ಆನೆಯು ಆ ದಾರಿಯಲ್ಲಿ ಹೋಯಿತ್ತೆಂದಡೆ,
ಆಡೂ ಆ ದಾರಿಯಲ್ಲಿ ಹೋಯಿತ್ತೆನ್ನಬಹುದೆ?
ಸಂಗನ ಶರಣರಿಗೆ ಆನು ಸರಿಯೆಂದು ಗಳಹಲು ಬಹುದೆ?
ಜಂಗಮಕ್ಕೆ ಮಾಡುವ ಭಕ್ತರಿಗೆ ಆನು ಸರಿಯೆ?
ಹೇಳಾ, ಕೂಡಲಸಂಗಮದೇವಾ.
Hindi Translationयदि कहें, हाथी उस मार्ग से गया,
तो कह सकते हैं, बकरा भी उस मार्ग से गया?
यह बकवाद कर सकते हैं
कि मैं संगनबसव के शरणों के समान हूँ?
जंगम सेवी भक्त सम हो सकता हूँ?
कहो कूडलसंगमदेव ||
Translated by: Banakara K Gowdappa
English Translation Can a hoat go
The way an elephant has gone?
Can I prate that I am a peer
Of Sanga’s Śaraṇās?
Am I a much for devotees
Who worship Jaṅgama?
Tell me, Kūḍala Saṅgama Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationకరి ఆ దారి బడిపోయెనన
మేకయూ అటుపోయె ననవచ్చునే!
శరణులతో సరిగా కలహింపవచ్చునే?
జంగముల గొల్చు భక్తులకు నేను సరియే?
తెల్పు మో కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲವಿಷಯ -
ನಿರಹಂಕಾರ
ಶಬ್ದಾರ್ಥಗಳುಗಳಪಲು = ; ಜಂಗಮ = ;
ಕನ್ನಡ ವ್ಯಾಖ್ಯಾನಅರಣ್ಯದಲ್ಲಿ ಆನೆ ನಡೆದುದೇ ಹಾದಿ-ಬೆಟ್ಟಗುಡ್ಡಗಳನ್ನು ದಾಟಿ, ನಡುವೆ ಸಿಕ್ಕಿದ ನದಿಗಳಲ್ಲಿ ನೀರಧಿಗಳಲ್ಲಿ ನೀರಾಟವಾಡಿ ಅದು ವಿಹರಿಸುವುದನ್ನು ನೋಡುವುದೇ ಒಂದು ಅದ್ಭುತರಮ್ಯ ಅನುಭವ. ಗೊಲ್ಲನ ಕೋಲಿಗೆ ಆಡುವ ಆಡಿಗೆಲ್ಲಿ ಬಂತು ಆ ಗಮನವೈಭವ ? ಎನ್ನುತ್ತ ಬಸವಣ್ಣನವರು-ಶಿವಶರಣರು ನಡೆದ ಮಹಾಮಾರ್ಗವನ್ನು.ಅವರ ಧೀರೋದಾತ್ತ ಆಚರಣೆಗಳನ್ನೂ ಸ್ಮರಿಸಿಕೊಂಡು ಪುಲಕಿತರಾಗುತ್ತಿರುವರ.
ಮತ್ತು ತಮ್ಮನ್ನು ಆಡಿಗೆ ಹೋಲಿಸಿಕೊಂಡು ತಮ್ಮ ಪರಿಮಿತಿಗಳನ್ನು ಗುರುತಿಸಿಕೊಳ್ಳತ್ತಿರುವರು: ಆದುದರಿಂದಲೇ ಅವರು ತಾವೊಬ್ಬ ಶರಣನೆಂಬ ಮಾತನ್ನಿರಲಿ, ತಾವೊಬ್ಬ ಆದರ್ಶ ಭಕ್ತನೆಂಬ ಮಾತನ್ನೂ ಒಪ್ಪುವುದಿಲ್ಲ.
ವಿ: ಈ ವಚನದಲ್ಲಿನ ಭಕ್ತ-ಶರಣ-ಜಂಗಮಪದಗಳ ನಡುವೆಯಿರುವ ಆಧ್ಯಾತ್ಮಿಕ ಅನುಶ್ರೇಣಿಯನ್ನೂ ಗಮನಿಸಬಹುದು. ಇದು ಒಂದು ಧರ್ಮದಲ್ಲಿರುವ ಜಾತಿಗಳ ಅನುಶ್ರೇಣಿಯಲ್ಲವೆಂಬುದನ್ನು ಮರೆಯಬಾರದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.