ಚೆನ್ನಯ್ಯನ ಮನೆಯ ದಾಸಿಯ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು-
ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು;
ಇವರಿಬ್ಬರಿಗೆ ಹುಟ್ಟಿದ ಮಗ ನಾನು,
ಕೂಡಲಸಂಗಮದೇವ ಸಾಕ್ಷಿಯಾಗಿ.
Art
Manuscript
Music Courtesy:
Video
TransliterationCennayyana maneya dāsiya maga
kakkayyana maneya dāsiya magaḷu-
ivaribbaru holadali beraṇige hōgi saṅgava māḍidaru;
ivaribbarige huṭṭida maga nānu,
kūḍalasaṅgamadēva sākṣiyāgi.
Hindi Translationचन्नय्या के घर का दास-पुत्र,
कक्कय्या के घर की दासी-पुत्री,
दोनों खेत में मिल उपले के लिए जाकर
साम्मिलित हुए । समागम किया
मैं इन दोनों से उत्पन्न पुत्र हूँ,
कूडलसंगमदेव साक्षी है॥
Translated by: Banakara K Gowdappa
English Translation The son of the servant-maid in Cennayya's house,
The daughter of the maid in Kakkayya's house-
Those two went out to gather dung
And fell together: I the son
Born of those two-so witness me
Lord Kūḍala Saṅgama!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationచెన్నయ్య యింటి దాసీపుత్రుడు
కక్కయ్య యింటి దాదికూతురు
ఈ యిరువురూ పిడకలేర చేనికిపోయి
చేరిపోవ నా యిద్దరికి పుట్టిన బిడ్డ నేను
కూడల సంగమదేవుడే దీనికి సాక్షి.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಹುಟ್ಟಿನಿಂದ ಕೀಳು ಎಂಬುದಿಲ್ಲ
ಸಮಾಜದ ನೆಮ್ಮದಿಗೆ ಭಂಗವುಂಟುಮಾಡುವುದೆಂಬ ಕಾರಣದಿಂದಲೇ ಬಸವಣ್ಣನವರು ಉತ್ತಮ ಕುಲವೆನಿಸಿದ್ದ ತಮ್ಮ ಬ್ರಾಹ್ಮಣ ಜಾತಿಯನ್ನು ಸಂಪೂರ್ಣವಾಗಿ ತ್ಯಜಿಸಿ ಬಂದಿದ್ದರೂ ಕೆಲವರು ಮಾತ್ರ ಅವರು ಉಚ್ಚ ಕುಲದಲ್ಲಿ ಹುಟ್ಟಿದವರೆಂಬ ಭಾವನೆಯನ್ನು ಇರಿಸಿಕೊಂಡೇ ಅವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ನೋಡಿದೆವು. ಜಾತಿರಹಿತ ಸಮಾಜದ ನಿರ್ಮಾಣದಲ್ಲಿ ನಿರತರಾಗಿದ್ದ ಬಸವಣ್ಣನವರಿಗೆ ಹೀಗೆ ಜಾತಿಯ ಕಾರಣದಿಂದಲೇ ದೊರೆಯುವ ಗೌರವ ಆದರಗಳು ಅವರ ಭಾವನೆಯನ್ನೇ ಕೆಣಕಿ ಭಾವೋದ್ರೇಕಕ್ಕೆ ಎಡೆಮಾಡುತ್ತವೆ. ಅಂತಹ ಬಾವೋದ್ರೇಕದಲ್ಲಿ ನುಡಿದುದೇ ಪ್ರಸ್ತುತ ವಚನ. ತಮ್ಮನ್ನು ಉತ್ತಮ ಕುಲದವರೆಂದು ಜನ ತಿಳಿಯುವುದು ತಾವು ಮೊದಲು ಬ್ರಾಹ್ಮಣರಾಗಿದ್ದರೆಂಬ ಕಾರಣದಿಂದಲೇ ಅಲ್ಲವೇ ಎಂದು ‘ನಾನು ಬ್ರಾಹ್ಮಣನೇ ಅಲ್ಲ, ನಾನು ಬ್ರಾಹ್ಮಣ ವಂಶದಲ್ಲಿ ಹುಟ್ಟಿಯೇ ಇಲ್ಲ’ ಎನ್ನುತ್ತಾರೆ. ತಮ್ಮ ಹುಟ್ಟಿದ ಬಗೆಯನ್ನು ಅತ್ಯಂತ ನಿಮ್ನ ರೀತಿಯಲ್ಲಿ ಕಲ್ಪಿಸಿ ಹೇಳುತ್ತಾರೆ. ‘ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ....’ ಚೆನ್ನಯ್ಯ ಸಾಮಾನ್ಯ ಜನರ ದೃಷ್ಟಿಯಲ್ಲಿ ಮಾದಿಗ, ಅಂತೆಯೇ ಕಕ್ಕಯ್ಯ ಡೋಹಾರ. ಹೀಗಿರುವಾಗ ಅವರೀರ್ವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ದಾಸಿಯರು ಲೋಕದ ದೃಷ್ಟಿಯಲ್ಲಿಅದೆಷ್ಟು ನಿಮ್ನ ವರ್ಗದವರಾಗಿರಬೇಕು! ಚೆನ್ನಯ್ಯನ ಮನೆಯಲ್ಲಿರುವ ಆ ದಾಸಿಯ ಮಗನಿಗೂ ಕಕ್ಕಯ್ಯನ ಮನೆಯ ಆ ದಾಸಿ ಮಗಳಿಗೂ ನಾನು ಬಸವಣ್ಣ, ಹುಟ್ಟಿದೆನೆಂದಮೇಲೆ ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಮಾತಾದರೂ ಎಲ್ಲಿ ಅವರಾದರೂ ಮದುವೆಯಾದ ದಂಪತಿಗಳೇ? ಅದೂ ಇಲ್ಲ. ಹೊಲದಲ್ಲಿ ಇಬ್ಬರೂ ಬೆರಣಿಯನ್ನಾರಿಸಲು ಹೋಗಿದ್ದರು. ಆಗ ಪರಸ್ಪರ ಆಕರ್ಷಿತರಾಗಿ ಕೂಡಿಕೊಂಡರು. ಆ ಕಾರಣದಿಂದ ನಾನು ಹುಟ್ಟಿದೆ ಎಂದು ಬಸವಣ್ಣನವರು ಎಷ್ಟು ಸಾಧ್ಯವೋ ಅಷ್ಟು ನಿಕೃಷ್ಟವಾಗಿ ತಮ್ಮ ಜನ್ಮವನ್ನು ಕಲ್ಪಿಸಿ ಹೇಳಿದ್ದಾರೆ.
ಹೀಗೆ ಮದುವೆಯಾಗದವರಿಗೆ ಹುಟ್ಟಿದ ನನ್ನನ್ನೇ ಉತ್ತಮನೆಂದು ಕರೆದು ಗೌರವಿಸುವುದಾದರೆ ನಿಜವಾದ ತಂದೆ-ತಾಯಿಗಳಿಗೆ ಹುಟ್ಟಿದ ದಾಸಯ್ಯ, ಕಕ್ಕಯ್ಯಗಳು ಅದೆಂತು ಕೀಳಾಗಬಲ್ಲರು? ಎಂಬುದೇ ಇಲ್ಲಿಯ ಇಂಗಿತಾರ್ಥ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.