Hindi Translationअर्चना नहीं जानता,
पूजना नहीं जानता,
नित्यप्रति शिवरत्रि मनाना नहीं जानता!
कपट वेष से आकर खेलता हूँ
कपट वेष से!
ईश, मैं तव दासों की दासी का दास हूँ,
तव शरणों के घर का पंगु सेवक हूँ ।
कूडलसंगमदेव, तव लांछनधारी उदर पोषक हूँ ॥
Translated by: Banakara K Gowdappa
English Translation I am a fool at all those ritual forms;
I have no skill to keep
The Night of Śiva day after day!
I've come to play my part
With this professional garb-
Just this professional garb;
O Lord, I am
The servant of a servant's maid;
I am but the lamefoot drudge
Who knows to wear his livery!
O Kūḍala Saṅgama Lord,
Wearing your priestly robes,
I feed my belly, Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఅర్చించు టెట్టులో, పూజించు టెట్టులో
దినదినము శివరాత్రి సేయు టెటులో దెలియ
కప్పడి వేషముతో వచ్చి ఆడెదనయ్యా శివా
నీ దాసుల దాసుని దాసుడ నేనయ్యా
మీ వేషధారి యింటి కుంటివాడ నేనయ్యా
దేవా; మీ లాంఛనము ధరియించు
ఉదర పోషకుడ నేనయ్యా !
Translated by: Dr. Badala Ramaiah
ಕನ್ನಡ ವ್ಯಾಖ್ಯಾನಹರಿಹರ-ಸಿಂಗಿರಾಜರು ಕೂಡಲಸಂಗಮವನ್ನು-ಕಪ್ಪಡಿಯ ಸಂಗಮವೆಂದೂ, ಷಡಕ್ಷರಿಯು ಕೇವಲ ಕಪ್ಪಡಿಯೆಂದೂ ಕರೆದಿರುವರು (ನೋಡಿ ಸಿಂಗಿಪು. 5-94) ವೃಷಭೇಂದ್ರ ವಿಜಯ 3-63). ಬಾಗೇವಾಡಿಯಿಂದ ಈ ಕಪ್ಪಡಿಗೆ ಬಾಲಕ ಬಸವಣ್ಣನವರು ಹೋದಾಗ ಅಲ್ಲಿ ಸಂಗಮೇಶ್ವರಲಿಂಗವನ್ನು ಪೂಜಿಸುತ್ತಿದ್ದವರು (ಆ ಸಂಗಮೇಶ್ವರದೇವರ ಪಾದಮೂಲಕ್ಕೇ ತಮ್ಮನ್ನು ಅರ್ಪಿಸಿಕೊಂಡು ಆ ದೇವರ ಬಳಿದೊತ್ತಾಗಿದ್ದ) ಸ್ಥಾನಪತಿ ಈಶಾನದೇವರೆಂಬವರು. ಇವರು ಕಪ್ಪಡಿಗೆ ಬಂದ ಬಸವಣ್ಣನವರನ್ನು ಕಂಡು-ಕಾರಣಪುರುಷರೆಂದು ಮನಗಂಡು(ತಾವು ಮಾಡುತ್ತಿದ್ದ) ಸಂಗಮೇಶ್ವರಲಿಂಗದ ಪೂಜೆಯನ್ನು ಅವರಿಗೇ ವಹಿಸಿಕೊಡುತ್ತಾರೆ.
ಹೀಗೆ ಕೂಡಲಸಂಗಮದಲ್ಲಿ ಕಪ್ಪಡಿ(ಅರ್ಚಕ)ಗಳಾದ ಬಸವಣ್ಣನವರು-ಈ ವಚನದಲ್ಲಿ “ಅರ್ಚಿಸಲರಿಯೆ ಪೂಜಿಸಲರಿಯೆ ನಿಚ್ಚನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ ಕಪ್ಪಡಿವೇಷದಿಂದಾನು ಬಂದಾಡುವೆ” ಎನ್ನುತ್ತ-ಕಪ್ಪಡಿಯಾಗಿರುವ ತಮಗೆ ದೇವರ ಪೂಜೆ ಮಾಡುವುದೇ ತಿಳಿಯದೆಂದು ತಮ್ಮ ಮುಗ್ಧತೆಯನ್ನು ಕುರಿತು ತಾವೇ ದೈನ್ಯವಾಡುತ್ತಿರುವಂತಿದೆ. ಆದ್ದರಿಂದ ಈ ವಚನವನ್ನು ಬಸವಣ್ಣನವರು ಕೂಡಲಸಂಗಮದಲ್ಲಿ ತಮ್ಮ ಕೌಮಾರ್ಯಕಾಲದಲ್ಲೇ ಬರೆದಿರಬೇಕು.
ಕಪ್ಪಡಿ: (ನದೀ ಸಂಗಮಸ್ಥಾನದ) ಶಿವಾಲಯಗಳಲ್ಲಿ ದೇವರನ್ನು ಪೂಜೆಮಾಡಿಕೊಂಡಿರುವ ಅರ್ಚಕ(ಸಾಧುಸಂತ)ರನ್ನು ಕಪ್ಪಡಿ(=ಭಿಕ್ಷು) ಎಂದು ಕರೆಯುವ ರೂಢಿಯಿದ್ದಿತಾಗಬಹುದು. ಈ ಕಪ್ಪಡಿಗಳ ವ್ಯಕ್ತಿಗತ ವರ್ಚಸ್ಸಿನಿಂದಲೇ ಆ ಸಂಗಮಕ್ಷೇತ್ರಗಳು ಕಪ್ಪಡಿ ಸಂಗಮವೆಂದೇ ಪ್ರಸಿದ್ದಿಗೆ ಬಂದುದಾಗಬಹುದು. ಕನ್ನಡ ಸಾಹಿತ್ಯ ಪರಿಷತ್ತಿನವರು ತಮ್ಮ ಕನ್ನಡ ಬೃಹನ್ನಿಘಂಟಿನಲ್ಲಿ ಕಪ್ಪಡಿ ಎಂಬ ಪದಕ್ಕೆ ತಿರುಕ ಎಂದು ಅರ್ಥ ಬರೆದು-ಕೊಟ್ಟಿರುವ ಶಾಸನೋಲ್ಲೇಖ ಗಮನಾರ್ಹವಾಗಿದೆ-“ಸ್ವಾಮಿಯಾತ್ರೆಗೆ ಬಂದ ಕಷ್ಟಡಿಗಳ ಸತ್ರಕ್ಕೆ ಮಲ್ಲರಸ ಬಿಟ್ಟ ಕೆಯಿ” (ಸೌ.ಇ.ಇ. 4-1, 252-38, ಕ್ರಿ.ಶ.1148) ಈ “ಕಪ್ಪಡಿ” ಗೆ ತಿರುಕ ಎಂಬುದಕ್ಕಿಂತ ಸಾಧು ಸಂತ ಬೈರಾಗಿ ಭಿಕ್ಷು ಎಂದು ಅರ್ಥೈಸುವುದು ಸೂಕ್ತ.
ವೇಷಧಾರಿ: ಶಿವಲಾಂಛನಧಾರಿಯಾದ ಶಿವಭಕ್ತ. ಪಂಗುಳ(<ಪಂಗುಲ) : ಪಂಗು, ಹೆಳವ, ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನು-ಎಂದರೆ : ನಾನು ಶಿವಭಕ್ತರ ಮನೆಯನ್ನು ಬಿಟ್ಟು ಅಲುಗಲಾರದವನು-ಎಂದರ್ಥ. ಕರ್ಪಟ: ಹರಕುಬಟ್ಟೆ, ಕರ್ಪಟಿನ್>ಕಪ್ಪಡಿ, ಅಥವಾ ಖರ್ಪರ : ಭಿಕ್ಷಾಪಾತ್ರೆ, ಖರ್ಪರಿನ್ >ಕಪ್ಪರಿ > ಕಪ್ಪಡಿ-ಅಂದರೆ ಸನ್ಯಾಸಿ, ಬ್ರಹ್ಮಚಾರಿ. “ನಡೆ ನೀನು ಕಪ್ಪಡಿ ಸಂಗಯ್ಯನಲ್ಲಿ ಒಡಗೂಡು” (ಅಲ್ಲಮನ ವ.ಚಂ. 1165).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.