Hindi Translationकहता हूँ, पुरातन शरणों का वचन पारस है,
वह पारस मुझे कैसे प्राप्त होग?
तन, मन, धन का विवरण देता हूँ,
स्पर्श तक सहन नहीं कर सकता ।
चमारों के नगाडे की भाँति
बोलनेवाला दंभी हूँ, कूडलसंगमदेव ॥
Translated by: Banakara K Gowdappa
English Translation I say the word of the Pioneers
Is as the philosopher's stone:
But can that stone
Become my own?
In theory I speak
Of body, mind and wealth:
But a mere touch
Is intolerable to me!
I am a humbug, sounding
Even as a pariah's tabor, Lord
Kūḍala Saṅgama!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఆద్యుల వచనము పరుసము కదయ్యా!
అది నా కెట్లు లభించునయ్యా
తను-మన-ధనముల వివరింతునే గాని
తను`మన`ధనముల వివరింతున్గాని
స్పృశింప పరులు సైరింప నేర
మాలవాని మద్దెలరీతి వాగు
డాంబికుడ నేనయ్యా! కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲ
ಶಬ್ದಾರ್ಥಗಳುಆದ್ಯರು = ಮುಂಚಿನ ಶರಣರು, ಪುರಾತನರು; ಡಂಬಕ = ; ತನು = ; ಪರುಷ = ; ಸೈರಿಸು = ; ಸೋಂಕು = ;
ಕನ್ನಡ ವ್ಯಾಖ್ಯಾನಶರಣರ ಮಹಾತ್ಮೆಗಳಲ್ಲಿ “ವಚನಪರುಷ” ವೆಂಬುದೂ ಒಂದು: ಆಡಿದ ಮಾತು ನಡೆದುಹೋಗುವುದೇ ಆ ವಚನಪರುಷ. ತನು ಮನ ಧನವನ್ನು ಗುರು ಲಿಂಗ ಜಂಗಮಕ್ಕೆ ದಾಸೋಹಮಾಡಿದಲ್ಲದೆ ಈ ವಚನ ಪರುಷ ಸಿದ್ಧಿಸಲೊಲ್ಲದು-ಎನ್ನುತ್ತಿರುವರು ಬಸವಣ್ಣನವರು.
ಡಂಭಾಚಾರಿಯಾದವನು-ತನ್ನ ತನು ಸೇವಾಸಿದ್ಧವೆಂದೋ ಪರಾರ್ಥಾರ್ಪಿತವೆಂದೋ, ತನ್ನ ಮನ ನಿಶ್ಚಂಚಲವೆಂದೋ, ದಯಾಪರವೆಂದೋ, ತನ್ನ ಧನ ಶಿವನ ಸೊಮ್ಮೆಂದೋ ಶರಣರ ಪಾದಕ್ಕೆ ಅರ್ಪಿಸಿದ ಕಾಣಿಕೆಯೆಂದೋ-ಕೋಲು ಸೋಕಿದ ತಮ್ಮಟೆಯಂತೆ ಶಬ್ದಾಯಮಾನವಾಗಿರುವನೇ ಹೊರತು-ಭಕ್ತಿಯಿಂದ ನಮಸ್ಕರಿಸುವುದಿಲ್ಲ, ವಿಶ್ವಾಸದಿಂದ ಧ್ಯಾನಿಸುವುದಿಲ್ಲ. ನಿಜದಿಂದ ದಾನ ಮಾಡುವುದಿಲ್ಲ.
ಹೀಗೆ ದಿವ್ಯಕ್ಕೆ ಮುಕ್ತವಾಗಿ ತನ್ನನ್ನು ಒಡ್ಡಿಕೊಳ್ಳದೆ ಕೇವಲ ಮಾತಾಳಿಯಾಗಿರುವ ಸಾಧಕನೊಬ್ಬನ ವ್ಯಂಗ್ಯಚಿತ್ರವನ್ನಿಲ್ಲಿ ಬಸವಣ್ಣನವರು ತಮ್ಮ ಹೆಸರಿನಲ್ಲೇ ಬಿಡಿಸಿರುವರು.
ವಿ: ಸ್ಪರ್ಶದ ತದ್ಭವರೂಪ ಪರುಷ. ಇದರ ಅರ್ಥ ಸ್ಪರ್ಶಮಣಿ-ಮುಟ್ಟಿದ್ದೆಲ್ಲಾ ಚಿನ್ನವಾಗುವ ಒಂದು ಮಣಿ-ಹಾಗೆಯೇ ಕಂಡದ್ದೆಲ್ಲಾ ಪವಿತ್ರವಾಗುವ, ಮುಟ್ಟಿದ್ದೆಲ್ಲಾ ಪುನೀತವಾಗುವ, ಪಾದ ಸೋಕಿದ್ದೆಲ್ಲಾ ಯಾತ್ರಾಸ್ಥಳವಾಗುವ, ನುಡಿದಿದ್ದೆಲ್ಲಾ ನಡೆದು ಹೋಗುವ, ಭಾವಿಸಿದ್ದೆಲ್ಲಾ ಸಿದ್ಧಿಸುವ ಮಹಿಮೆ ಎಂಬ ಅರ್ಥವೂ ಉಂಟು. ಈ ಅರ್ಥದಲ್ಲಿ ಈ ಮೊದಲಿನವನ್ನೇ ಪಂಚಪರುಷವೆನ್ನುವರು. ಮತ್ತು ಬಸವಣ್ಣನವರು ಪಂಚಪರುಷಮೂರ್ತಿ ಎಂಬ ಐತಿಹ್ಯವೂ ಉಂಟು. ಪರುಷವೆಂಬ ಪದವಿನ್ನೊಂದು ಸ್ವತಂತ್ರವಾಗಿಯೇ ಸಂಸ್ಕ್ರತದಲ್ಲಿದೆ-ಅದರ ಅರ್ಥ ಕಠೋರವೆಂದು-ನೋಡಿ ವಚನ 172.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.