Hindi Translationप्रभु तन, मन, धन पर चलते हैं,
एक क्षण विलंब हो, तो पूछते हैं ।
प्रभु मनमाना निंदा करते हैं,
शिव शिव, सिर दबाकर ठोंकते हैं
मेरे प्राणों के प्रभु, तव शरण
कूडलसंगमदेव ॥
Translated by: Banakara K Gowdappa
English Translation The masters go
By all one is and has:
If but a moment late,
They will not scold me!
The masters blame me at their own sweet will!
O God, good Śiva! How they press
My head low to the ground
And stamp it down!
Yea, Thy Śaraṇās,
O Kūḍala Saṅgama Lord,
The masters of my soul!Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationతను మన ధనముల దిగదొక్కి
ఒడయులు నడతురయ్యా!
క్షణము దడసిన ప్రచండులై తిట్టెదరయ్యా
ఇచ్చవచ్చినట్లు హేళన సేతురయ్యా మాటిమాటికి;
శివశివా! తలగుంజి క్రిందికి వంచి
చావకొట్టెదరయ్యా మీ శరణులు
నాకు ప్రాణ ప్రభువులై యుండిరయ్యా.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಇದೊಂದು ಊಳಿಗಮಾನ್ಯ ಪದ್ಧತಿಯ ಅನುಸರಣೆಗೆ ಆಹ್ವಾನ ಕೊಡುವ ವಚನವೆಂದರೆ-ಭಕ್ತಿಪಂಥದ ಸೇವಾಮಾರ್ಗದ ಕಠೋರತೆಯನ್ನು ಅರಿಯದವರು ಆಡುವ ಮಾತಾಗುವುದು.
ಶರಣರು ಶಿವನಿಗೆ ದಾಸರಾದರೆ-ಬಸವಣ್ಣನವರು ಆ ಶರಣರಿಗೆ ತಾವು ದಾಸರೆಂದೂ, ಅವರೇ ತಮ್ಮ ತನು ಮನ ಧನಕ್ಕೂ ಪ್ರಾಣಕ್ಕೂ ಒಡೆಯರೆಂದೂ-ಮರಳಿ ಮರಳಿ ಮನವರಿಕೆಮಾಡಿಕೊಳ್ಳುತ್ತಿರುವರು.ಶಿವ ಶರಣರ ಊಳಿಗ ಮಾಡಲೇ ತಮ್ಮ ತನುವನ್ನು, ಅವರ ಹಿತಚಿಂತನೆ ಮಾಡಲೇ ತಮ್ಮ ಮನವನ್ನು, ಅವರ ಪರವಹಿಸಿ ವ್ಯಯಮಾಡಲೇ ತಮ್ಮ ಧನವನ್ನು ಮೀಸಲಿಟ್ಟಿರಬೇಕು-ಆಯಾ ಸಮಯಕ್ಕೆ ಆಯಾ ಪದಾರ್ಥವನ್ನು ವಿಳಂಬವಿಲ್ಲದೆ ವಿನಿಯೋಗಿಸಬೇಕು.ವಿಳಂಬವಾದರೆ ಒಡೆಯರಾದ ಶಿವಶರಣರು ತಮಗಿರುವ ಧಾರ್ಮಿಕ ಹಕ್ಕನ್ನು ಚಲಾಯಿಸಿ ಭಕ್ತನ ತನು ಮನ ಧನದ ಮೇಲೆ ದಾಳಿ ಮಾಡುವರು-ಅಂದರೆ ಆ ಭಕ್ತನ ತನುಮನ ಧನಗಳು ಅವನ ಸ್ವಾರ್ಥಕ್ಕೇ ಬಳಕೆಯಾಗದಂತೆ ನಿರೋಧಿಸುವರು. ಹೀಗೆ ಹಿಂದೆಷ್ಟೋ ಸಲ ಎಚ್ಚರಿಸಿದ್ದರೂ ಯಥಾ ರೀತಿ ವಂಚನೆ ಮಾಡುತ್ತಲೇ ಬಂದಿದ್ದ ಆ ಭಕ್ತನನ್ನು ಜರಿದು-ಮುಂದಿನ್ನೊಂದು ಸಲ ಹಾಗೆ ಮಾಡುವೆಯಾ ಎಂದು ಗದರಿಸಿ, ಕೆಳಕ್ಕೆ ಕೆಡವಿ, ನೆಲಕ್ಕೆ ಅವನ ತಲೆಯನ್ನು ಅಪ್ಪಳಿಸುವರು. ಈ ವಿಧವಾಗಿ ಶಿಕ್ಷಿಸುವಲ್ಲಿ ಆ ಭಕ್ತನ ಪ್ರಾಣ ಹೋದರೇನು-ಅವನ ಆ ಪ್ರಾಣಕ್ಕೂ ಒಡೆಯರು ಅವರೇ ಅಲ್ಲವೆ? ಎಂದು ಬಸವಣ್ಣನವರು ಶಿವಶರಣರಿಗೆ ತಮ್ಮ ಸರ್ವಾಂಗಶರಣಾಗತಿಯನ್ನು ಘೋಷಿಸಿ-ಆಜ್ಞಾವರ್ತಿಯಾಗಿ ಅಂಜಿ ನಡೆಯಲು ತಮಗಿರುವ ಇರಾದೆಯನ್ನು ಎಗ್ಗುಸಿಗ್ಗಿಲ್ಲದೆ ವ್ಯಕ್ತಪಡಿಸುತ್ತಿರುವರು.
ಇದು ಬಸವಣ್ಣನವರು ಸ್ವತಃ ಅನುಸರಿಸಲು ಸಿದ್ಧವಾಗಿದ್ದ ಸೇವಾವಿಧಾನದ ನಿರೂಪಣೆಯೇ ಹೊರತು ಇತರರಿಗೆ ಹೊರಡಿಸಿದ ನಿರೂಪವಲ್ಲವೆಂಬುದನ್ನು ಗುರಿತಿಸಿಕೊಳ್ಳಬೇಕಾಗಿದೆ.
ಬಸವಣ್ಣನವರು ಶಿವಶರಣರ ಮನೆಗಳಲ್ಲಿ ಸೇವಕರಾಗಿದ್ದರೆಂಬಂಥ ಈ ವಿಧವಾದ ವಚನಗಳನ್ನು ಬರೆದಿರುವುದು ವಚನರಚನೆಯ ತಮ್ಮ ಕಾವ್ಯ ಕೌಶಲ್ಯವನ್ನು ಮೆರೆಯಲಿಕ್ಕಾಗಿ ಅಲ್ಲ-ಅವರು ಕಲ್ಯಾಣದಲ್ಲಿ-ಮಹಾ ಶಿವಭಕ್ತರೆಂದು ಪ್ರಖ್ಯಾತರಾಗುವ ಮುನ್ನ-ಬಿಜ್ಜಳನಲ್ಲಿ ಭಂಡಾರಿಯಾಗುವುದಕ್ಕೂ ಮುನ್ನವೇ-ಈ ರೀತಿ ಚಾಕರಿ ಮಾಡಿದ್ದು ವಾಸ್ತವವಿರಬೇಕು. ಇದನ್ನೆಲ್ಲಾ ಪುರಾಣಿಕರು ಬಹುಮಟ್ಟಿಗೆ ಮುಚ್ಚಿ ಹಾಕಿರಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.