Hindi Translationअंगहीन बौने का मुकुट, नकटी का श्रृंगार
अंधे के आगे श्रृंगार चेष्टाएँ
हास्यास्पद है ।
मम कूडलसंग के शरण-सम्मुख
अपने को भक्त कहने की लाज प्रर्याप्त नहीं?
Translated by: Banakara K Gowdappa
English Translation The dwarf's crown, or the ornaments
Of noseless woman, or
Love-gestures to a man who's blind
Become a laughing-stock!
Is,t not enough
That before the Śaraṇās
Of our Lord Kūḍala Saṅga ,
I blush to call myself
A devotee?
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationమరుగుజ్జుమౌళి ముక్కిడితి సింగారము.
గ్రుడ్డివాని వలపు నవ్వులపాలయ్యె!
కూడల సంగని శరణుల ముందు
భక్తుడన నన్ను నాకు సిగ్గగునయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲವಿಷಯ -
ನಿರಹಂಕಾರ
ಶಬ್ದಾರ್ಥಗಳುಮೂಕೊರತಿ = ; ಮೋಟು = ; ಮೌಳಿ = ;
ಕನ್ನಡ ವ್ಯಾಖ್ಯಾನಮಾಡಿದ ಅಪರಾಧಕ್ಕೆ ಶಿಕ್ಷೆಯಾಗಿ ಕೈಕತ್ತರಿಸಿದವನು ಮೋಟ, ಮೂಗು ಕತ್ತರಿಸಿದವಳು ಮೂಕೊರತಿ ಇವರಿಬ್ಬರೂ ಇದ್ದ ರೀತಿಯಲ್ಲೇ ಲಜ್ಜಾಸ್ಪದರು. ತಮ್ಮ ಇಂಥ ಪಾಪಜೀವನದ ಪರಿವೆಯಿಲ್ಲದೆ ಮೋಟನೇನಾದರೂ ಕಿರೀಟವನ್ನು ಧರಿಸಿದರೆ, ಮೂಕೊರತಿಯೇನಾದರೂ ಕಣ್ಣಿಗೆ ಕಾಡಿಗೆ ಹಚ್ಚಿ. ಕೆನ್ನೆಗೆ ತುಟಿಗೆ ಬಣ್ಣ ಹಚ್ಚಿದರೆ ಅದು ಅತ್ಯಂತ ಹಾಸ್ಯಾಸ್ಪದವಾಗಿ ಕಾಣುವುದು. ಭಕ್ತನೆನಿಸಿಕೊಳ್ಳಬೇಕಾದವನಿಗಾದರೂ ಉದಾತ್ತವಾದೊಂದು ನಿಲವು, ಸದ್ವಾಸನೆಯ ಮೂಗು, ಆತ್ಮಜ್ಞಾನದ ಮುಖಮಾಟವಿರಬೇಕು. ಇವಿಲ್ಲದವನು ತಲೆಯಲ್ಲಿ ರುದ್ರಾಕ್ಷಿಯನ್ನು ಹಣೆಯಲ್ಲಿ ವಿಭೂತಿಯನ್ನು ಧರಿಸಿದರೆ ಅದೂ ಅತ್ಯಂತ ಲಜ್ಜಾಸ್ಪದ ಹಾಸ್ಯಾಸ್ಪದ. ಲಿಂಗಜ್ಞಾನವೇ ಇಲ್ಲದವನಿಗೆ ರುದ್ರಾಕ್ಷಿಯೇಕೆ? ತ್ರಿವಿಧದಾಸೋಹವೇ ಇಲ್ಲದವನಿಗೆ ಭಸ್ಮ ತ್ರಿಪುಂಡ್ರ ಧಾರಣೆಯೇಕೆ ?
ಕುರುಡನು ರತಿಕ್ರೀಡೆಯಾಡುವಲ್ಲಿ ಎಷ್ಟು ಅವಮಾನಿತನಾಗುವನೆಂಬುದನ್ನು ಯಾರಾದರೂ ಕಲ್ಪಿಸಿಕೊಳ್ಳಬಹುದು, ಬಸವಣ್ಣನವರನ್ನು ಇತರರು ಭಕ್ತಿ ಭಂಡಾರಿ ಎಂಬುದಿರಲಿ-ಅವರು ತಮಗೆ ತಾವೇ ಭಕ್ತನೆಂದು ಕೊಳ್ಳಲೂ ಹಿಂಜರಿಯುತ್ತಿದ್ದರು-ಶರಣರ ಮುಂದೆ ತಾನೆಷ್ಟರವನೆಂಬುದು ಅವರ ವಿನಯ. ಇದು ಬಸವಣ್ಣ ನವರ ಗುಪ್ತಭಕ್ತಿಯ ಷರಾಕಾಷ್ಮೆಯಲ್ಲದೆ ಮತ್ತೇನು ?
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.