Hindi Translationगोह के अर्थ में हमारे स्वजनोंने मुझे जन्म दिया,
मेरी स्थिति गिरगिट के समान है,
चमगीदड के जीवन के समान है,
उषः काल में जागृत अंधे को
फाटक पर सूर्यास्त होने की भाँति
मेरे चाहने पर भक्ति होती कूडलसंगमदेव?
Translated by: Banakara K Gowdappa
English Translation My parents gave birth
In the spirt of the Montor:
Like that of a flying-fox!
Even as the sunset overtakes
The blind man at the village gate
Although he woke at break of day,
Would it be well
To merely wish for piety,
O Kūḍala Saṅgama Lord?
Translated by: L M A Menezes, S M Angadi
Tamil Translationஉடும்பி னியல்பி லிருப்பவர் எம்மவர்,
பச்சோந்தியனையது என்னிருப்பு,
வவ்வாலின் வாழ்வனையதாம்,
விடியலிலே எழுந்த குருடனுக்குத்
தெற்று வாசலிலே இருளானதனைய,
நான் பக்தியை விரும்பின் ஆகுமோ
கூடல சங்கம தேவனே.
Translated by: Smt. Kalyani Venkataraman, Chennai
Telugu Translationఉడుముగతి నుండిరయ్యా మా వారు
ఊసరవిల్లియట్లు నా యునికి
గబ్బిలమువలె నా కాపురము
తొలి జాములో లేచు గ్రుడ్డికి
మొగసాలలో ప్రొద్దు గ్రుంకినట్లు
అడియాసల వచ్చునే భక్తి
కూడల సంగమదేవా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನನಮ್ಮ ಶರಣರು ಉಡುವಿನಂತೆ ಬಿಗಿವಿಡಿದು ಸಾಧನೆ ಮಾಡಿ ಭಕ್ತಿಯನ್ನು ಪಡೆದರು. ನಾನಾದರೋ ಉಸುರುವಳ್ಳಿ(ಗೋಸುಂಬೆ)ಯಂತೆ ಹೊತ್ತಿಗೊಂದು ಪರಿಯಾಗಿ ತತ್ತ್ವದಲ್ಲಿ ನಿಲುಗಡೆಯಿಲ್ಲದೆ ಲೋಕ ವ್ಯವಹಾರದಲ್ಲಿ ತೊಡಗಿದ್ದೇನೆ, ಮತ್ತು ಬಾವುಲನಂತೆ ಬಾಯಲ್ಲಿ ಹೇಯವಾದದನ್ನೇ ಆಡುತ್ತಿದ್ದೇನೆ-ಮತ್ತೆಯೂ ಭಕ್ತಿಯನ್ನು ಬಯಸುತ್ತೇನೆ. ನನ್ನ ಈ ವರ್ತನೆ “ಪರ” ಊರಿಗೆ ಪಯಣಿಸಬೇಕೆಂದು ಬೆಳಗಿನ ಝಾಮದಲ್ಲೇ ಮನೆಯಿಂದ ಹೊರಟ ಕುರುಡನಿಗೆ ಸುತ್ತಿಬಳಸುವ ತಡವರಿಕೆಯಲ್ಲಿ ಹಗಲೆಲ್ಲ ಮುಗಿದುಹೋಗಿ,ತನ್ನೂರಿನ ಅಗುಸೆಯ ಬಾಗಿಲಿಗೆ ಬರುವ ವೇಳೆಗೇ ಸಂಜೆಯಾಗಿ ಕತ್ತಲಾವರಿಸುತ್ತದೆ. ಇನ್ನೆಲ್ಲಿಗೆ ಅವನ ಪಯಣ ? ಮರಳಿ ಮನೆಗೆ ! ಮತ್ತೆ ಕತ್ತಲಲ್ಲಿ ತಡವರಿಕೆ ! ಮರಳಿ ಅಗುಸೆಯ ಬಾಗಿಲವರೆಗೇ ! ತಲುಪಬೇಕಾದ “ ಪರ” ಊರಿನ ಸುದ್ದಿ ಗಾವುದ ಗಾವುದವಾಗಿ ದೂರವೇ ಉಳಿಯಿತು. ಹೀಗೆಂದು ಬಸವಣ್ಣನವರು ಸಂಸಾರದಲ್ಲೇ ಘಾಸಿಪಡುತ್ತಿರುವ ತಮಗೆ ತಾವೇ ಹೇಸುತ್ತಿರುವರು ಕನಿಕರಿಸುತ್ತಿರುವರು.
ಕುರುಡುಕರ್ಮಮಾರ್ಗದ ಸುತ್ತುಬಳಸಿನಲ್ಲಿ ಕಾಲಕಳೆಯದೆ, ಜ್ಞಾನನೇತ್ರವನ್ನು ತೆರೆದು ಗುರುಲಿಂಗ ಜಂಗಮದ ಸೇವಾಮಾರ್ಗದಲ್ಲಿ-ಉಂಡಲ್ಲಿ ಉಣ್ಣದೆ, ಬಿಟ್ಟಲ್ಲಿ ಬಿಡದೆ, ನೇರವಾಗಿ ಮತ್ತು ಏಕಪ್ರಕಾರವಾಗಿ ನಡೆದು ಹುಟ್ಟು ಸಾವಿನ ದಾರವಂದವನ್ನು ದಾಟಿ ಹೊರನುಗ್ಗುವವರೆಗೆ ಭಕ್ತಿಯೆಂಬ ಪರಸ್ಥಳವನ್ನು ತಲುಪುವುದಾಗದೆಂಬುದು ಅಭಿಪ್ರಾಯ.
ವಿ : ಈ ವಚನದ “ಉಡುವಿನ ಭಾವ” ಎಂಬ ಮಾತನ್ನು ವಚನ 103ರ ಅನುಸಾರವಾಗಿ-“ಭಿನ್ನ ಭಾವ” ಎಂದು ಅರ್ಥೈಸುವುದಾದರೆ-ವಚನದ ವಿನ್ಯಾಸ : “ಉಡುವಿನ ಭಾವದಲ್ಲಿ ಹಡೆದರು-ಎಮ್ಮವರು ಉಸುರುವಳ್ಳಿಯಂತೆ, ಎನ್ನಿರವು ಬಾವುಲ ಬಾಳುವೆಯ ತೆರನಂತೆ” ಎಂದಾಗಿ ಬೇರೆ ಹಿನ್ನೆಲೆಯನ್ನೇ ಪಡೆಯುವುದೆನಿಸುತ್ತದೆ : “ಶಿವನಲ್ಲಿ ಏಕನಿಷ್ಠೆಯಿಲ್ಲದೆ ಉಡುವಿನ ನಾಲಗೆಯಂತೆ ಎರಡಾದವರು, ಮತ್ತು ಅವರು ಇತ್ತ ನನ್ನಂತೆಯೂ, ಅತ್ತ ಬ್ರಾಹ್ಮಣ್ಯದಂತೆಯೂ ಬಹುಬಣ್ಣವಾದವರು, ಅವರ ಮಗನಾಗಿ ಉಪನಯನಗೊಂಡ ನಾನಾದರೋ ಶಿವಧ್ಯಾನವನ್ನು ಸ್ವೀಕರಿಸಿ, ಕರ್ಮಮಂತ್ರವನ್ನು ಬಾಯಲ್ಲಿ ಸೂಸುತ್ತಿದ್ದೇನೆ” ಎಂದು ಮುಂತಾಗಿ ಅರ್ಥೈಸಲೂ ಬೇಕಾಗುತ್ತದೆ.
ಈ ವಿಧವಾದೆಲ್ಲ ತೊಡಕಿನಿಂದ ದಿಕ್ಕುಗೆಟ್ಟವನೊಬ್ಬನು ಈ 294 ನೇ ವಚನಪಾಠವನ್ನೇ ತಿದ್ದಿ ಕೆಡಿಸಿ 289ನೇ ವಚನವನ್ನಾಗಿ ಮಾರ್ಪಡಿಸಿರುವನು. ಆ ಮೂಲಕ ಮೂಲವಚನದ ಉಡು-ಉಸುರುವಳ್ಳಿ-ಬಾವುಲ ಎಂಬ ಪದಸರಣಿ ಓತಿ-ಗೋಸುಂಬೆ-ಬಾವುಲ ಎಂದಾಗಿ-ಉಡುವಿಗೆ ಬದಲಾಗಿ ಓತಿಯನ್ನು ಪ್ರತಿನಿಧಾನಿಸಿರುವುದನ್ನು ಗಮನಿಸಿರಿ. ಮತ್ತು ಆ ತಿದ್ದಿದವನು ಕಲ್ಪನಾರಹಿತನೂ ಆದುದರಿಂದ ಹೊತ್ತಾರೆ ಮತ್ತು ಅಸ್ತಮಾನ ಎಂಬುದನ್ನು ನಡುವಿರುಳು ಮತ್ತು ಬೆಳಗಾಗು ಎಂದು ತಿದ್ದಿ ಅಬದ್ಧ ಮಾಡಿರುವುದನ್ನೂ ವಿವೇಚಿಸಿರಿ. ನೋಡಿ 289ನೇ ವಚನದ ವ್ಯಾಖ್ಯಾನವನ್ನು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.