Hindi Translationलांछन देख विश्वास करता हूँ,
उनका अंतरंग तुम ही जानो
मुझको भृत्यवृत्ति के सिवा
राजाओं का समाचार क्यों?
कूडलसंगमदेव, तव शरण
मुक्ता-मणि के साँचे हैं ॥
Translated by: Banakara K Gowdappa
English Translation I see the robes and I believe:
Thou know'st the secrets of their hearts!
Enough unto the drudge his drudgery:
What are to me the King's affairs?
Thy Śaraṇās, Kūḍala Saṅgama Lord,
Are of the stamp of gems and pearls.
Translated by: L M A Menezes, S M Angadi
Tamil Translationதிருச்சின்னமணிந்தோனைக் கண்டு நம்புவேன்
அவருடைய திருவுள்ளத்தை நீயே அறிவாய்
தொண்டனுக்குத் தொண்டனின் பணியல்லதே
அரசனைக் குறித்த செய்தி நமக்கு எதற்கு ஐயனே?
கூடல சங்கமதேவனே உம்மடியார்
இரத்தின, முத்தின் அச்சனையவரன்றோ
Translated by: Smt. Kalyani Venkataraman, Chennai
Telugu Translationలాంఛనము చూచి నమ్మెద
ఒక వారి యంతరంగము నీకే తెలుసు
భృత్యునకు భృత్యాచారమె కాని
స్వామి సంగతి నా కేలనయ్యా?
స్వచ్ఛమగు రత్నమౌక్తికములు
నీ శరణులు కూడల సంగమ దేవ!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶೈವಲಾಂಛನವಾದ ವಿಭೂತಿ ಮುಂತಾದುದರ ಬಗ್ಗೆ ನನಗೆ ವಿಶ್ವಾಸವಿದೆ-ಆದರೆ ಅದನ್ನು ಬಹಿರಂಗದಲ್ಲಿ ಧರಿಸಿ ಬಂದವರ ಅಂತರಂಗದಲ್ಲಿ ತಕ್ಕ ಘನತೆಯಿದೆಯೋ ಇಲ್ಲವೋ ನನಗೆ ತಿಳಿಯದು. ಶಿವನೇ, ನೀನು ಸರ್ವಾಂತರ್ಯಾಮಿಯಾದುದರಿಂದ-ಅವರ ಅಂತರಂಗವನ್ನು ನೀನೇ ಬಲ್ಲೆ. ನನ್ನ ಕರ್ತವ್ಯವಾದರೋ-ಎಲ್ಲಿ ಶಿವಲಾಂಛನವಿದೆಯೋ ಅಲ್ಲಿ ಭಕ್ತಿ ಮಾಡುವುದಷ್ಟೇ. ನಾನು ಶಿವಶರಣರ ಗುಲಾಮನಾದುದರಿಂದ-ನನ್ನ ಪರಿಮಿತಿ ಅಷ್ಟಕ್ಕೇ ಸೀಮಿತ. ಅರಸರಂತಿರುವ ಶರಣರ ಅಂತರಂಗವನ್ನು ಪರೀಕ್ಷಿಸಿ ನೋಡುವ ವ್ಯರ್ಥ ಸಾಹಸ ನನಗೇಕೆ-ಎನ್ನುತ್ತ ಬಸವಣ್ಣನವರು ಆ ಶರಣರನ್ನು ರತ್ನಮೌಕ್ತಿಕದಚ್ಚು ಎಂದಿರುವರು. ಮುತ್ತುಗಳು ಆಕಾರ-ವರ್ಣ-ಗಾತ್ರಗಳಿಂದ ವಿವಿಧವಾದುವಾದರೂ-ಮೂಲಧಾತುವಿನಿಂದ ಅಮೂಲ್ಯವೇ ಆಗಿವೆಯೆನ್ನುವರು.
(ರತ್ನಮೌಕ್ತಿಕ : ಜಾತಿಮುತ್ತು, ಅಚ್ಚು : ಪ್ರತಿರೂಪ)
ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೂ ಭಕ್ತರನ್ನು ಶರಣರನ್ನು ಜಂಗಮರನ್ನು ಬಸವಣ್ಣನವರು (ಮೇಲಿನ ವಚನದಲ್ಲಿ ಹೇಳಿಕೊಂಡಿರುವಂತೆ) ಮನ್ನಿಸುತ್ತಿದ್ದರೆಂದು ತಿಳಿಯಬಾರದು. ಅನಾಚಾರಿಗಳೆಂಬುದು ತಮಗೆ ಸ್ಪಷ್ಟವಾದರೆ ಅವರಿಗೆ ಛೀಮಾರಿ ಹಾಕದೆ ಸುಮ್ಮನೆ ಬಿಡುತ್ತಿರಲಿಲ್ಲ (ನೋಡಿ ವಚನ 760). ಆದರೆ ಸಂಶಯಾಸ್ಪದವಾದಾಗ-ಪತ್ತೇ ಕಾರ್ಯದಲ್ಲಿ ತೊಡಗದೆ-ಶಿವನ ಮೇಲೆ ಭಾರ ಹಾಕಿ ಯಥೋಚಿತವಾಗಿ ಒಟ್ಟಾರೆಯಾಗಿ ಶಿವಭಕ್ತರನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಿದ್ದರು-ಎಂಬುದನ್ನಷ್ಟೇ ಈ ವಚನಾಧಾರದಿಂದ ನಾವು ತಿಳಿಯಬೇಕಾಗಿದೆ. ಇದೇ ಅರ್ಥದಲ್ಲಿ ಈ ಮುಂದಿನ ವಚನವನ್ನು ಅರ್ಥೈಸಬೇಕಾಗಿದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.