Hindi Translationकहता हूँ, मैं तुम्हारा निस्सीम भक्त हूँ,
प्रमाण देना हो, तो मुँह मोडता हूँ
जैसे गरुड को देख घट-सर्प।
शिवशरण के नाम को मैं अनसुना करता हूँ ।
मन का मन ही साक्षी है कूडलसंगमदेव ॥
Translated by: Banakara K Gowdappa
English Translation I claim to be a prodigy
In my devotion unto Thee;
But when it comes to test the truth,
I turn my face away and slink,
Even as a fearful snake at eagle's sight!
If one says, 'Bow to Śiva !'
My ears refuse to hear:
My mind is witness to itself,
O Kūḍala Saṅgama Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationనీ భక్తి లో నేను నిస్సీముడంటి
పరీక్ష రాగ చూడనట్లు ముఖము తప్పించితి;
గరుత్మంతునకు ఘటసర్పము చూపినట్లె!
శివశరణన చెవి దూరనట్లుంటి?
మనసుకు మనసే సాక్షి కూడల సంగమ దేవా
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶಿವಭಕ್ತಿಯಲ್ಲಿ ಅಗ್ರಗಣ್ಯ ನಾನು ಎಂಬಂತೆ ಎಲ್ಲರಿಗೂ ಮುಂದಾಳಾಗಿ ಮೆರೆಯುತ್ತೇನೆ. ಆದರೆ ಶಿವ ಶರಣರಿಗೆ ಸೇವೆ ಸಲ್ಲಿಸುವ ಪರೀಕ್ಷಾ ಸಮಯ ಬಂದಾಗ ಕಾಣದಂತೆ ಮುಖ ತಿರುಗಿಸಿ ಹಿಂದಕ್ಕೆ ಸರಿಯುತ್ತೇನೆ -ಕೂಗಿ ಕರೆದರೂ ಕಿವಿಗೇಳದಂತೆ ಕಾಲಿಗೆ ಬುದ್ದಿ ಹೇಳುತ್ತೇನೆ. ನಾನು ಮನಸ್ಸಾಕ್ಷಿಯಾಗಿ ನಡೆದುಕೊಳ್ಳುತ್ತಿಲ್ಲ ಎನ್ನುತ್ತ ಬಸವಣ್ಣನವರು ತಮ್ಮ ಧಾರ್ಮಿಕ ಕ್ಲೈಬ್ಯವನ್ನು ವಿವರಿಸಲು ಒಂದು ಉಪಮಾನವನ್ನು ಕೊಡುತ್ತಾರೆ : ಗರುಡನು ಎಂಥ ನಾಗರಹಾವನ್ನಾದರೂ ಬಾಲದಿಂದ ಹಿಡಿದೆತ್ತಿ ಕೊಲ್ಲಲು ಪ್ರಸಿದ್ಧವಾಗಿರುವುದು. ಆದರೇನು-ಅದರ ಸತ್ತ್ವವು ಸಮತಟ್ಟಾದ ಬಯಲಿನಲ್ಲಿ ಮಾತ್ರ-ಫಟ(ಕೊಡ)ದಲ್ಲಿರುವ ಸರ್ಪವನ್ನು ಕಂಡರೆ ಅದು ಹೆದರಿ ಮುಖ ತಿರುವಿಸುವುದು-ಎಂದು.
ಈ ವಚನದಲ್ಲಿ ಬಸವಣ್ಣನವರು ಕುರಿತಿರುವುದು ತಮ್ಮನ್ನೇ ಆದರೂ-ವ್ಯವಸ್ಥಿತ ಜಾಹೀರಾತಿನ ಜಾಲದಿಂದ ಧರ್ಮಕ್ಷೇತ್ರದಲ್ಲಿ ಹೆಸರುವಾಸಿಯಾದ “ಸೇವಾಧುರಂಧರನ” ನೆನಪಾಗುವುದು ನಮಗೆ. ಅವನ ಕೀರ್ತಿವಾರ್ತೆಯೊಂದು ಪರಿ, ಕೃತಿ ಮತ್ತೊಂದು ಪರಿ, ಅವನು ಮೇಲ್ನೋಟಕ್ಕೆ ಧರ್ಮವೀರನಂತೆ ಕಂಡರೂ ಘಟಸರ್ಪದ ಪರೀಕ್ಷೆಗೆ(ಅಂದರೆ ಶರಣಸೇವೆಗೆ)ಸಿದ್ಧನಿಲ್ಲದ ಗುಪ್ತಪಾತಕಿ.
ವಿ: ಅಪರಾಧದ ಆರೋಪಕ್ಕೆ ಒಳಗಾದವನು-ತಾನು ನಿರಪರಾಧಿ ಎಂದು ತೋರಿಸಿಕೊಡಲು -ಹಾವಿರುವ ಕೊಡದೊಳಕ್ಕೆ ಕೈಹಾಕಿ ಆ ಹಾವಿನಿಂದ ಕಡಿಸಿಕೊಳ್ಳದೆ ತೇರ್ಗಡೆಯಾಗಬೇಕಾದ ನ್ಯಾಯವಿಧಾನವೊಂದು ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು ಎಂಬುದನ್ನು ಇಲ್ಲಿ ನೆನೆಯಬೇಕು. (ಧರಧುರ < ಧುರಂಧರ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.