Hindi Translationअर्थप्राणाभिमान के प्रभु, सद्भक्त हैं,
मेरे और कोई नहीं है ।
‘भृत्यापराधः स्वामिनो दंडः’
कूडलसंगमदेव तुम ही प्रमाण हो ॥
Translated by: Banakara K Gowdappa
English Translation They are true devotees
Who can be masters of
Life, honour, wealth; but I
Have none, O Lord!
'The master pays for his servant's fault':
Thou only art
A witness, O Lord,
Kūḍala Saṅgama!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఅర్ధ ప్రాణాభిమానముల కొడయులు
సద్భక్తులే గాని ఇక నా కెవ్వరూ లేరయ్య
‘‘భృత్యాపరాధః స్వామినో దండః ‘‘కాని
కూడల సంగమదేవా నీవే ప్రమాణము.
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲವಿಷಯ -
ವಿನಮ್ರತೆ
ಶಬ್ದಾರ್ಥಗಳುಅಭಿಮಾನ = ಪ್ರೀತಿ; ಅರ್ಥ = ಹಣ, ಪುರುಷಾರ್ಥಗಳಲ್ಲಿ ಒಂದು; ದಂಡ = ; ಪ್ರಮಾಣು = ; ಭೃತ್ಯ = ; ಸದ್ಭಕ್ತ = ;
ಕನ್ನಡ ವ್ಯಾಖ್ಯಾನತಮ್ಮ ಭಕ್ತಸ್ತರದಲ್ಲಿ ನಿಂತು ಬಸವಣ್ಣನವರು ಶರಣರಿಗೆ ಈ ಮುಂದಿನಂತೆ ಬಿನ್ನೈಸಿಕೊಳ್ಳುತ್ತಿರುವರು: ನನ್ನ ಅರ್ಥ ಪ್ರಾಣ ಅಭಿಮಾನ ನಿಮ್ಮದೇ-ನೀವೇ ಅವಕ್ಕೆಲ್ಲ ಒಡೆಯರು. ಶರಣರಾದ ನೀವಲ್ಲದೆ-ನನ್ನ ಹೆಂಡತಿ ಮಕ್ಕಳು ಬಂಧು ಬಳಗ ಯಾರೂ ಅವಕ್ಕೆ ಉತ್ತರಾಧಿಕಾರಿಗಳಲ್ಲ. ಹೀಗೆ ನನ್ನದೆಂಬ ಅರ್ಥವನ್ನೂ ಪ್ರಾಣವನ್ನೂ ಅಭಿಮಾನವನ್ನೂ ಅಳಿಮನಸ್ಸಿನಿಂದ ನಿಮಗಲ್ಲದನ್ಯಕ್ಕೆ ನಾನು ಅಪವ್ಯಯಮಾಡಿ ಅಪರಾಧಿಯಾದರೆ-“ಇಂಥವರ ಅಳು(ಭಕ್ತ) ಹೀಗೆ ಮಾಡಿದ, ಆ ಭಕ್ತನ ಆಗುಹೋಗಿನ ಮೇಲೆ ಅವರಿಗೆ ನಿಗವಿಲ್ಲ” ವೆಂದು ನಿಮ್ಮನ್ನೇ ತಪ್ಪಿತಸ್ಥರನ್ನಾಗಿ ತೀರ್ಮಾನಿಸಿ-ನಿಮಗೇ ದಂಡಹಾಕುವರು(ಜಂಗಮ). ಆದ್ದರಿಂದ ನನ್ನದೆಂಬುದೇನಿದೆಯೋ ಅದರ ಮೇಲೆ ನಿಮ್ಮ ಸ್ವಾಮ್ಯವನ್ನು ಒಪ್ಪಿದ್ದೇನೆ-ಅದರ ವಿತರಣೆ ಕರ್ಮಕ್ಕಾಗದೆ ಧರ್ಮಕ್ಕಾಗುವಂತೆ ನನ್ನನ್ನು ನೀವು ನಿಯಂತ್ರಿಸಿ-ಎಂದು ಬಸವಣ್ಣನವರು ಶರಣರಲ್ಲಿ ವಿನಂತಿಸುತ್ತಿರುವರು.
ಶಿವಧರ್ಮಕ್ಕೆ ಸೇರಿದವರ ತನು ಮನ ಧನ ಪ್ರಾಣ ಅಭಿಮಾನಗಳ ಸದ್ವಿನಿಯೋಗಕ್ಕೆ ಶರಣರು ಜವಾಬ್ದಾರರಾಗಿರಬೇಕೆಂಬುದು ಬಸವಣ್ಣನವರ ಅಭಿಪ್ರಾಯವಾಗಿತ್ತು.
(ಇಲ್ಲಿ) ಭಕ್ತರ ಕರ್ತವ್ಯಗಳನ್ನೂ.ಶರಣರ ಜವಾಬ್ದಾರಿಗಳನ್ನೂ, ಆ ಶರಣರಿಗೂ ಒಡೆಯರಾದ ಜಂಗಮದ ಪರಮಾಧಿಕಾರವನ್ನೂ ಈ ವಚನದಲ್ಲಿ ಗುರುತಿಸಬಹುದು.ಶರಣರನ್ನು ಸದ್ಭಕ್ತರೆಂದು ಇಲ್ಲಿ ಮರಳಿ ಕರೆದಿರುವುದನ್ನು ಗಮನಿಸಿರಿ.
ಬಸವಣ್ಣನವರ ಪ್ರಕಾರ-ಶಿವಧರ್ಮಕ್ಕೆ ಸೇರಿದವರ ಸಮೂಹದಲ್ಲಿ ಭಕ್ತ-ಸದ್ಭಕ್ತ(ಶರಣ)-ಜಂಗಮ ಎಂಬ ಮೂರು ಶ್ರೇಣಿಗಳಿದ್ದುವು-ಅವು ಜಾತಿವ್ಯವಸ್ಥೆಯಿಂದ ದೂರವಿದ್ದವೆಂಬುದನ್ನು ಮನಗಾಣಬೇಕು. ನೋಡಿ ವಚನ 330.331
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.