Hindi Translationमेरी माँ निंबव्वे पानी ढोकर जीती है,
मेरे पिता चन्नय्या राजदंडधारी है।
कहते हो, हमारा कोई नहीं है,
मेरी बहन कंची में पाचिका है;
कहते हो, हमारा कोई नहीं है;
मैं अपने परदादाओं की संचित भक्ति
तव हस्त से पाता हूँ, कूडलसंगमदेव ॥
Translated by: Banakara K Gowdappa
English Translation Nimbavve's my mother: she lives
By fetching water,
Cennayya, is my father:
He fetches fodder for the royal stable.
You say I have no kin:
Why, my sister cooks at Kañci!
O Kūḍala Saṅgama Lord,
Lo, I received out of your hands
The piety my ancestors
Have harvested.
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationనీరు నింపెడి యవ్వ మా యవ్వ నింబవ్వ
నృపుని లాడమున పనివాడు మా అయ్య చెన్నయ్య
ఎవ్వరూ లేరంటిరే నాకు
కంచిలో వంటకత్తె మా యక్క
మా తాతలు పొందు భక్తిని
యీ చేతుల గొందు కదరా! సంగమ దేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಭಕ್ತಸ್ಥಲವಿಷಯ -
ವಂಶಾವಳಿ
ಶಬ್ದಾರ್ಥಗಳುಎರೆ = ; ಬಾಣಸ = ; ರಾಯಕಂಪಣ = ; ಹಡೆದ = ;
ಕನ್ನಡ ವ್ಯಾಖ್ಯಾನತನ್ನ ಹಿರಿಯರು ಒಂದು ಕಾಲಕ್ಕೆ ಸೇವೆಮಾಡಿಕೊಂಡಿದ್ದ ಧಣಿಯ ಮನೆಗೆ ಒಬ್ಬ ಬರುತ್ತಾನೆ. ಅಮ್ಮ ಎಂದು ಕೂಗುತ್ತಾನೆ. ಆಗ ಒಡೆಯ ಬಂದು-ಇಲ್ಲಿ ನಿನ್ನವರು ಯಾರೂ ಇಲ್ಲ ಎನ್ನುತ್ತಾನೆ. ಆಗಂತುಕನು-ಸ್ವಾಮಿ, ನಿಮ್ಮ ಮನೆಯಲ್ಲಿ ಹಿಂದೆ ನಮ್ಮ ತಾಯಿ ನೀರು ತುಂಬುತ್ತಿದ್ದಳು-ಅವಳ ಹೆಸರು ಇಂಥದು, ಆಮೇಲೆ ನಮ್ಮ ತಂದೆ ನಿಮ್ಮ ದನಕರುಗಳಿಗೆ ಹುಲ್ಲು ಕೊಯ್ದು ತರುತ್ತಿದ್ದ-ಅವನ ಹೆಸರು ಇಂಥದು, ಮೊನ್ನೆಮೊನ್ನೆಯವರೆಗೆ ನಮ್ಮ ಅಕ್ಕ ನಿಮ್ಮ ಮನೆಯಲ್ಲೇ ಅಡಿಗೆಮಾಡಿಕೊಂಡಿದ್ದಳು-ಅವಳ ಹೆಸರು ಇಂಥದು ಎಂದಾಗ ಆ ಧಣಿಗೆ ಎಲ್ಲವೂ ನೆನಪಾಗುವುದು-ಆಗಂತುಕನನ್ನು ಪ್ರೀತಿಯಿಂದ ಕರೆದು ಕುಳ್ಳಿರಿಸಿ ಊಟಕ್ಕಿಟ್ಟಾಗ ನಮ್ಮ ತಾಯಿ ತಂದೆ ಅಕ್ಕಂದಿರು ಮಾಡಿದ ಸೇವೆಗೆ ಪ್ರತಿಫಲವಾಗಿ ನಾನೀಗ ಉಣ್ಣುತ್ತಿದ್ದೇನೆ ಎಂದು ಅಲ್ಲಿ ಉಣ್ಣಲು ಒದಗಿದ ಋಣಾನುಬಂಧವನ್ನು ವಿನಯದಿಂದಲೇ ವ್ಯಕ್ತಪಡಿಸುವನು. ಇಂಥದೊಂದು ಕಥಾನಕವನ್ನು ಹೋಲುವುದು ಈ ವಚನದ ಧಾಟಿ.
ದಾಸೋಹಗೃಹವೊಂದರಲ್ಲಿ ನೀರೆರೆಯುವ ದಾಸಿಯಾಗಿದ್ದ ನಿಂಬವ್ವೆಯನ್ನೂ, ಚೋಳರಾಜನ ಅರಮನೆಯ ಕುದುರೆಗಳಿಗೆ ಕಂಪಣದ ಹುಲ್ಲನ್ನು ಕೊಯ್ದು ಬಂಡಿಯಲ್ಲಿ ಹೇರಿ ತರುತ್ತಿದ್ದ ಮಾದಾರ ಚೆನ್ನಯ್ಯನನ್ನೂ, ಮಗನನ್ನು ಪಾಕಮಾಡಿಟ್ಟ ಕಂಚಿಯಪುರದ ಚೆಂಗಳೆಯನ್ನೂ ಬಸವಣ್ಣನವರು ತಮ್ಮ ತಾಯಿ ತಂದೆ ಅಕ್ಕಂದಿರೆಂದು ಶಿವನಿಗೆ ಸ್ಮರಿಸಿಕೊಟ್ಟು ಶಿವನಲ್ಲಿ ಅರಿಕೆ ಮಾಡಿಕೊಳ್ಳುತ್ತಿರುವರು. ಆ ತಮ್ಮ ಹಿರಿಯರು ಶಿವನಿಗೆ ಮಾಡಿದ ಭಕ್ತಿಯ ಫಲವಾಗಿ ಬಂದ ಪುಣ್ಯದ ಬಲದಿಂದಲೇ ತಾವೀಗ ಶಿವಪ್ರಸಾದಕ್ಕೆ ಅರ್ಹರಾಗಿರುವುದಾಗಿಯೂ ವಿನಂತಿಸಿಕೊಳ್ಳುತ್ತಿರುವರು. (329ನೇ ವಚನದಲ್ಲಿ ಬರುವ ನಮ್ಮಕ್ಕ ಅಥವಾ ನಿಮ್ಮಕ್ಕ ಎಂಬುದರ ಸರಿಯಾದ ಪಾಠ ನಿಂಬಕ್ಕ ಎನ್ನುವುದೇ ಆದರೂ-ಸೂಳೆ ನಿಂಬಕ್ಕನೇ ಬೇರೆಯೆಂದು ಭಾವಿಸಬೇಕಾಗುವುದು.)
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.