translated by: L M A Menezes, S M Angadi
Tamil Translationஓணான் வேலிமேலே செல்வது போல் என் மனம் ஐயனே
பொழுதுக் கொருபடியான பச்சோந்தி போல் என் மனம்,
வவ்வாலின், வாழ்வினைப் போல் என் மனம்
நள்ளிரவிலே எழுந்த குருடனுக்குத் தெற்று வாசலில் விடிந்தது போல
நான் இல்லாத பக்தியை விரும்பின் வருமோ
கூடல சங்கம தேவனே.
Translated by: Smt. Kalyani Venkataraman, Chennai
Telugu Translationకంచెకడ తల నాడిరచు తొండ అయ్యె నా మనసు
ప్రొద్దుకొక రీతి మారు ఊసరవెల్లి అయ్యె నా మనసు!
గబ్బిలము సేయు కాపురమయ్యె నా మనస్సు
నడిరేయి మేల్కొను గ్రుడ్డికి మొగసాల
ప్రొద్దుపొడిచినట్లు, లేని భక్తికి ఆశ
పడ వచ్చునే నాకు? కూడల సంగమదేవా;
Translated by: Dr. Badala Ramaiah
ಕನ್ನಡ ವ್ಯಾಖ್ಯಾನಇಲ್ಲಿ ಮನವನ್ನು ಓತಿಗೆ ಗೋಸುಂಬೆಗೆ ಬಾವುಲಕ್ಕೆ ಹೋಲಿಸಲಾಗಿದೆ. ಓತಿಯು ಬೇಲಿಯಿಂದ ಬೇಲಿಗೆ ಹೋಗಿ(ವನಕ್ಕೆ ಕಾಲಿಡದೆ) ಬೇಲಿಯಲ್ಲೇ ತನ್ನ ಜೀವಿತವನ್ನು ಕಳೆಯುವುದು. ಹಾಗೆಯೇ ಈ ಮನಸ್ಸು ಕೂಡ ವಿಷಯದಿಂದ ವಿಷಯಕ್ಕೆ ಸಂಚಲಿಸಿ ಆನಂದಕ್ಕೆ ಕಾಲಿಡದೆ ವಿಷಯಾಂತರದಲ್ಲಿಯೇ ನಿರತವಾಗಿರುವುದು. ಗೋಸುಂಬೆಯು-ಬೆಳಗ್ಗೆ ಮಧ್ಯಾಹ್ನ ಸಂಜೆ-ಹೊತ್ತಿಗೊಂದು ಬಣ್ಣವನ್ನು ಬದಲಿಸುತ್ತ ಬದುಕುವುದು. ಹಾಗೆಯೇ ಈ ಮನಸ್ಸು ಕೂಡ ತನ್ನದೇ ಆದ ಒಂದು ಮೌಲ್ಯವಿಲ್ಲದೆ ಅವರವರಿಗೆ ಅವರಂತಾಗಿ ತನ್ನ ಬಣ್ಣದ ಜೀವನವನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವುದು. ಬಾವುಲ ಹಕ್ಕಿ ಕಾಲು ಮೇಲಾಗಿ ತಲೆ ಕೆಳಗಾಗಿ ತೂಗಾಡುತ್ತ ತಿಂದ ಬಾಯಲ್ಲೇ ಹೇಲುವುದು. ಹಾಗೆಯೇ ಈ ಮನಸ್ಸು ಕೂಡ ಗುರುಲಿಂಗಜಂಗಮಪ್ರಸಾದವನ್ನು ಹೊಟ್ಟೆಪಾಡಿಗಾಗಿ ತಿಂದು, ಆ ಪ್ರಸಾದ ತಿಂದ ಬಾಯಲ್ಲೇ ಆ ಗುರು ಲಿಂಗಜಂಗಮವನ್ನು ದೂಷಿಸುವುದು.
ಹೀಗೆ ಏಕಗ್ರಾಹಿಯೋ ಆಶೆಬುರುಕನೋ ದೈವದೂಷಕನೋ ಆಗಿ ತೀವ್ರ ಹೇಯವಾಗಿರುವ ಪ್ರಾಪಂಚಿಕನನ್ನು ಒಬ್ಬ ಕುರುಡನಿಗೂ ಹೋಲಿಸಲಾಗಿದೆ. ಆ ಕುರುಡನು ಊರ ಹೊರಗಿರುವ ನಿಧಿಯನ್ನು ತನಗೆ ತಾನೇ ತನ್ನದಾಗಿಸಿಕೊಳ್ಳಬೇಕೆಂದು ನಡುರಾತ್ರಿಗೇ ಎದ್ದು ಹೊರಟು ಊರಿನ ಕೋಟೆಯ ಗೋಡೆಯ ಗುಂಟ ತಡವರಿಸಿಕೊಂಡು ಅಗುಸೆಬಾಗಿಲ ಬಳಿಗೆ ಬರುವ ವೇಳೆಗಾಗಲೇ ಬೆಳಗಾಗಿ ಹೋಗುತ್ತಿತ್ತು. ಮರಳಿ ಮನೆಗೆ ಹೋಗುತ್ತಿದ್ದ ಪ್ರತಿನಿತ್ಯವೂ ಇದೇ ಬವಣೆ. ಅವನು ನಿಧಿಯನ್ನು ಕೈವಶಮಾಡಿಕೊಳ್ಳಲಾಗಲೇ ಇಲ್ಲ. ಹಾಗೆಯೇ ಜ್ಞಾನನೇತ್ರವಿಲ್ಲದವನು ಪರಾತ್ಪರರಹಸ್ಯವನ್ನು ಜ್ಞಾನಿಗಳ ಸಹಾಯವಿಲ್ಲದೆ ತನಗೆ ತಾನೇ ಸಾಧಿಸಲಸಾಧ್ಯ-ಎಂದು ಮುಂತಾಗಿ (ಈ ಪ್ಯಾರಾದಲ್ಲಿರುವಷ್ಟನ್ನು ಮಾತ್ರ) ಎಳೆದು ತಂದು ಅರ್ಥೈಸಬೇಕಾಗುವುದು. ವಚನದಲ್ಲಿರುವ ಕುರುಡನ ನಿದರ್ಶನದ ಪಾಠಭಾಗ ಕೆಟ್ಟಿದೆ. ವಾಸ್ತವವಾಗಿ ಈ ವಚನವೇ ಇಡಿಯಾಗಿ 294ನೇ ವಚನದ ಅಪಪಾಠವಷ್ಟೆ. ನೋಡಿ 294ನೇ ವಚನವನ್ನು ಮತ್ತು ಅದರ ವಿವರಣ ಭಾಗವನ್ನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.