Hindi Translationस्थावर और जंगम को एक कहकर विवाद करता हूँ,
मैं ठोकर खाता हूँ, मैं स्वाभाविक नहीं हूँ
निज को उभय-लिंग-संगी कहता हूँ,
यह बात न जलायेगी कूड़लसंगमदेव ?
Translated by: Banakara K Gowdappa
English Translation To Static and Dynamic are but one,'
I answer in return!
I stumble yet, lacking sincerity.
Not mine, O Lord, the poise of mind!
I claim to be
A kin to both;
But the word itself
Burns me forthwith,
O Kūḍala Saṅgama Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఅష్టవిధార్చన షోడశోపచారము
ప్రభుడెరుగని వెట్టిచాకిరి నాది
స్పర్శసుఖము జంగమున కర్పింప
తెలియని ఉపచారి నేను
స్థావరజంగమ మెఱుగని పూజారినేను
కూడల సంగయ్య! సిగ్గుచెడి,
మఱిమఱి జంగమమే ప్రాణమనుచుంటి
Translated by: Dr. Badala Ramaiah
ಕನ್ನಡ ವ್ಯಾಖ್ಯಾನಸ್ಥಾವರ(ಇಷ್ಟ)ಲಿಂಗ-ಜಂಗಮಲಿಂಗವೆಂಬ ಉಭಯವೂ ಸಮಾನವೆಂದು ಹೇಳುತ್ತೇನೆ-ಆದರೆ ಜಂಗಮಕ್ಕೆ ಪ್ರತ್ಯುತ್ತರ ಕೊಡುತ್ತೇನೆ. ಹೀಗೆ ನಾನು ನಡೆವಳಿಯಲ್ಲಿ ಮುಗ್ಗರಿಸುತ್ತಿದ್ದೇನೆ. ಕಾರಣ : ನಾನು ಸಹಜ(ಸಾಚಾ)ನೂ ಅಲ್ಲ, ಸಮ್ಯಕ್ಜ್ಞಾನಿಯೂ ಅಲ್ಲ, ಸಾಚಾ ಆಗಿದ್ದರೆ ಹೇಳಿದಂತೆ ಮಾಡಲು ಪ್ರಯತ್ನಿಸುತ್ತಿದ್ದೆ, ಸಮ್ಯಕ್ಜ್ಞಾನಿಯಾಗಿದ್ದರೆ-ತಪ್ಪುತ್ತಿರಲಿಲ್ಲ.
ಮರಳಿಯೂ ನಾನು ಸ್ಥಾವರಲಿಂಗ-ಜಂಗಮಲಿಂಗವೆಂಬೆರೆಡರ ಸಮಾನ ಉಪಾಸಕನೆಂದು ಹೇಳಿಕೊಳ್ಳುತ್ತಿರುವ ಈ ಮಾತು ಉರಿಯಾಗಿ ನನ್ನ ಬಾಯನ್ನೇ ಸುಡಬಾರದೇಕೆ ಎನ್ನುತ್ತಿರುವರು ಬಸವಣ್ಣನವರು.
ವಿ : ಸ್ಥಾವರಲಿಂಗವೆಂದರೆ ದೇವಾಲಯದ ಶಿವಲಿಂಗವೇ ಹೊರತು ಮೈಮೇಲೆ ಧರಿಸುವ ಇಷ್ಟಲಿಂಗವಲ್ಲವೆಂದು ಜನರು ತಪ್ಪು ತಿಳಿದಿರುವರು. ಹೀಗಾಗಿ ಕೆಲವರು ಕೂಡಲ ಸಂಗಮ ಕ್ಷೇತ್ರದ ಶಿವಲಿಂಗವು ನೀರುಪಾಲಾದರೆ ಬಸವತತ್ತ್ವಕ್ಕೇನೂ ಅಪಚಾರಮಾಡಿದಂತಾಗುವುದಿಲ್ಲವೆನ್ನುತ್ತ-“ಸ್ಥಾವರಕ್ಕವಳಿವುಂಟು ಜಂಗಮಕ್ಕಳಿವಿಲ್ಲ”ವೆಂಬ ಬಸವಣ್ಣನವರ ವಚನ(823)ವನ್ನೇ ಉಲ್ಲೇಖಿಸುವರು. ಅಂಥವರು ಈ 383ನೇ ವಚನವನ್ನು ಗಮನಿಸಬೇಕು. ಇಲ್ಲದಿದ್ದರೆ ಅವರು ತಮ್ಮ “ಇಷ್ಟಲಿಂಗ” ವನ್ನೂ ನೀರಿಗೆಸೆಯಬೇಕಾಗುವುದು-ಅದೂ ಬಸವತತ್ತ್ವಸಮ್ಮತವೇ ಆದೀತು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.