Hindi Translationअष्टविधार्चन, षोडशोपचार करता हूँ
राजा से अविदित बेगार की भाँति ।
अपना प्राप्त सुख जंगम को
अर्पित करने से अनभिज्ञ औपचारिक हूँ।
स्थावर और जंगम से अनभिज्ञ पूजक हूँ बिना लज्जित हुए ,
फिर भी कूडलसंगमदेव मैं निर्लज्जा से।
कहता हूँ, जंगम मेरे प्राणलिंग है ॥
Translated by: Banakara K Gowdappa
English Translation An eightfold worship I perform,
And service sixteenfold-
As one who labours for no wage
Without the knowledge of the King.
A formalist am I,
Who have not known
To dedicate to Jaṅgama
My whole experienced joy.
I am a worshipper
Who does not know
The difference between
The Liṅga and the Jaṅgama
And yet, imposter that I am,
I do not blush to claim
Jaṅgama as my Prāṇaliṅga.
O Kūḍala Saṅgama Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఅష్టవిధార్చన షోడశోపచారపు
టంతు తెలియక చేసి చెడితినయ్యా
ననుముట్టు సుఖము జంగమున
కర్పించు టెట్టులో తెలియని ఉపచారి నేను
స్థావరజంగమములు తెలియని పూజారి నేను
సిగ్గుచెడి జంగమమే ప్రాణలింగం
మనుచుంటి కూడల సంగమదేవా
Translated by: Dr. Badala Ramaiah
ಕನ್ನಡ ವ್ಯಾಖ್ಯಾನಅರಸನ ಆಜ್ಞೆಯ ಪ್ರಕಾರ ಕೆರೆಕಟ್ಟೆ ನಿರ್ಮಾಣದಂಥ. ಸಾರ್ವಜನಿಕ ಕಾರ್ಯಗಳಿಗಾಗಿ ಶ್ರಮದಾನವನ್ನು ಮತ್ತು ಯುದ್ಧ ಸಮಯದಲ್ಲಿ ಸರಕುಸಾಗಣೆಯಂಥ ಸಮರಕಾರ್ಯಗಳನ್ನು ಆಯಾ ಪ್ರದೇಶದ ಜನರು “ಬಿಟ್ಟಿ”ಯಾಗಿ ಮಾಡಬೇಕಾಗಿತ್ತು-ಇದು ರಾಜಸೇವೆ. ಅದಕ್ಕೆ ರಾಜನ ಮನ್ನಣೆಯೂ ಸಿಗುತ್ತಿತ್ತು.
ಆದರೆ ಕೆಟ್ಟ ಮಂತ್ರಿಗಳು ಮತ್ತು ಕೆಟ್ಟ ಅಧಿಕಾರಿಗಳು ರಾಜನ ಗಮನಕ್ಕೆ ತಾರದೆ ಮಿಕ್ಕಂತೆಯೂ ನ್ಯಾಯಬಾಹಿರವಾಗಿ ಕೆಲವು ಬಿಟ್ಟಿ ಕೆಲಸಗಳನ್ನು ಜನರಿಂದ ಮಾಡಿಸಿಕೊಳ್ಳುತ್ತಿದ್ದರು. ಈ ಕೆಲಸಗಳೇ “ಅರಸರಯದ ಬಿಟ್ಟಿ”. ಇದಕ್ಕೆ ಕೂಲಿಯ ಮಾತಿರಲಿ-ರಾಜನ ಕೃಪೆಗೂ ಅವಕಾಶವಿಲ್ಲವಾಗಿ-ಆ ಜನರ ಶ್ರಮವೆಲ್ಲಾ ದಂಡವಾಗುತ್ತಿತ್ತು.
ಅದರಂತೆ ಜಂಗಮಪುರಸ್ಸರವಾಗದ (ಶಿವ)ಲಿಂಗಪೂಜೆಯು ಅರಸರಿಯದ ಬಿಟ್ಟಿಯಂತೆ-ದಂಡವೆನ್ನುತ್ತಿರುವರು ಬಸವಣ್ಣನವರು. ಜಂಗಮಸತ್ಕಾರದಿಂದ ಪರಿಸಮಾಪ್ತಿಗೊಳ್ಳದೆ-ಲಿಂಗಕ್ಕೆ ಮಾಡುವ ಅಷ್ಟವಿಧಾರ್ಚನೆ ಷೋಡಶೋಪಚಾರವೆಲ್ಲಾ ದಂಡವಾಗಿ-ಶಿವನ ಕೃಪೆ ಸಾಧ್ಯವಾಗದೆಂಬುದಭಿಪ್ರಾಯ.
ಸ್ಥಾವರರೂಪವಾದ(ಇಷ್ಟ)ಲಿಂಗವು ಪೂಜೆಗೊಳ್ಳುವುದು ಜಂಗಮ(ಲಿಂಗ)ದ ಮೂಲಕವೇ ಎಂಬುದನ್ನರಿಯದ ಲಿಂಗಪೂಜೆಯನ್ನಷ್ಟೇ ಡಂಬಾಚಾರವಾಗಿ ಮಾಡುತ್ತಿದ್ದೇನೆ-ಮತ್ತೆಯೂ ನಾಚಿಕೆಯಿಲ್ಲದೆ ಜಂಗಮವೇ ನನಗೆ ಪ್ರಾಣಲಿಂಗವೆಂದು ಗಳಹುತ್ತಿದ್ದೇನೆಂದು ಬಸವಣ್ಣನವರು ಸ್ವವಿಮರ್ಶೆ ಮಾಡಿಕೊಳ್ಳುತ್ತಿರುವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.