ಆ ಕರಿಯಾಕೃತಿಯ ಸೂಕರನ ಹೋಲಿಸಿದರೆ
ಆ ಕರಿಯಾಗಲರಿವುದೆ?
ಭೂನಾಗನಾಕೃತಿಯನು ವ್ಯಾಳೇಶನ ಹೋಲಿಸಿದರೆ
ವ್ಯಾಳೇಶನಾಗಲರಿವುದೆ?
ನಾನು ಭಕ್ತನಾದರೇನಯ್ಯಾ? ನಮ್ಮ ಕೂಡಲಸಂಗಮದೇವನ
ಸದ್ಭಕ್ತರ ಹೋಲಲರಿವೆನೆ?
Hindi Translationहस्ति तुल्य सूकर की तुलना
हस्ति से की जाय, तो वह हस्ती बन सकता है?
भूनाग की तुलना
व्यालेश से की जाय, तो वह व्यालेश बन सकता है?
मैं भक्त बनूँ तो क्या
मम कूडलसंगमदेव के सद्भक्तों सा बन सकता हूँ?
Translated by: Banakara K Gowdappa
English Translation If you compare an elephantine
Hog to an elephant,
Does he become an elephant?
If you compare a snake- shaped thing
Unto the Lord of Snakes?
Does he become the Lord of Snakes?
What if I am a devotee?
Can I compare,
O Kūḍala Saṅgama Lord,
With the true devotees?
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఆ కరి యాకృతి సూకరి బోలిన
సూకరి కరి కాగలదే?
భూనాగునిరూపు వ్యాళేశునకు బోల్ప
అది వ్యాళేశుడు కానేర్చునే ?
భక్తుడై నంత మాత్ర నేను
దేవా! నీ సద్భక్తులకు తూగ నేర్తునే?
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲವಿಷಯ -
ನಿರಹಂಕಾರ
ಶಬ್ದಾರ್ಥಗಳುಕರಿ = ; ಭೂನಾಗ = ; ವ್ಯಾಳೇಶ = ; ಸೂಕರ = ;
ಕನ್ನಡ ವ್ಯಾಖ್ಯಾನಈ ವಚನದಲ್ಲಿ-ಮತ್ತೆಯೂ-ಬಸವಣ್ಣನವರು ತಮಗೂ ಸದ್ಭಕ್ತರಿಗೂ ಸರಿಸಮಾನತೆಯಿಲ್ಲವೆಂದೇ ಅವಧಾರಿಸುತ್ತಿರುವರು. ಆನೆಗೂ ಹಂದಿಗೂ ನಾಗರಹಾವಿಗೂ ಎರೆಹುಳುವಿಗೂ ದೂರದ ಹೋಲಿಕೆ ಇದ್ದ ಮಾತ್ರಕ್ಕೇ ಅವು ಒಂದಲ್ಲ-ಬೇರೆಬೇರೆಯೇ. ಹಾಗೆಯೇ ವಿಭೂತಿ ರುದ್ರಾಕ್ಷಿ ಲಿಂಗ ಮುಂತಾದ ಲಾಂಛನಾಧೃತ ವೇಷದಿಂದಲೂ, ಶಿವ ಶಿವ ಶರಣು ಶರಣು ಎಂದು ಮುಂತಾದ ಸ್ವರಾವೃತ ಭಾಷೆಯಿಂದಲೂ-ಶಿವಭಕ್ತರಿಗೂ ತಮಗೂ ಸ್ವಲ್ಪ ಹೋಲಿಕೆಯಿರುವುದಾದರೂ-ತಾವು ಆನೆಯ ಮುಂದೆ ಹಂದಿಯಂತೆ ಹೀನವೆಂದೂ, ನಾಗರ ಮುಂದೆ ಹುಳುವಿನಂತೆ ಕ್ಷುದ್ರವೆಂದೂ ತಮ್ಮನ್ನು ತಾವೇ ಖಂಡಿಸಿಕೊಂಡು ಅಹಂಕಾರದ ಮದವನ್ನೂ ಆಡಂಬರದ ವಿಷವನ್ನೂ ಇಳಿಸಿಕೊಳ್ಳುತ್ತಿರುವರು.
ಕರಿ: ಆನೆ, ಸೂಕರಿ: ಹಂದಿ, ಭೂನಾಗ: ಎರೆಹುಳು, ವ್ಯಾಳೇಶ: ನಾಗರಹಾವು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.