Hindi Translationसिरियाळ को सेठ कहूँ?
माचय्या को धोबी कहूँ?
कक्कय्या को डोम कहूँ?
चन्नाय्या को मातंगा कहूँ?
अपने को ब्राह्मण कहूँ,
तो कूडलसंगमदेव हँसेंगे॥
Translated by: Banakara K Gowdappa
English Translation Shall I call Siriyāḷa a man of trade,
And Mācayya a washerman?
Call Kakkayya a tanner, and
Cennayya a cobbler?
And if I call myself
A priest, will not
Kūḍala Saṅgama just laugh at me?
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Urdu Translationکیا نہ تحقیرہوگی انساں کی
کیا ہنسیں گےنہ کوڈلا سنگا
بات میری زباں سےجب نکلے
ہےوہ سریال ایک خوردہ فروش
یاوہ ماچیّا ایک دھوبی ہے
اورقصّاب ہے وہ ککیّا
یا ہےچنیّا ، خاندانی چمار
اورمیں صرف میں برہمن ہوں
Translated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲವಿಷಯ -
ಜಾತಿ
ಶಬ್ದಾರ್ಥಗಳುಹಾರುವ = ;
ಕನ್ನಡ ವ್ಯಾಖ್ಯಾನಜಾತಿಯ ಅಡ್ಡ ಹೆಸರಿಂದ ಜನರನ್ನು ಹೆಸರಿಸುವುದೊಂದು ರೂಢಿ-ಅದು ಈಗಲೂ ಅಪರೂಪವಲ್ಲ ಸ್ವತಃ ಬಸವಣ್ಣನವರೇ (ಶರಣ)ಜನರನ್ನು ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಮಡಿವಾಳ ಮಾಚಯ್ಯ. ಮಹಾದೇವಶೆಟ್ಟಿ ಎಂದು ಮುಂತಾಗಿ ತಮ್ಮ ವಚನಗಳಲ್ಲಿ ಹೆಸರಿಸಿರುವುದುಂಟು. ಆದರೇನು ಆ ಜಾತಿಗಳು ಸೂಚಿಸುವ ಕೀಳು ಮೇಲನ್ನು ಆ ಜನ ಮೀರಿದ್ದರೆಂಬುದನ್ನು ಅವರು ತಿಳಿದಿದ್ದರು. ವ್ಯಕ್ತಿಗೆ ಅವನು ಹುಟ್ಟಿದ ಜಾತಿಗೆ ಅವರೆಂದಿಗೂ ಉಚ್ಚ ನೀಚ ಭಾವದ ಗಂಟುಹಾಕಲಿಲ್ಲ. ನಮ್ಮ ಜಾತಿಪದ್ದತಿಯ ಬುನಾದಿ ಜೀವನ ನಿರ್ವಹಣೆಗೆ ಅವಲಂಬಿಸಿದ ಉದ್ಯೋಗವೇ ಆಗಿರುವುದನ್ನು ವ್ಯಗ್ರತೆಯಿಂದ ಗುರುತಿಸಿದವರಲ್ಲಿ ಬಸವಣ್ಣನವರೇ ಪ್ರಮುಖರಲ್ಲವೆ? ಮುಂದೆ ಅವರ ಅನಿಸಿಕೆಯ ವಿವರವನ್ನು ನೋಡಿ:
ಶಿವಾರ್ಪಣವೀರನಾದ ಸಿರಿಯಾಳನನ್ನು ಒಬ್ಬ ಶೆಟ್ಟಿಯೆಂದು ಕಾಯಕವೀರನಾದ ಮಾಚಯ್ಯನನ್ನು ಒಬ್ಬ ಮಡಿವಾಳನೆಂದು, ಮಹಾಪ್ರಸಾದಿಯಾದ ಕಕ್ಕಯ್ಯನನ್ನು ಒಬ್ಬ ಡೋಹಾರನೆಂದು. ಗುಪ್ತ ಭಕ್ತಿ ಪವಿತ್ರನಾದ ಚೆನ್ನಯ್ಯನನ್ನು ಒಬ್ಬ ಮಾದಾರನೆಂದು ಕರೆದು-ಏನೂ ಅಲ್ಲದ ನನ್ನನ್ನು ಹಾರುವನೆಂದು ಬೀಗಿ ಕರೆದುಕೊಂಡರೆ ದೇವರು ನಗುವುದಿಲ್ಲವೆ ? ಸಿರಿಯಾಳನು ಸಾವನ್ನು ಸಮರ್ಪಿಸಿ ಅಮೃತತ್ವವನ್ನು ಪಡೆದ ಅವನು ಮಾಡಿದ್ದು ಒಳ್ಳೇ ವ್ಯಾಪಾರವೇ, ಮಾಚಯ್ಯನು ಭಕ್ತಜನರ ಮನದ ಮಲಿನವನ್ನು ತೊಳೆದು ಅವರನ್ನು ಮಡಿಮಾಡಿದ-ಅವನದು ಒಳ್ಳೇ ಮಡಿವಾಳಿಕೆಯೇ, ಕಕ್ಕಯ್ಯನು ಮತ್ತು ಚೆನ್ನಯ್ಯನು-ಭಕ್ತರ ಪಾದಗಳು ನೋಯದಿರಲೆಂದು ಪಾದರಕ್ಷೆಯನ್ನು ಮಾಡಿದರು-ಅವರದು ಒಳ್ಳೇ ಚಮ್ಮಾರಿಕೆಯೆ ಆಯಿತು. ನಾನು ಅವರೆಲ್ಲರಿಗಿಂತ ಉತ್ತಮನಾಗಲು- ಆ ಏನನ್ನೂ ಮಾಡಲಿಲ್ಲವಲ್ಲ!? ನಾನು ಹಾರುವ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಉತ್ತಮನಾದೆನಂದರೆ ಹಾಸ್ಯಾಸ್ಪದ. ವೇದ ಓದುವರ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೇ ಯಾವನಾದರೊಬ್ಬನು ಉತ್ತಮನೆನಿಸುವುದು ಹಾಸ್ಯಾಸ್ಪದವಲ್ಲದೆ ಮತ್ತೇನು ?
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.