ಅಯ್ಯಾ, ನಿಮ್ಮ ವಂಶಾವಳಿಯಲು
ಒಬ್ಬ ತೊತ್ತಿನ ಮಗ ಹುಟ್ಟಿದಾತನ ತೊತ್ತಿನ ಮಗ ನಾನಯ್ಯಾ;
ಬಳಿದೊತ್ತು, ಬಳಗದೊತ್ತು, ವಂಶದೊತ್ತು ನಾನಯ್ಯಾ!
ಕೂಡಲಸಂಗಮದೇವಾ,
ನಿಮ್ಮ ಒಡೆತನಕ್ಕೆ ಕೇಡಿಲ್ಲವಾಗಿ,
ಎನ್ನ ತೊತ್ತುತನಕ್ಕೆ ಕೇಡಿಲ್ಲಾ.
Hindi Translationस्वामी तव वंशावली में एक भृत्य का पुत्र जन्मा,
उसके भृत्य का पुत्र हूँ मैं ।
घराने का भृत्य, संबंधियों का भृत्य,
वंश का भृत्य हूँ मैं ।
कूडलसंगमदेव, तव स्वामित्व की क्षति नहीं,
मेरी दासता की क्षति नहीं ॥
Translated by: Banakara K Gowdappa
English Translation Within Thy lineage, Lord,
I'm son of a servant born
Of a servant's son, O Lord;
I am a servant of Thy house.
A servant of your clan, your tribe!
O Kūḍala Saṅgama Lord,
There is no peril to your Lordship-so
No peril to my servanthood!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఅయ్యా నీ వంశావళియందు
ఒకడు తొత్తుకొడుకు పుట్టె
అతని తొత్తుకు పుట్టితి నేనయ్య !
వరుస తొత్తు వావి తొత్తు వంశము తొత్తు నాదయ్య
కూడల సంగమ దేవా!
మీ ప్రభుత్వమునకు కీడు లేనట్లే
నా భటత్వమునకూ కీడు లేదయ్యా !
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶಿವನು ಅಮೃತಸ್ವರೂಪಿಯಾಗಿ ಅವನ ಒಡೆತನಕ್ಕೆ ಎಂದಿಗೂ ಚ್ಯುತಿಯಿಲ್ಲ-ಅವನು ಎಲ್ಲ ಕಾಲಕ್ಕೂ ಎಲ್ಲ ಜೀವರ ಒಡೆಯ ಜಗದೀಶ್ವರ. ಆದ್ದರಿಂದಲೆ ಅಂಥವನ ತೊತ್ತಾಗಿ ತಾವು ಕೃತಕೃತ್ಯರಾದುದಾಗಿ ಬಸವಣ್ಣನವರು ಆ ಶಿವನನ್ನು ಸಂಬೋಧಿಸಿ ಸಮಾಧಾನಪಡುತ್ತಿರುವರು.
ಸ್ವಾಮಿ, ನಿಮ್ಮ ಅಪರಾವತಾರವಾದ ಶಿವಭಕ್ತರ ಮನೆಯಲ್ಲಿ ವಂಶದೊತ್ತಾದ ಗುಲಾಮನೊಬ್ಬ ಹುಟ್ಟಿದ-ಅವನ ಗುಲಾಮನ ಮಗ ನಾನು. ಶಿವನೇ, ನಿಮಗೆ ನಾನು ನಿಮ್ಮ ಬಳಿಬಳಿಯೇ ಇರುವ ಬಳಿದೊತ್ತು ನಿಮ್ಮ ಬಳಗದಲ್ಲಿಯೇ ಇರುವ ಬಳಗದೊತ್ತು, ನಿಮ್ಮ ವಂಶದವರಿಗೇ ದುಡಿಯಲು ತಲೆಬೋಳಿಸಿಕೊಂಡಿರುವ ನಿಮ್ಮ ವಂಶದೊತ್ತು ನಾನು. ಈ ನನ್ನ ಸೇವೆ ನಿರಂತರವಾಗಿ ನಡೆಯುವಂತೆ ಕರುಣಿಸು-ಎನ್ನುತ್ತ ಬಸವಣ್ಣನವರು-ದಾಸಮಾರ್ಗಾನುಸಾರಿಯಾದ ತಮ್ಮ ಭಕ್ತಿಭಾವವನ್ನು ತೊಡಿಕೊಳ್ಳುತ್ತಿರುವರು.
ಈ ಘಳಿಗೆಯಿದ್ದು ಮರುಘಳಿಗೆ ಸಾಯುವ ನರಮಾನವರ ಕ್ಷುದ್ರಸೇವೆ ಮಾಡದೆ ಮೃತ್ಯುವನ್ನು ಜಯಿಸಿದ ಶಿವನ (ಮತ್ತು ಶಿವಶರಣರ) ಸೇವೆಯನ್ನು ಮರ್ಯಾದೆಯಿಂದ ಚಿರಂತನವಾಗಿ ಮಾಡಿಕೊಂಡಿರುವ ತಮ್ಮ ಸೌಭಾಗ್ಯವನ್ನು ಕುರಿತಿರುವರು ಬಸವಣ್ಣನವರು ಈ ವಚನದಲ್ಲಿ. ಬಸವಣ್ಣನವರ ಆತ್ಮಗೌರವದ ಈ ನಿರ್ಧಾರ ಅವರಿಂದಾಚೆಗೆ ಎಲ್ಲ ಶಿವಕವಿಗಳ ನಿರ್ಧಾರವಾಯಿತು. ಹೀಗೆ ರಾಜಪ್ರಭುತ್ವ ಮತ್ತು ಊಳಿಗಮಾನ್ಯಪದ್ಧತಿಯಿದ್ದಾಗಲೇ ಪ್ರಜಾಪ್ರಭುತ್ವವನ್ನು ಒಂದು ಧಾರ್ಮಿಕನಿಷ್ಠೆಯಾಗಿ ಬಳಕೆಗೆ ತಂದವರು ಶಿವಶರಣರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.