ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ;
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು.
ಬಯಸುತ್ತಿರ್ದೆನಯ್ಯಾ ನಿಮ್ಮ ಭಕ್ತರ ಬರವನು.
ದಿನಕರನುದಯಕ್ಕೆ ಕಮಲ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು, ಕೂಡಲಸಂಗಮದೇವಾ.
Hindi Translationपथ-भ्रष्ट शिशु
जैसे अपनी माँ के लिए तरसता है,
पथ-भ्रष्ट पशु जैसे अपना झुंड ढूँढता है,
मैं तव शरणों का आगमनाकांक्षी
मैं तव भक्तों का आगमनाकांक्षी
सूर्योदय से जैसे कमल विकसित होता है ।
वैसे मुझे तव शरणों का आगमन है, कूडलसंगमदेव ॥
Translated by: Banakara K Gowdappa
English Translation As a lost infant cries for his mother,
As a lamb gone astray seeks the flock,
I yearn for Thy Śaraṇās' coming,
I yearn for Thy bhaktas' coming!
The coming of Thy Śaraṇās , O Lord
Kūḍala Saṅgama,
Is as the lotus opening to the dawn!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationదారితప్పిన శిశువు తల్లి కై ఏడ్చునట్లు
గతిచెడిన పశువు తనమంద వెదకునట్లు
తలచుచుంటినయ్యా నీ శరణుల రాకను
తలపోయుచుంటినయ్యా నీ భక్తుల రాకను
సూర్యోదయమునకు వికసించు
తామరవలె శరణులరాక నాకు సంగయ్యా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶರಣನೊಬ್ಬನ ಅಥವಾ ಹಲವು ಶರಣರ ಬರವನ್ನು ಇದಿರು ನೋಡುವಾಗ ಬಸವಣ್ಣನವರು ಪಡುವ ಉದ್ವೇಗ ತಲ್ಲಣಗೊಳಿಸುವಂಥದು : ತಾಯ ಸೆರಗನ್ನೇ ಹಿಡಿದು ಹೊರಟ ಮಗು ಅನ್ಯಮನಸ್ಸಿನಿಂದ ಸೆರಗನ್ನು ಬಿಟ್ಟು ಹಿಂದುಳಿದು ದಾರಿ ತಪ್ಪಿದಾಗ-ಆ ಮಗುವಿಗೆ ಬಂದ ತನ್ನ ತಾಯ ನೆನಪಿನಂತೆ ಅದು ಅನನ್ಯ. ಹೋಗುತ್ತಿದ್ದ ದನಗಳ ಹಿಂಡಿನಲ್ಲಿ ಒಂದು ಕರು ದಾರಿಯಲ್ಲಿ ಕಂಡ ಹಸುರಿಗೆ ಬಾಯಿಕ್ಕಿ ಹಿಂದುಳಿದು ಮಂದೆಯನ್ನು ಕಾಣದೆ ದಿಕ್ಕುತಪ್ಪಿದಾಗ-ಆ ಕರುವಿಗೆ ಆದ ಒಂಟಿತನದಂತೆ ಅದು ಭಯಂಕರ.
ಅಗಲಿದ ಶರಣರು ಬಳಿ ಬಂದರೆ-ತಾಯಿ ಬಳಿ ಬಂದ ಮಗುವಿನಂತೆ, ಹಿಂಡನ್ನು ಕಂಡ ಕರುವಿನಂತೆ-ಹಿರಿಹಿರಿ ಹಿಗ್ಗುವರು ಬಸವಣ್ಣನವರು. ಅವರ ಆ ಪ್ರಫುಲ್ಲತೆಯನ್ನು ಸೂರ್ಯನ ಉದಯಕ್ಕೆ ಅರಳಿದ ಕಮಲದಲ್ಲಿ ಕಾಣಬಹುದು.
ಶರಣರ ಜೊತೆಗಿದ್ದಷ್ಟು ಕಾಲವೂ ಬಸವಣ್ಣನವರಿಗೆ ಸುಖದ ಕಾಲ-ಅಗಲಿದಾಗ ಅವರು ಅನುಭವಿಸುತ್ತಿದ್ದ ವಿರಹವೇದನೆಯನ್ನೂ, ಪುನರ್ಮಿಲನವಾದಾಗ ಅವರಿಗಾಗುತ್ತಿದ್ದ ಸಂಗಸುಖವನ್ನೂ ಹೃದಯಂಗಮವಾಗಿ ಚಿತ್ರಿಸಲಾಗಿದೆ ಈ ವಚನದಲ್ಲಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.